Chikkaballapur News: ವಿದ್ಯಾಭ್ಯಾಸದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಮಯ ಪಾಲನೆ, ಶಿಸ್ತು ಮುಖ್ಯ: ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಧರ್
ವಿದ್ಯಾಭ್ಯಾಸದ ಅವಧಿಯಲ್ಲಿ ಓದಿನತ್ತ ತೋರಿಸುವ ಉದಾಸೀನತೆ ಭವಿಷ್ಯದಲ್ಲಿ ಭಾರೀ ತೊಂದರೆಗಳಿಗೆ ಕಾರಣವಾಗಬಹುದು. ಈ ದಿನಗಳಲ್ಲಿ ಒಂದು ನಿಮಿಷವೂ ಬಹಳ ಅಮೂಲ್ಯ.ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ಅತ್ಯಂತ ಅಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವು ದರಿಂದ ವಿದ್ಯಾರ್ಥಿಗಳು ಇನ್ನಷ್ಟು ಕಷ್ಟಪಟ್ಟು ಓದಬೇಕು ಎಂದು ಸಲಹೆ ನೀಡಿದರು. ಜನ್ಮ ನೀಡಿದ ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು ಹಾಗೂ ಕಷ್ಟಕಾಲದಲ್ಲಿ ನೆರವಾದ ಸ್ನೇಹಿತರನ್ನು ಯಾವತ್ತೂ ಮರೆಯಬಾರದು
ವಿದ್ಯಾರ್ಥಿ ಜೀವನದಲ್ಲಿ ಸಮಯಪಾಲನೆ ಮತ್ತು ಶಿಸ್ತು ಮುಖ್ಯವೆಂದು ಭಾವಿಸಿ ಶಿಕ್ಷಣದಲ್ಲಿ ತೊಡಗಿದರೆ ಭವಿಷ್ಯ ಉತ್ತಮವಾಗಿರಲಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಧರ್ ಹೇಳಿದರು. -
ಚಿಕ್ಕಬಳ್ಳಾಪುರ: ವಿದ್ಯಾರ್ಥಿ ಜೀವನದಲ್ಲಿ ಸಮಯಪಾಲನೆ ಮತ್ತು ಶಿಸ್ತು ಮುಖ್ಯವೆಂದು ಭಾವಿಸಿ ಶಿಕ್ಷಣದಲ್ಲಿ ತೊಡಗಿದರೆ ಭವಿಷ್ಯ ಉತ್ತಮವಾಗಿರಲಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಧರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್( Amma Educational and Rural Development Trust) ನಡೆಸುತ್ತಿರುವ ಆಕಾಶ್ ಪದವಿ ಪೂರ್ವ ಕಾಲೇಜಿನ 11ನೇ ವರ್ಷದ ವಾರ್ಷಿಕೋತ್ಸವ ಸಮಾ ರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿನಯವೇ ವಿದ್ಯೆಗೆ ಭೂಷಣವಾಗಿದೆ ಎಂಬುದನ್ನು ಅರಿತು ನಿಮ್ಮ ಗುರಿಯತ್ತ ಸಾಗಬೇಕು. ಮುಂದೆ ಗುರಿಯಿರಲಿ ಹಿಂದೆ ಗುರುಗಳ ಅಭಯವಿರಲಿ ಆಗ ಮಾತ್ರ ಮನಸಿನಂತೆ ಮಹದೇವ ಕಾಣುತ್ತಾನೆ ಎಂದರು. ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಶಿಕ್ಷಣವಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ. ಸಮಯ ಕಳೆದರೆ ಅದು ಮತ್ತೆ ಮರಳಿ ಬರುವುದಿಲ್ಲ. ಮುಂದೇನು ಓದೋಣ ಎಂದು ತೀರ್ಮಾನ ಮಾಡುವಷ್ಟರಲ್ಲಿ ಅವಕಾಶಗಳು ಕೈ ತಪ್ಪಿರುತ್ತವೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: Chikkaballapur News: ಆರ್.ಬಿ.ತಿಮ್ಮಾಪುರ ಸೇರಿ ದಲಿತ ಸಚಿವರ ಮೇಲಿನ ಅಪಪ್ರಚಾರ ನಿಲ್ಲಿಸಿ: ಇಲ್ಲವೇ ಹೋರಾಟ ಎದುರಿಸಿ
ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ, ವಿದ್ಯಾಭ್ಯಾಸದ ಅವಧಿಯಲ್ಲಿ ಓದಿನತ್ತ ತೋರಿಸುವ ಉದಾಸೀನತೆ ಭವಿಷ್ಯದಲ್ಲಿ ಭಾರೀ ತೊಂದರೆಗಳಿಗೆ ಕಾರಣವಾಗಬಹುದು. ಈ ದಿನಗಳಲ್ಲಿ ಒಂದು ನಿಮಿಷವೂ ಬಹಳ ಅಮೂಲ್ಯ. ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅತ್ಯಂತ ಅಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳು ಇನ್ನಷ್ಟು ಕಷ್ಟಪಟ್ಟು ಓದಬೇಕು ಎಂದು ಸಲಹೆ ನೀಡಿದರು. ಜನ್ಮ ನೀಡಿದ ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು ಹಾಗೂ ಕಷ್ಟಕಾಲದಲ್ಲಿ ನೆರವಾದ ಸ್ನೇಹಿತರನ್ನು ಯಾವತ್ತೂ ಮರೆಯಬಾರದು ಎಂದು ಹೇಳಿದರು.
ಆಕಾಶ್ ಗ್ಲೋಬಲ್ ಶಾಲೆಯ ಆಡಳಿತಾಧಿಕಾರಿ ಅನಿಲ್ ಮಾತನಾಡಿ, ಕೇವಲ ಪುಸ್ತಕ ಜ್ಞಾನ ಪಡೆದು ತಾನು ವಿದ್ಯಾವಂತನೆಂದುಕೊಳ್ಳುವುದು ತಪ್ಪು. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ ಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಿದಾಗ ಮಾತ್ರ ನಿಜವಾದ ಅರ್ಥದಲ್ಲಿ ವಿದ್ಯಾ ವಂತರಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಂಡಿಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂರುಲ್ಲಾ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೋಷಕರು ಹಾಗೂ ಗುರುಗಳ ಪಾತ್ರ ಅತ್ಯಂತ ಮಹತ್ವ ದ್ದಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಅವರು ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೆ. ನಿಮ್ಮನ್ನು ತಿದ್ದುವ ಕಾರ್ಯವನ್ನು ಸದಾ ಮಾಡುತ್ತಾರೆ.ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದರು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿರುವುದು ಭವಿಷ್ಯಕ್ಕೆ ಹಾನಿಕಾರಕ ವಾಗಿದೆ. ಮೊಬೈಲ್ ಅನ್ನು ಸೀಮಿತವಾಗಿ, ಶಿಕ್ಷಣಕ್ಕೆ ಅನುಗುಣವಾಗಿ ಬಳಸಬೇಕು ಎಂದು ಸಲಹೆ ನೀಡಿದರು.ಈ ಹಂತದಲ್ಲಿ ಉದಾಸೀನತೆ ತೋರಿದರೆ ಮುಂದಿನ ಜೀವನದಲ್ಲಿ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ನ ಹಾಗೂ ಆಕಾಶ್ ಕಾಲೇಜಿನ ಅಧ್ಯಕ್ಷ ಗೊಳ್ಳು ಶ್ರೀನಿವಾಸ್ ಮಾತನಾಡಿ, ನಮ್ಮ ಸಂಸ್ಥೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಎಲ್ಲ ರೀತಿಯ ಉತ್ತಮ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಪೋಷಕರ ಕನಸು ಗಳನ್ನು ನನಸಾಗಿಸಬೇಕು. ಈ ಮಹತ್ವದ ಹಂತದಲ್ಲಿ ದುಷ್ಚಟಗಳಿಗೆ ಬಲಿಯಾಗಬಾರದು. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅನುಸರಿಸಿ ಸಮಾಜದಲ್ಲಿ ಏಳಿಗೆ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು.
ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಲಪತಿ ಗೌಡ, ವಿಶ್ವ ವಿವೇಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಚ್ ಎಸ್ ಆಂಜಿ, ಗಂಗರಾಜು, ಅಶ್ವಥ್ ನಾರಾಯಣ, ರಮೇಶ್, ನಾಗವೇಣಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.