Chikkaballapur News: ಪ್ರೇಕ್ಷಕರನ್ನು ಸೆಳೆಯುವ ಜನಪ್ರಿಯ ನಾಟಕಗಳು ಮೂಡಿಬರಬೇಕಿದೆ : ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಜೀವನವೇ ಒಂದು ನಾಟಕ ಶಾಲೆ. ನಾಟಕಗಳು ಅನಾದಿಕಾಲದಿಂದ ಬಂದಿರುವ ರಂಗಬಳುವಳಿ ಯಾಗಿವೆ. ಸಮಾಜದ ಸ್ಥಿತ್ಯಂತರಗಳನ್ನು, ಅಂಕುಡೊಂಕುಗಳನ್ನು ಐತಿಹಾಸಿಕ ಪೌರಾಣಿಕ, ಸಾಮಾ ಜಿಕ ನಾಟಕಗಳ ಮೂಲಕ ಜನರಿಗೆ ತಲುಪುತ್ತಿದ್ದವು. ಪ್ರತಿಭಾವಂತ ನಾಟಕಕಾರ ಕೃತಿಯನ್ನು ಬರೆಯಬ ಹುದು, ನಿರ್ದೇಶನ ಮಾಡಬಹುದು, ಅದರಲ್ಲಿ ನಟಿಸಲೂಬಹುದು

ಆಧುನಿಕತೆಯ ಭರಾಟೆಯಲ್ಲಿ ಮುಳುಗಿರುವ ಸಮಾಜವನ್ನು ರಂಗಭೂಮಿಯತ್ತ ಸೆಳೆಯಬೇಕಾದರೆ ಯುವ ಜನಪ್ರೀತಿಯ ಪ್ರರ‍್ಶಗಳು ನಡೆಯಬೇಕಿವೆ.ಏಕೆಂದರೆ ನಾಟಕಕಾರ ಕೃತಿಯಲ್ಲಿ ಜೀವಂತವಿದ್ದರೆ,ಕಲಾವಿದರು ರಂಗರೂಪದ ಪಠ್ಯ ಮತ್ತು ಪಾತ್ರದಲ್ಲಿ ಜೀವಂತವಿರುತ್ತಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಚಿಕ್ಕಬಳ್ಳಾಪುರ : ಆಧುನಿಕತೆಯ ಭರಾಟೆಯಲ್ಲಿ ಮುಳುಗಿರುವ ಸಮಾಜವನ್ನು ರಂಗಭೂಮಿಯತ್ತ ಸೆಳೆಯಬೇಕಾದರೆ ಯುವ ಜನಪ್ರೀತಿಯ ಪ್ರರ‍್ಶಗಳು ನಡೆಯಬೇಕಿವೆ. ಏಕೆಂದರೆ ನಾಟಕಕಾರ ಕೃತಿ ಯಲ್ಲಿ ಜೀವಂತವಿದ್ದರೆ,ಕಲಾವಿದರು ರಂಗರೂಪದ ಪಠ್ಯ ಮತ್ತು ಪಾತ್ರದಲ್ಲಿ ಜೀವಂತವಿರುತ್ತಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ನಗರದ ಸರಕಾರಿ ಮಹಿಳಾ ಪ್ರಥಮರ‍್ಜೆ ಕಾಲೇ ಜಿನ ಸಾವಿತ್ರಿಬಾಯಿ ಪುಲೆ ವೇದಿಕೆಯಲ್ಲಿ ನಡೆಯು ತ್ತಿರುವ ನಾಲ್ಕುದಿನಗಳ ರಂಗೋತ್ಸವದ ಎರಡ ನೇ ದಿನ ಪ್ರರ‍್ಶನಗೊಳ್ಳುತ್ತಿರುವ ಸಿರಿಗೆರೆಯ ಧಾತ್ರಿ ರಂಗಸಂಸ್ಥೆ ಕಲಾವಿದರು ನಟಿಸುತ್ತಿರುವ ಡಾ.ಎಂ. ರಾಮೇಗೌಡ ರಚಿತ ನವೀನ್ ಭೂಮಿ ನರ‍್ದೇಶನದ ಸರಸತಿಯಾಗಲೊಲ್ಲೆ ನಾಟಕಕ್ಕೆ ಚಾಲನೆ ನೀಡಿ ಅವರು ಮಾತಾಡಿದರು.
ಜೀವನವೇ ಒಂದು ನಾಟಕ ಶಾಲೆ. ನಾಟಕಗಳು ಅನಾದಿಕಾಲದಿಂದ ಬಂದಿರುವ ರಂಗಬಳುವಳಿ ಯಾಗಿವೆ. ಸಮಾಜದ ಸ್ಥಿತ್ಯಂತರಗಳನ್ನು, ಅಂಕುಡೊಂಕುಗಳನ್ನು ಐತಿಹಾಸಿಕ ಪೌರಾಣಿಕ, ಸಾಮಾ ಜಿಕ ನಾಟಕಗಳ ಮೂಲಕ ಜನರಿಗೆ ತಲುಪುತ್ತಿದ್ದವು. ಪ್ರತಿಭಾವಂತ ನಾಟಕಕಾರ ಕೃತಿಯನ್ನು ಬರೆಯಬಹುದು, ನಿರ್ದೇಶನ ಮಾಡಬಹುದು, ಅದರಲ್ಲಿ ನಟಿಸಲೂಬಹುದು. ಆದರೆ ಅದನ್ನು ಸವಿಯುವ ಪ್ರೇಕ್ಷಕರಿಲ್ಲದಿದ್ದರೆ ಎಲ್ಲವೂ ವ್ರ‍್ಥ.ಆಯೋಜಕರು ಇದನ್ನು ಮನಗಂಡು ಯಾರಿಗೆ ಇದನ್ನು ತಲುಪಿಸಲು ಮಾಡಿದ್ದಾರೆಯೋ ಅವರಿಗೆ ಮುಟ್ಟುವಲ್ಲಿ ಜಾಗೃತೆ ವಹಿಸಬೇಕು ಎಂದರು.
ಇದನ್ನೂ ಓದಿ: Chikkaballapur News: ಪೂಜ್ಯ ಸಪ್ತ ಋಷಿಗಳೇ ಆರತಿಯನ್ನು ಅರ್ಪಿಸಲು ಬರುತ್ತಾರೆ ಎಂಬ ನಂಬಿಕೆಯಿದೆ
ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಮತ್ತು ರಂಗಕಲೆಯು ಜೀವಂತವಿರುವುದೇ ಗ್ರಾಮೀಣ ಪ್ರದೇಶ ಮತ್ತು ಆ ಜನರಿಂದ ಮಾತ್ರ ಎಂಬುದು ನಿಜ. ಯಾಂತ್ರಿಕವಾದ ನಗರ ಜೀವನಕ್ಕೆ ಹೋಲಿಸಿದರೆ ಯಾವ ಬಿಂಕ ಬಿಗುಮಾನವೂ ಇಲ್ಲದೆ ಸಹಜವಾಗಿ ಬದುಕುವ ಹಳ್ಳಿಗಾಡಿನ ಜನರು ಅವರ ಬದುಕೇ ನಮಗೆ ಮಾದರಿಯಾಗುತ್ತದೆ. ಟಿವಿ ಸಿನಿಮಾ ಇಲ್ಲದ ಕಾಲದಲ್ಲಿ ಜನರಿಗೆ ಮನರಂಜನೆ ನೀಡುತ್ತಿ ದ್ದವು ನಾಟಕ, ಕೋಲಾಟ, ಬಯಲಾಟ ಕೇಳಿಕೆ,ಯಕ್ಷಗಾನವೇ ಆಗಿದ್ದವು.ತಂತ್ರಜ್ಞಾನ ಬಂದಂತೆ ಜನರ ಆಧ್ಯತೆಗಳೂ ಬದಲಾಗಿ ಇವೆಲ್ಲಾ ನೇಪತ್ಯಕ್ಕೆ ಸರಿಯುವಂತಾಗಿರುವುದು ದುರಂತ ಎಂದು ವಿಷಾಧಿಸಿದರು.

ಮಹಿಳಾ ಕಾಲೇಜಿನ ಪ್ರಾಂಶುಪಾಲರು ಮತ್ತು ಅವರ ಸಿಬ್ಬಂದಿಯ ಕಾಳಜಿಯಿಂದಾಗಿ ನಾಲ್ಕು ದಿನಗಳ ನಾಟಕೋತ್ಸವ ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ವಿದ್ಯಾರ್ಥಿನಿಯ ತಂಡ ವನ್ನು ಕಟ್ಟಿಕೊಂಡು ರಾಷ್ಟ್ರಕವಿ ಕುವೆಂಪು ಅವರ ಮಹಾರಾತ್ರಿ ನಾಟಕ ಪ್ರರ‍್ಶನದ ಮೂಲಕ ಅವರಲ್ಲಿನ ಪ್ರತಿಭಯನ್ನು ಹೊರ ತೆಗೆಯುವ ಕೆಲಸ ಮಾಡಿರುವ ನರ‍್ದೇಶಕ ಗ.ನ,ಅಶ್ವತ್ಥ್, ಸರಸತಿ ಯಾಗಲೊಲ್ಲೆ ನಾಟಕದ ಎಲ್ಲಾ ಕಲಾವಿಧರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸರಸತಿಯಾಗಲೊಲ್ಲೆ ನಾಟಕದ ಎಲ್ಲಾ ಪಾತ್ರಧಾರಿಗಳು ಪರಕಾಯ ಪ್ರವೇಶ ಮಾಡಿದ್ದಾರೆ ಎಂದು ಭಾವಿಸುತ್ತೇನೆ. 18ನೇ ಶತಮಾನದ ರ‍್ಮಠ ಆಚಾರ ವಿಚಾರಗಳನ್ನು ಈ ನಾಟಕದಲ್ಲಿ ಅತ್ಯಂತ ಸರ‍್ಥ ವಾಗಿ ಕಟ್ಟಿಕೊಡಲಾಗಿದೆ. ಅಂತೆಯೇ ಶಿಕ್ಷಣವನ್ನು ಬ್ರಾಹಣ್ಯದ ಕಬಂಧ ಬಾಹುಗಳಿಂದ ಬಿಡುಗಡೆ ಗೊಳಿಸಿ, ಸರ‍್ವತ್ರೀಕರಿಸಲು ಜ್ಯೋತಿಬಾಪುಲೆ, ಸಾವಿತ್ರಿಬಾಯಿ ಪುಲೆ ದಂಪತಿಗಳು ಪಟ್ಟ ಶ್ರಮ, ಬದಲಾವಣೆ ಬಯಸದವರ ನಡುವೆ ನಡೆಸಿದ ಹೋರಾಟವನ್ನು ಕಣ್ಣಿಗೆ ಕಟ್ಟುವಂತೆ ಪ್ರರ‍್ಶಿಸಿದ ಎಲ್ಲಾ ಕಲಾವಿದರೂ ಪ್ರತಿಭಾ ಸಂಪನ್ನರು. ಇಂತಹ ನಾಟಕ ಪ್ರರ‍್ಶನಕ್ಕೆ ನನ್ನನ್ನು ಆಹ್ವಾನಿಸಿದ ಪ್ರಾಂಶುಪಾಲರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ನಾಟಕೋತ್ಸವ ಯಶಸ್ವಿಯಾಗಲಿ ಎಂದು ಶುಭ ಕೋರುತ್ತೇನೆ ಎಂದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಸರಸತಿಯಾಗಲೊಲ್ಲೆ ನಾಟಕವನ್ನು 1 ಗಂಟೆಗೂ ಹೆಚ್ಚು ಕಾಲ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಿದರು.
ಈ ವೇಳೆ ಗಾ.ನ.ಅಶ್ವಥ್, ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ತತ್ತೂರು ಲೋಕೇಶಪ್ಪ, ಪ್ರೊ.ಹರೀಶ್ ಬಾಬು, ಡಾ.ರಾಮಕೃಷ್ಣಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಮೋಹನ್ ಕುಮಾರ್,ರ‍್ದಾರ್ ಚಾಂದ್ ಪಾಷ,ಕನ್ನಡ ಉಪನ್ಯಾಸಕರಾದ ಮುನಿರಾಜು ಎಂ ಅರಿಕೆರೆ, ಪ್ರೊ.ಕೃಷ್ಣಮರ‍್ತಿ, ವಿದ್ಯಾರ್ಥಿ ಗಳು ಪೋಷಕರು ಹಾಜರಿದ್ದರು.