ಬಡತನದಿಂದ ಬೆಳೆದು ರಾಜ್ಯಮಟ್ಟದ ಸಂಸ್ಥೆಯ ನಿರ್ದೇಶಕನಾಗಿರುವುದು ಹೆಮ್ಮೆ: ಪದ್ಮರಾಜ್ ಜೈನ್
ತಾಲ್ಲೂಕಿನ ಕುದುರೆಬ್ಯಾಲ್ಯ ಗ್ರಾಮದ ಹರಿಪ್ರಕಾಶ್ ಅವರ ಪುತ್ರನಾದ ತಾನು ಸಾಮಾನ್ಯ ಕುಟುಂಬ ದಲ್ಲಿ ಹುಟ್ಟಿ, ಹಲವು ಕಷ್ಟ-ಸವಾಲುಗಳನ್ನು ಎದುರಿಸಿ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರ ದಲ್ಲಿ ಗುರುತಿಸಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಲವು ವರ್ಷಗಳಿಂದ ಪಕ್ಷದ ಸಂಘಟನೆ ಮತ್ತು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.
-
ಗೌರಿಬಿದನೂರು: ಬಡತನದ ಹಿನ್ನೆಲೆಯಿಂದ ಬೆಳೆದು, ಪರಿಶ್ರಮ ಮತ್ತು ಸೇವೆಯ ಮೂಲಕ ಕರ್ನಾಟಕ ಸರ್ಕಾರದ ಅಧೀನದ ಪ್ರತಿಷ್ಠಿತ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಲಿಮಿಟೆಡ್ (ಜೆಎಲ್‌ಆರ್) ಸಂಸ್ಥೆಯ ನಿರ್ದೇಶಕನಾಗಿ ಆಯ್ಕೆಯಾಗಿರುವುದು ಸಂತಸ ಹಾಗೂ ಹೆಮ್ಮೆಯ ಸಂಗತಿ. ಈ ಜವಾಬ್ದಾರಿಯನ್ನು ಸಮಾಜಸೇವೆ ಮತ್ತು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಮೀಸಲಿಡುತ್ತೇನೆ ಎಂದು ನೂತನ ನಿರ್ದೇಶಕ ಕೆ.ಎಚ್. ಪದ್ಮರಾಜ್ ಜೈನ್ ತಿಳಿಸಿದರು.
ತಾಲ್ಲೂಕಿನ ಕುದುರೆಬ್ಯಾಲ್ಯ ಗ್ರಾಮದ ಹರಿಪ್ರಕಾಶ್ ಅವರ ಪುತ್ರನಾದ ತಾನು ಸಾಮಾನ್ಯ ಕುಟುಂಬ ದಲ್ಲಿ ಹುಟ್ಟಿ, ಹಲವು ಕಷ್ಟ-ಸವಾಲುಗಳನ್ನು ಎದುರಿಸಿ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರ ದಲ್ಲಿ ಗುರುತಿಸಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಲವು ವರ್ಷಗಳಿಂದ ಪಕ್ಷದ ಸಂಘಟನೆ ಮತ್ತು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.
ಇದನ್ನೂ ಓದಿ: Gauribidanur News: ‘ಹಳ್ಳಿ ಗುಗ್ಗು’ ಹೇಳಿಕೆ ಗ್ರಾಮೀಣ ಜನರ ಆತ್ಮಗೌರವಕ್ಕೆ ಮಾಡಿದ ಅವಮಾನ: ಮಂಜುನಾಥ್ ರೆಡ್ಡಿ
ತಮ್ಮನ್ನು ಗುರುತಿಸಿ ಈ ಜವಾಬ್ದಾರಿ ನೀಡಲು ಅವಕಾಶ ಕಲ್ಪಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivakumar) ಹಾಗೂ ಸಹಕರಿಸಿದ ಪಕ್ಷದ ಹಿರಿಯ ನಾಯಕರು ಮತ್ತು ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ ಅವರು, ನಾಯಕತ್ವ ಇಟ್ಟಿರುವ ನಂಬಿಕೆಯನ್ನು ಪ್ರಾಮಾಣಿಕ ಕೆಲಸದ ಮೂಲಕ ಉಳಿಸಿಕೊಳ್ಳುವುದಾಗಿ ಹೇಳಿದರು.
ಜೆಎಲ್‌ಆರ್(JLR) ಸಂಸ್ಥೆಯ ಮೂಲಕ ರಾಜ್ಯದ ನೈಸರ್ಗಿಕ ಸಂಪತ್ತು, ವನ್ಯಜೀವಿ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು, ಗ್ರಾಮೀಣ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು ಮತ್ತು ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದರು.
ಜತೆಗೆ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಿ, ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ರೀತಿಯಲ್ಲಿ ಸಾರ್ವಜನಿಕ ಜೀವನ ಮುಂದುವರಿಸುವುದಾಗಿ ಹೇಳಿದ ಅವರು, ತಮ್ಮನ್ನು ಬೆಂಬಲಿಸಿದ ಕುದುರೆ ಬ್ಯಾಲ್ಯ ಗ್ರಾಮದ ಹಿರಿಯರು, ಕ್ಷೇತ್ರದ ಜನತೆ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದರು.