ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MP Dr.K.Sudhakar: ಸಂಸದ ಡಾ.ಕೆ.ಸುಧಾಕರ್ ಅವರಿಗೆ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶವಿದೆ : ಎಸ್.ಆರ್.ವಿಶ್ವನಾಥ್

ಮುಂದಿನ ಸಾರಿ ಹೈಕಮಾಂಡ್ ಸುಧಾಕರ್ ಅವರಿಗೆ ಕೊಟ್ಟರೆ ನಾವು ದೂಸರಾ ಮಾತನಾಡುವು ದಿಲ್ಲ. ಅವರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳಿಸುತ್ತೇವೆ. ಕೇಂದ್ರದಲ್ಲಿ ಅವರಿಗೆ ಭವಿಷ್ಯವಿದ್ದು ಮಂತ್ರಿಯಾಗುವ ಅವಕಾಶಗಳೂ ಇವೆ.ಅವರು ಮಂತ್ರಿಯಾದರೆ ಇಲ್ಲಿ ಸಂದೀಪ್‌ರೆಡ್ಡಿ ಅವರಂತಹ ಯುವಕರನ್ನು ಬೆಳೆಸುವ ಕೆಲಸ ಮಾಡುವರು ಎಂಬ ವಿಶ್ವಾಸವಿದೆ

ಸಂಸದ ಡಾ.ಕೆ.ಸುಧಾಕರ್ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶವಿದೆ

-

Ashok Nayak
Ashok Nayak Feb 5, 2026 10:34 PM

ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್(MP Dr.K.Sudhakar) ಅಂತಹ ನಾಯಕರ ಅವಶ್ಯಕತೆ ಭಾರತ ದೇಶಕ್ಕಿದೆ. ರಾಜ್ಯದಲ್ಲಿ ಮಂತ್ರಿಗಳಾಗಿ ಅವರು ಮಾಡಿರುವ ಕೆಲಸದ ಅನುಭವ ದೇಶದ ಜನತೆಗೆ ಸಿಗಬೇಕು ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್(MLA from Yalahanka Constituency S.R. Vishwanath) ತಿಳಿಸಿದರು.

ನಗರ ಹೊರವಲಯ ಕಂದವಾರ ಗ್ರಾಮದ ನಿರಾಶ್ರಿತರ ಕಾಲೋನಿಯಲ್ಲಿ ಭಗತ್‌ಸಿಂಗ್ ಚಾರಿಟೇ ಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 10 ಸಾವಿರ ಬೆಡ್‌ಶೀಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಅಲೋಕ್‌ಗೆ ಟಿಕೆಟ್ ಕೇಳಿದೆವು.ಹೈಕಮಾಂಡ್ ಡಾ.ಕೆ.ಸುಧಾಕರ್ ಅವರಿಗೆ ನೀಡಿದರು. ಮರು ಮಾತಾಡದೆ ಶಿರಸಾವಹಿಸಿ ಕೆಲಸ ಮಾಡಿ 86ಸಾವಿರ ಮತಗಳ ಅಂತರದಿಂದ ಗೆಲ್ಲಿಸಲಾಯಿತು. ಸುಧಾಕರ್ ಅವರ ಅವಶ್ಯಕತೆ ದೇಶಕ್ಕಿದೆ ಎಂದರು.

ಮುಂದಿನ ಸಾರಿ ಹೈಕಮಾಂಡ್ ಸುಧಾಕರ್ ಅವರಿಗೆ ಕೊಟ್ಟರೆ ನಾವು ದೂಸರಾ ಮಾತನಾಡುವು ದಿಲ್ಲ. ಅವರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳಿಸುತ್ತೇವೆ. ಕೇಂದ್ರದಲ್ಲಿ ಅವರಿಗೆ ಭವಿಷ್ಯವಿದ್ದು ಮಂತ್ರಿ ಯಾಗುವ ಅವಕಾಶಗಳೂ ಇವೆ.ಅವರು ಮಂತ್ರಿಯಾದರೆ ಇಲ್ಲಿ ಸಂದೀಪ್‌ರೆಡ್ಡಿ ಅವರಂತಹ ಯುವಕರನ್ನು ಬೆಳೆಸುವ ಕೆಲಸ ಮಾಡುವರು ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: SR Vishwanath: ಜಿಬಿಎ ಸಂಪೂರ್ಣ ಸ್ಥಳೀಯ ಸಂಸ್ಥೆಗಳ ಅಧಿಕಾರ ಕಿತ್ತುಕೊಳ್ಳುವ ಪ್ರಾಧಿಕಾರ: ಎಸ್.ಆರ್.ವಿಶ್ವನಾಥ್

ಸಂದೀಪ್‌ರೆಡ್ಡಿ ಅಂತಹವರ ಧ್ವನಿ ವಿಧಾನಸೌಧದಲ್ಲಿ ಬರಬೇಕು. ಇತ್ತೀಚೆಗೆ ಯಾವ್ಯಾವುದೋ ಧ್ವನಿಗಳು ಅಲ್ಲಿ ಕೇಳಿಸುತ್ತಿವೆ. ಶಿವಲಿಂಗೇಗೌಡನಂತವು ಕೂಡ ಅವೆ. ನಾಯಿಗಳು ಕೋತಿಗಳು ಕುರಿಗಳು ಎಂದು ಏನೇನೋ ಮಾತಾಡುತ್ತಿದ್ದಾನೆ. ನಾವು ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿದ್ದೆವು. ನಮಗೆ ಆತನ ಧ್ವನಿ ಕೇಳಿಸುವುದಿಲ್ಲ. ಮಧ್ಯಾಹ್ನ ಊಟಕ್ಕೆ ಬಿಟ್ಟ ಮೇಲೆ ಮೊಬೈಲ್‌ನಲ್ಲಿ ನೋಡಿದರೆ ಏನೇನೋ ಮಾತಾಡಿರುವುದು ಬಂದಿದೆ. ಇಷ್ಟೊಂದು ಕೆಟ್ಟದಾಗಿ ಬೈದಿದ್ದಾರಲ್ಲ ಎಂದು ಊಟದ ನಂತರ ನಾವು ಹಿಡಿದುಕೊಂಡಿವಿ. ಆಗ ನಾನು ಅತನಿಗೆ ಒಂದು ಮಾತು ಹೇಳಿದೆ. ಇಲ್ಲಿ ಮಾಧ್ಯಮದವರು ರೆಕಾರ್ಡ್ ಮಾಡುತ್ತಿದ್ದಾರೆ. ಹೇಳುವುದು ಬೇಡ. ಅವರಿಗೆ ಅನ್ನುವ ಮಾತು ನನಗೆ ಹೇಳಿದ್ದರೆ ಮುಂದಿಕ್ಕೆ ಏನು ಮಾಡುತ್ತಿದ್ದೆ ಎಂದು ಹೇಳಿದ್ದೇನೆ ಎನ್ನುವ ಮೂಲಕ ಶಿವಲಿಂಗೇಗೌಡರ ವಿರುದ್ಧ ಹರಿಹಾಯ್ದರು.

ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡುವುದು ಮಾಡಬಾರದು. ನಾನು ತಪ್ಪು ಮಾಡಿದ್ದರೆ ನನ್ನ ಬೈಯಬೇಕು.ಅದನ್ನು ಬಿಟ್ಟು ಮನೆಯ ಹೆಣ್ಣುಮಕ್ಕಳನ್ನು ಎಳೆತಂದು ಬೈಯುವುದು ಸರಿಯಾದ ಕ್ರಮವಲ್ಲ. ಆತ ಹುಚ್ಚನ ಥರ ಆಗಿಬಿಟ್ಟಿದ್ದಾನೆ. ಮೊದಲು ಜೆಡಿಎಸ್‌ನಲ್ಲಿ ಇದ್ದ. ದೇವೇ ಗೌಡರು ಏನಾದರೂ ಅಂದರೆ ತಿರುಗಿ ಬೀಳುತ್ತಿದ್ದ.ಈಗ ಕಾಂಗ್ರೆಸ್‌ನಲ್ಲಿದ್ದಾನೆ. ದೇವೇಗೌಡರ ಶಿಷ್ಯ ನೀನು ಎಂದರೆ ಬೈಯ್ತಾನೆ.ಈತರ ಬಣ್ಣ ಬದಲಿಸುವ ಕೆಲಸ ಮಾಡಬಾರದು. ನಾವು ಒಂದು ಕಡೆ ರ‍್ತೀವಿ. ಒಂದು ಕಡೆ ರಾಜಕಾರಣ ಮಾಡುತ್ತೇವೆ ಎಂದರು.

ಇನ್ನೂ ಎರಡುವರೆ ವರ್ಷ ಐತೆ. ಯಾರೂ ಕೂಡ ಇಷ್ಟು ಬೇಗ ಸಮಾಜಸೇವೆ ಅದು ಇದು ಎಂದು ಮಾಡುವುದಿಲ್ಲ. ಕೊನೇ 6 ತಿಂಗಳು ಇದ್ದಾಗ ಕೆಲಸ ಶುರು ಮಾಡುತ್ತಾರೆ. ಆಗಲೇ ಜನಗಳ ಮೇಲೆ ಪ್ರೀತಿ ಉಕ್ಕುವುದು ಹೆಚ್ಚು. ಅಣ್ಣ ಹೇಗಿದ್ದೀಯಾ? ಎನ್ನುತ್ತಾ ಹೆಗಲ ಮೇಲೆ ಕೈಹಾಕುತ್ತಾರೆ. ಹೆಂಡತಿ ಹೇಗಿದ್ದಾಳೆ ಎಂದರೆ ಹೋಗಯ್ಯೋ ಅವಳು ಸತ್ತು ಎರಡು ವರ್ಷ ಆಯಿತು ಎನ್ನುತ್ತಾರೆ. ಸುಮ್ಮನೆ ಕೇಲೋದು, ಡೌವ್ ಹೊಡೆಯೋದು.ಈ ಕೆಲಸ ಸಂದೀಪ್‌ರೆಡ್ಡಿ 8 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.ಎAದೂ ಕೂಡ ರಾಜಕೀಯಕ್ಕೆ ಬರುವ ಮಾತಾಡಿರಲಿಲ್ಲ. ಇವತ್ತೇ ತಮ್ಮ ಮನಸ್ಸಿನ ಇಂಗಿತವನ್ನು ಹೇಳಿಕೊಂಡಿದ್ದಾರೆ.

ನನಗೆ ಅವಕಾಶ ಕೊಡಿ ಎಂದು ನಿಮ್ಮನ್ನು ಕೇಳಿಕೊಂಡಿದ್ದಾರೆ.ಇದಕ್ಕೆ ನಮ್ಮ ವರಿಷ್ಟರು ತೀರ್ಮಾನ ತೆಗೆದುಕೊಳ್ಳಬೇಕು.ಅವರು ಕ್ಷೇತ್ರದ ಅಭ್ಯರ್ಥಿಯ ಜನಪ್ರಯತೆ ಏನು ಎಂಬುದನ್ನೆಲ್ಲಾ ಸರ್ವೆ ಮಾಡುತ್ತಾರೆ.ಜೆಡಿಎಸ್ ಬಿಜೆಪಿ ಒಟ್ಟಿಗೆ ಮುಂದಿನ ಚುನಾವಣೆಗೆ ಹೋಗುತ್ತೇವೆ. ನೀವು ಹೇಳಬೇಕು. ನಿಮಗೆ ಎಂತಹ ಅಭ್ಯರ್ಥಿಬೇಕು ಎಂಬುದನ್ನು ತೀರ್ಮಾನಿಸಿ ಎಂದರು.

ರಾಜಕಾರಣ ಕೆಟ್ಟದ್ದಲ್ಲ.ರಾಜಕಾರಣಿಗಳು ಕೆಟ್ಟವರು.ಮೋದಿ ಎಂದರೆ ಟ್ರಂಪ್ ಭಯಪಡುತ್ತಾರೆ. ಯೂರೋಪ್ ಒಪ್ಪಂದ ಭಾರತಕ್ಕೆ ಅನುಕೂಲ ಆಗಲಿದೆ.ನಮ್ಮ ತಾಯಿ ಊರು ಸೊಪ್ಪಳ್ಳಿ. ಆ ನೆನಪಿನ ಕಾರಣಕ್ಕಾಗಿ ಇಲ್ಲೊಂದಿಷ್ಟು ಭೂಮಿ ಕೊಂಡಿದ್ದೇನೆ. ಒಳಗೆ ವಿಷ ಇಟ್ಟುಕೊಂಡು ಮೇಲೆ ಮೇಲೆ ಬೆಣ್ಣೆ ಮಾತಾಡುವವರನ್ನು ನಂಬಬೇಡಿ.ಎತ್ತಿನಹೊಳೆ ನೀರು ಸಿಕ್ಕರೆ ನಿಮ್ಮನ್ನು ಹಿಡಿಲಾಗದು. ಸಂದೀಪ್‌ರೆಡ್ಡಿ ಇಲ್ಲಿ ಎಂಎಲ್‌ಎ ಆಗಲು ಲೋಕಸಭೆ ಸದಸ್ಯ, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ ಎಲ್ಲರೂ ಅನುಕೂಲ ಮಾಡಿಕೊಡಬೇಕು.ಮತ ಹಾಕಿದವರಿಗೆ ಮೋಸ ಮಾಡಬಾರದು. ಮತದಾನದ ವಿಚಾರದಲ್ಲಿ ಬಡವ ಶ್ರೀಮಂತ ಇಬ್ಬರೂ ಒಂದೇ ಎಂದರು.

ಈ ವೇಳೆ, ಯಲಹಂಕ ಕ್ಷೇತ್ರದ ಯುವ ಮುಖಂಡ ಅಲೋಕ್ ವಿಶ್ವನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ,ಡಾ.ಹೆಚ್.ಎಸ್.ಮಧುಕರ್, ರಿಯಾಝ್, ಯಲಹಂಕ ವೆಂಕಟೇಶ್, ಮಂಜು ನಾಥ್, ಈಶ್ವರ್,ಎಸ್ಸಿ ಮೋರ್ಚಾ ಅಧ್ಯಕ್ಷ ಮುರಳಿ, ಚಿತ್ರ ಸಾಹಿತಿ ವರದರಾಜ್, ಎಸಿ.ಮುನಿಕೃಷ್ಣ, ಎಸ್.ಟಿ.ಡಿ ಮೂರ್ತಿ,ಕೊಂಡೇನಹಳ್ಳಿ ಮುರಳಿ, ಹೊಸ ಹುಡ್ಯ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಜಗದೀಶ್, ಬಿಜೆಪಿ ತಾಲೂಕು ಅಧ್ಯಕ್ಷೆ ಮಲ್ಲಿಕಾ, ಪವನ್ ಕುಮಾರ್, ಮಂಜುನಾಥ್, ಡಾ.ಶಶಿಕುಮಾರ್,ಕರವೇ ರಾಜ್ಯಾಧ್ಯಕ್ಷ ಅಗಲಗುರ್ಕಿ ಚಲಪತಿ ಮತ್ತಿತರರು ಇದ್ದರು.