ಅತಿರೇಕದ ಸಂಭ್ರಮಾಚರಣೆ; ಕೈಲ್ ಜೇಮಿಸನ್‌ಗೆ ಡಿಮೆರಿಟ್ ಪಾಯಿಂಟ್
IPL 2026: ವೈಭವ್ ಸೂರ್ಯವಂಶಿ ಮತ್ತು ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ನಡುವಿನ ನಿರೀಕ್ಷಿತ ಮುಖಾಮುಖಿಯಿಂದಾಗಿ ಈ ಪಂದ್ಯವು ಗಮನಾರ್ಹ ಸಂಚಲನ ಮೂಡಿಸಿತ್ತು. ಆದರೆ, ಜೇಮಿಸನ್ ಕೇವಲ ಎರಡನೇ ಓವರ್‌ನಲ್ಲಿ ಹದಿಹರೆಯದ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡುವ ಮೂಲಕ ಗಮನ ಸೆಳೆದರು.
Kyle Jamieson -
ಜೈಪುರ, ಮೇ 2: ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi) ವಿಕೆಟ್ ಕಿತ್ತು ಅತಿರೇಕದ ಸಂಭ್ರಮಾಚರಣೆ ಮಾಡಿ ಐಪಿಎಲ್(IPL 2026) ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕೈಲ್ ಜೇಮಿಸನ್(Kyle Jamieson)ಗೆ ಎಚ್ಚರಿಕೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಜೈಪುರದಲ್ಲಿ ಶುಕ್ರವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಈ ಘಟನೆ ಸಂಭವಿಸಿತು.
ವೈಭವ್ ಸೂರ್ಯವಂಶಿ ಮತ್ತು ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ನಡುವಿನ ನಿರೀಕ್ಷಿತ ಮುಖಾಮುಖಿಯಿಂದಾಗಿ ಈ ಪಂದ್ಯವು ಗಮನಾರ್ಹ ಸಂಚಲನ ಮೂಡಿಸಿತ್ತು. ಆದರೆ, ಜೇಮಿಸನ್ ಕೇವಲ ಎರಡನೇ ಓವರ್‌ನಲ್ಲಿ ಹದಿಹರೆಯದ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡುವ ಮೂಲಕ ಗಮನ ಸೆಳೆದರು. ಅನೇಕರು ನಿರೀಕ್ಷಿಸಿದ್ದ ರೋಮಾಂಚಕಾರಿ ಹೋರಾಟವನ್ನು ಕಡಿಮೆ ಮಾಡಿದರು.
ಜೇಮಿಸನ್ ಎಸೆದ ಮೊದಲ ಓವರ್‌ನ 4ನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ ಬೌಂಡರಿ ಬಾರಿಸಿದರು. ಆದರೆ ಮುಂದಿನ ಎಸೆತವನ್ನು ಯಾರ್ಕರ್ ಎಸೆದು ಸೂರ್ಯವಂಶಿಯನ್ನು ಕ್ಲೀನ್ ಬೌಲ್ಡ್ ಮಾಡಿದರು. ಔಟ್ ಮಾಡಿದ ಖುಷಿಯಲ್ಲಿ ಜೇಮಿಸನ್ ಚೀರಾಡುತ್ತ ಅತಿಯಾದ ಸಂಭ್ರಮಾಚರಣೆ ಮಾಡಿದರು. ಈ ವಿಡಿಯೊ ಅದಾಗಲೇ ಭಾರೀ ವೈರಲ್ ಆಗಿತ್ತು.
"ಜೇಮಿಸನ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ, ಇದು 'ಪಂದ್ಯದಲ್ಲಿ ಇನ್ನೊಬ್ಬ ಆಟಗಾರನಿಂದ ಅವಮಾನಕರ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದು' ಎಂಬುದಕ್ಕೆ ಸಂಬಂಧಿಸಿದೆ. ಈ ಘಟನೆ ಮೊದಲ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಸಂಭವಿಸಿದೆ, ವೈಭವ್ ಸೂರ್ಯವಂಶಿ ಅವರನ್ನು ಔಟ್ ಮಾಡಿದ ನಂತರ, ಜೇಮಿಸನ್ ಆಕ್ರಮಣಕಾರಿ ರೀತಿಯಲ್ಲಿ ಅವರಿಗೆ ಹತ್ತಿರವಾಗಿದ್ದರು, ಇದು ಬ್ಯಾಟ್ಸ್‌ಮನ್‌ನಿಂದ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡಬಹುದಿತ್ತು" ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಗೆಲುವನ್ನು ರಸ್ತೆ ಅಪಘಾತದಲ್ಲಿ ಮಡಿದ ಅಭಿಮಾನಿಗಳಿಗೆ ಅರ್ಪಿಸಿದ ಅಕ್ಷರ್ ಪಟೇಲ್
ಪಂದ್ಯದಲ್ಲಿ ಸೂರ್ಯವಂಶಿ ಕೇವಲ 4 ರನ್‌ಗೆ ಆಟ ಮುಗಿಸಿದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರು ಈ ಋತುವಿನ ಮೊದಲ ಪಂದ್ಯವಾಡಿದ ಮಿಚೆಲ್ ಸ್ಟಾರ್ಕ್‌ಗೆ ಸಿಕ್ಸರ್ ಬಾರಿಸುವ ಮೂಲಕ ವೆಲ್‌ಕಮ್ ಮಾಡಿದರೂ ಅವರ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಇದೇ ಓವರ್‌ನ ಮೂರನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಅವರ ಆಟ ಏಕೈಕ ಸಿಕ್ಸರ್‌ಗಷ್ಟೇ ಸೀಮಿತವಾಯಿತು.
An in-swinging yorker 😲🔥
— IndianPremierLeague (@IPL) May 1, 2026
🎥 Kyle Jamieson gets Vaibhav Sooryavanshi early 👊
Wait for the celebration 👀
Updates ▶️ https://t.co/6OOjzHtZiD#TATAIPL | #KhelBindaas | #RRvDC | @DelhiCapitals pic.twitter.com/6vxJ5ahlb3
ಆರ್‌ಆರ್ ವಿರುದ್ಧ ಡಿಸಿ ತಂಡವು ಗಳಿಸಿದ ಗೆಲುವು ಅತ್ಯಂತ ಮಹತ್ವದ್ದಾಗಿತ್ತು ಮತ್ತು ಸಮಯೋಚಿತವಾಗಿತ್ತು. 226 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅವರು, ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್ ಚೇಸ್ ಅನ್ನು ಪೂರ್ಣಗೊಳಿಸಿದರು. ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿದರು.