ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sriramotsava Bike Rally: ಅದ್ದೂರಿಯಾಗಿ ನಡೆದ ಎರಡನೇ ವರ್ಷದ ಶ್ರೀರಾಮೋತ್ಸವ ಬೈಕ್ ರ್ಯಾಲಿ

ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಎರಡನೇ ವರ್ಷದ ರಾಮೋತ್ಸವವನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು. ನೂರಾರು ಯುವಕರು ಬೈಕ್‌ಗಳಿಗೆ ಭಗವಾಧ್ವಜ ಗಳನ್ನು ಕಟ್ಟಿಕೊಂಡು ಜೈ ಶ್ರೀ ರಾಮ್ ಘೋಷಣೆಗಳೊಂದಿಗೆ ಬಿಸಿಲನ್ನೂ ಲೆಕ್ಕಿಸದೆ ಮೆರವಣಿಗೆ ಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಅದ್ದೂರಿಯಾಗಿ ನಡೆದ ಎರಡನೇ ವರ್ಷದ ಶ್ರೀರಾಮೋತ್ಸವ ಬೈಕ್ ರ್ಯಾಲಿ

-

Profile
Ashok Nayak Apr 12, 2026 9:04 PM

ಚಿಕ್ಕಬಳ್ಳಾಪುರ : ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಎರಡನೇ ವರ್ಷದ ರಾಮೋತ್ಸವವನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು. ನೂರಾರು ಯುವಕರು ಬೈಕ್‌ಗಳಿಗೆ ಭಗವಾಧ್ವಜ ಗಳನ್ನು ಕಟ್ಟಿಕೊಂಡು ಜೈ ಶ್ರೀ ರಾಮ್ ಘೋಷಣೆಗಳೊಂದಿಗೆ ಬಿಸಿಲನ್ನೂ ಲೆಕ್ಕಿಸದೆ ಮೆರವಣಿಗೆ ಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ನಗರ ಹೊರವಲಯದ ವೀರಾಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ ನೂರಾರು ಯುವಕರು ಭಾಗವಹಿಸಿ ರಾಮನಾಮ ಘೋಷಣೆಗಳ ಮೂಲಕ ಸಂಭ್ರಮಿಸಿದರು.

ರಾಮೋತ್ಸವ ಮೆರವಣಿಗೆಯಲ್ಲಿ ಅಯೋಧ್ಯೆ ಶೈಲಿಯ ಶ್ರೀರಾಮನ ಮೂರ್ತಿ, ಮಂಗಳವಾದ್ಯಗಳು ಹಾಗೂ ಜಾನಪದ ಕಲಾತಂಡಗಳ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು. ರಾಮೋತ್ಸವದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರವನ್ನು ಭಗವಧ್ವಜ ಮತ್ತು ರಾಮನ ಪತಾಕೆಗಳೊಂದಿಗೆ ಸಿಂಗರಿಸಿ ಕೇಸರಿಮಯ ಮಾಡಲಾಗಿತ್ತು.

ಇದನ್ನೂ ಓದಿ: Chinthamani News: ಶುದ್ಧ ಕುಡಿಯುವ ನೀರಿಗಾಗಿ ತಾಲೂಕು ಕಚೇರಿ ಮುಂಭಾಗ ವಿನೂತನ ಪ್ರತಿಭಟನೆ!

ರಾಮೋತ್ಸವಕ್ಕೆ ಚಾಲನೆ ನೀಡಿದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಮಾತನಾಡಿ, ಶ್ರೀರಾಮನ ಆದರ್ಶಗಳನ್ನು ನೆನೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸ ಲಾಗಿದೆ. ಹಿಂದೂ ಧರ್ಮದ ಜಾಗೃತಿ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ ಎಂದರು.

chi 1

ನಾವು ಏನೇ ಆಗಿದ್ದರೂ ಜನ್ಮ ಕೊಟ್ಟ ತಂದೆ ತಾಯಿ ಜನ್ಮಭೂಮಿ, ಇಲ್ಲಿನ ಆಚಾರ ವಿಚಾರ ಸಂಸ್ಕೃತಿಯನ್ನು ಮರೆಯಬಾರದು. ಮರ್ಯಾದ ಪುರುಷೋತ್ತಮ ಶ್ರೀರಾಮನ ಜನ್ಮ ಭೂಮಿ ಯಾದ ಭರತ ಖಂಡದಲ್ಲಿ ಹಿಂದೂಗಳೇ ಬಹು ಸಂಖ್ಯಾತರು. ಇವರ ಮೇಲಿನ ದಾಳಿಯನ್ನು ಎಂದಿಗೂ ಸಹಿಸುವುದಿಲ್ಲ ಎಂದರು. 

ಭಾರತದ ಸಂವಿಧಾನ ನಮ್ಮ ಉಸಿರಾಗಿದ್ದು ಜಾತ್ಯಾತೀತ ತತ್ವಗಳಿಗೆ ಜೀವ ತುಂಬುತ ನಾವೆಲ್ಲರೂ ಒಂದೇ ಎಂಬ ಭಾವದಲ್ಲಿ ಬದುಕು ಸಾಗಿಸೋಣ. ರಾಮನ ಆದರ್ಶಗಳು ನಮ್ಮೆಲ್ಲರ ಬಾಳಿಗೆ ಬೆಳಕಾಗಲಿ ಎಂದರು

ಎರಡನೇ ವರ್ಷದ ರಾಮೋತ್ಸವದ ಮೆರವಣಿಗೆ ಬಿ.ಬಿ.ರಸ್ತೆ,ಬಜಾರ್ ರಸ್ತೆ,ಗಂಗಮ್ಮಗುಡಿ ರಸ್ತೆ ಹಾಗೂ ಎಂ.ಜಿ. ರಸ್ತೆ ಮೂಲಕ ವಾಪಸಂದ್ರವರೆಗೆ ಸಾಗುತ್ತಾ ನಗರದ ಜನರ ಗಮನ ಸೆಳೆಯಿತು.

ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸುಮಂಗಲರು ಬೈಕ್ ಸವಾರರ ಮೇಲೆ ಪುಷ್ಪಗಳನ್ನು ಎರಚಿ ಸಂತೋಷ ಪಟ್ಟರು.