ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕುದುರೆಮುಖದಂಚಿನಲ್ಲಿ ಹಳೆ ಕಂಪನಿ-ಹೊಸ ಕಾನೂನು ಸಂಘರ್ಷ

ರಾಷ್ಟ್ರೀಯ ಉದ್ಯಾನಗಳ ಸಂರಕ್ಷಣೆಗಾಗಿ ಜಾರಿಗೆ ತಂದಿರುವ ‘ಪರಿಸರ ಸೂಕ್ಷ್ಮ ವಲಯ’ ನಿಯಮಗಳು, ದಶಕಗಳ ಹಿಂದೆ ಕಾನೂನುಬದ್ಧವಾಗಿ ಸ್ಥಾಪನೆಯಾದ ಕೈಗಾರಿಕೆಗಳ ಭವಿಷ್ಯವನ್ನು ಪ್ರಶ್ನಾರ್ಥಕವಾ ಗಿಸಿವೆ. ಉಡುಪಿ ಜಿಲ್ಲೆಯ ವರಂಗ ಗ್ರಾಮದ ‘ಕೆಲ್‌ಟೆಕ್ ಎನರ್ಜಿಸ್ ಲಿಮಿಟೆಡ್’ ಸ್ಫೋಟಕ ತಯಾರಿಕಾ ಘಟಕದ ವಿಚಾರದಲ್ಲಿ ಈಗ ಇಂತಹದ್ದೇ ಕಾನೂನು ಮತ್ತು ತಾಂತ್ರಿಕ ಜಿಜ್ಞಾಸೆ ಎದುರಾಗಿದೆ.

ಕುದುರೆಮುಖದಂಚಿನಲ್ಲಿ ಹಳೆ ಕಂಪನಿ-ಹೊಸ ಕಾನೂನು ಸಂಘರ್ಷ

-

Profile
Ashok Nayak Nov 25, 2026 11:13 PM

ಜಿತೇಂದ್ರ ಕುಂದೇಶ್ವರ, ಮಂಗಳೂರು

ರಾಷ್ಟ್ರೀಯ ಉದ್ಯಾನಗಳ ಸಂರಕ್ಷಣೆಗಾಗಿ ಜಾರಿಗೆ ತಂದಿರುವ ‘ಪರಿಸರ ಸೂಕ್ಷ್ಮ ವಲಯ’ ನಿಯಮಗಳು, ದಶಕಗಳ ಹಿಂದೆ ಕಾನೂನುಬದ್ಧವಾಗಿ ಸ್ಥಾಪನೆಯಾದ ಕೈಗಾರಿಕೆಗಳ ಭವಿಷ್ಯವನ್ನು ಪ್ರಶ್ನಾರ್ಥಕವಾ ಗಿಸಿವೆ. ಉಡುಪಿ ಜಿಲ್ಲೆಯ ವರಂಗ ಗ್ರಾಮದ ‘ಕೆಲ್‌ಟೆಕ್ ಎನರ್ಜಿಸ್ ಲಿಮಿಟೆಡ್’ ಸ್ಫೋಟಕ ತಯಾರಿಕಾ ಘಟಕದ ವಿಚಾರದಲ್ಲಿ ಈಗ ಇಂತಹದ್ದೇ ಕಾನೂನು ಮತ್ತು ತಾಂತ್ರಿಕ ಜಿಜ್ಞಾಸೆ ಎದುರಾಗಿದೆ.

ಹಳೆಯ ಘಟಕ, ಹೊಸ ನಿಯಮ: ಸಾಮಾನ್ಯವಾಗಿ ಸುರಕ್ಷತಾ ದೃಷ್ಟಿಯಿಂದ ಸ್ಫೋಟಕ ತಯಾರಿಕಾ ಘಟಕಗಳನ್ನು ಜನ ವಸತಿ ಪ್ರದೇಶಗಳಿಂದ ದೂರವಿರುವ ನಿರ್ಜನ ಪ್ರದೇಶಗಳಲ್ಲಿ ಸ್ಥಾಪಿಸಲಾಗು ತ್ತದೆ. ಅದರಂತೆ, ಈ ಖಾಸಗಿ ಸಂಸ್ಥೆಯು ದಶಕಗಳ ಹಿಂದೆಯೇ ಸ್ವಂತ ಹಣ ನೀಡಿ ಜಮೀನು ಖರೀದಿಸಿ, ದೇಶದ ಅಂದಿನ ಕಾನೂನು ಮತ್ತು ಸುರಕ್ಷತಾ ಮಾನದಂಡಗಳಿಗೆ ಅನು ಗುಣವಾಗಿ ಘಟಕವನ್ನು ಆರಂಭಿಸಿತ್ತು. ಅಂದು ಈ ಪ್ರದೇಶಕ್ಕೆ ‘ಪರಿಸರ ಸೂಕ್ಷ್ಮ ವಲಯ’ದ ಅಧಿಸೂಚನೆ ಜಾರಿ ಯಾಗಿರಲಿಲ್ಲ. ಆದರೆ, ಕೇಂದ್ರ ಸರಕಾರ 2020ರ ಜುಲೈ 2ರಂದು ಕುದುರೆಮುಖ ಉದ್ಯಾನದ ಪರಿಸರ ಸೂಕ್ಷ್ಮ ವಲಯದ ಅಂತಿಮ ಅಧಿಸೂಚನೆಯನ್ನು ಹೊರಡಿಸಿದ ಬಳಿಕ ಚಿತ್ರಣ ಬದಲಾಗಿದೆ. ಕಂಪನಿಯ ಒಟ್ಟು 600 ಎಕರೆ ಪ್ರದೇಶದಲ್ಲಿ ಸುಮಾರು 400 ಎಕರೆ ಭೂಮಿ ಉದ್ಯಾನದ ಗಡಿಯಿಂದ 500 ಮೀಟರ್ ಅಂತರದಲ್ಲಿದ್ದು, ಅಧಿಸೂಚಿತ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಟ್ಟಿದೆ ಎಂಬುದು ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆಯಲ್ಲಿ ಕಂಡುಬಂದಿದೆ.

ಇದನ್ನೂ ಓದಿ: Dakshina Kannada Rain: ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ 4 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ

ಕೃಷಿಕರಿಗೆ ಅಭಯ: ಕುದುರೆಮುಖ ಸೇರಿದಂತೆ ದೇಶದ ಯಾವುದೇ ರಾಷ್ಟ್ರೀಯ ಉದ್ಯಾನವನಗಳ ಗಡಿಯಿಂದ 1 ಕಿಲೋ ಮೀಟರ್ ಆಸುಪಾಸಿನ ಪರಿಸರ ಸೂಕ್ಷ್ಮ ವಲಯದಲ್ಲಿ ಇನ್ನು ಮುಂದೆ ಯಾವುದೇ ಹೊಸ ಕೈಗಾರಿಕೆಗಳು ತಲೆ ಎತ್ತಲು ಅಥವಾ ಹಾಲಿ ಇರುವ ಮಾಲಿನ್ಯಕಾರಕ ಘಟಕ ಗಳನ್ನು ವಿಸ್ತರಿಸಲು ಕಾನೂನಿನಲ್ಲಿ ಅವಕಾಶ ವಿಲ್ಲ. ಕೇವಲ ಬೃಹತ್ ಕೈಗಾರಿಕೆಗಳು ಮತ್ತು ಗಣಿಗಾರಿಕೆ ಯಂತಹ ಚಟುವಟಿಕೆಗಳಿಗೆ ಮಾತ್ರ ನಿರ್ಬಂಧ ಹೇರುತ್ತದೆ. ಸ್ಥಳೀಯ ರೈತರ ದೈನಂದಿನ ಕೃಷಿ, ತೋಟಗಾರಿಕೆ ಹಾಗೂ ಸಾಂಪ್ರದಾಯಿಕ ಚಟುವಟಿಕೆಗಳಿಗೆ ಇದ ರಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದನ್ನು ನಿಯಮಗಳು ಸ್ಪಷ್ಟಪಡಿಸು ತ್ತವೆ. ಒಂದೆಡೆ ನಿಯಮಾವಳಿಗಳ ಜಾರಿಗೂ ಮುನ್ನವೇ ಬಂಡವಾಳ ಹೂಡಿ ಕಾನೂನು ಬದ್ಧವಾಗಿ ಆರಂಭವಾದ ಉದ್ಯಮದ ಹಿತಾ ಸಕ್ತಿ, ಮತ್ತೊಂದೆಡೆ ಪಶ್ಚಿಮ ಘಟ್ಟದ ಅಮೂಲ್ಯ ವನ್ಯಸಂಪತ್ತಿನ ರಕ್ಷಣೆಈ ಎರಡನ್ನೂ ಸರಿದೂಗಿ ಸುವ ಮಹತ್ವದ ಜವಾಬ್ದಾರಿ ಈಗ ಮೈಸೂರು ಪ್ರಾದೇಶಿಕ ಆಯುಕ್ತರ ನೇತೃತ್ವದ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿ ಮತ್ತು ರಾಜ್ಯ ಸರಕಾರದ ಮುಂದಿದೆ.

ವಿಸ್ತರಣೆಗೆ ತಾಂತ್ರಿಕ ತೊಡಕು: ಪ್ರಸ್ತುತ ಕಂಪನಿಯ ಕಾರ್ಯಾಚರಣೆಗೆ 2026ರ ಜೂನ್ 30 ರವರೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಇದೆ. ಇದೀಗ ಕಂಪನಿಯು ತನ್ನ ಕಾರ್ಯಾಚರಣೆಯ ಅನುಮತಿಯ ನವೀಕರಣ ಹಾಗೂ ಹೊಸ ಉತ್ಪನ್ನಗಳ ಸೇರ್ಪಡೆಯೊಂದಿಗೆ ಘಟಕದ ವಿಸ್ತರಣೆಗಾಗಿ ‘ಪರಿವೇಶ್’ ಪೋರ್ಟಲ್ ಮೂಲಕ ಪರಿಸರ ಅನುಮತಿಗೆ ಅರ್ಜಿ ಸಲ್ಲಿಸಿದೆ. ಇತ್ತೀಚೆಗೆ ಮಂಗಳೂರಿನ ಎಂಆರ್‌ಪಿಎಲ್ ಘಟಕದಲ್ಲಿ ನಡೆದ ಅವಘಡದ ಹಿನ್ನೆಲೆ ರೆಡ್ ಕೆಟಗರಿಯ ಕೈಗಾರಿಕೆಗಳ ಸುರಕ್ಷತೆಯ ಬಗ್ಗೆಯೂ ಆಡಳಿತ ಯಂತ್ರ ಹೆಚ್ಚು ನಿಗಾ ವಹಿಸುತ್ತಿದೆ.

ಪರಿಸರವಾದಿಗಳ ವಾದವೇನು?

ಕುದುರೆಮುಖ ರಾಷ್ಟ್ರೀಯ ಉದ್ಯಾನದ ಗಡಿಯಿಂದ ಕೇವಲ 500 ಮೀಟರ್ ದೂರದಲ್ಲಿ ಸೋಟಕ ಘಟಕವಿರುವುದು ಪಶ್ಚಿಮ ಘಟ್ಟದ ಸೂಕ್ಷ್ಮ ಜೀವವೈವಿಧ್ಯಕ್ಕೆ ಅಪಾಯಕಾರಿ. 2020ರ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯ ಪ್ರಕಾರ, ಈ ವ್ಯಾಪ್ತಿಯಲ್ಲಿ ಅಪಾಯಕಾರಿ ವಸ್ತುಗಳ ಉತ್ಪಾದನೆ ಹಾಗೂ ಕೈಗಾರಿಕೆಗಳ ವಿಸ್ತರಣೆಗೆ ಅವಕಾಶವಿಲ್ಲ. ಹೀಗಾಗಿ, ಕಂಪನಿಯ ವಿಸ್ತರಣಾ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಮತ್ತು ಕಾರ್ಯಾಚರಣೆ ಅನುಮತಿಯನ್ನು ನವೀಕರಿಸದೆ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಮೈಸೂರು ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಡಳಿತಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲಾಗಿದೆ ಎನ್ನುತ್ತಾರೆ ವೈಲ್ಡ್ ಲೈಫ್ ಫಸ್ಟ್ ಟ್ರಸ್ಟಿ ಪ್ರವೀಣ್ ಭಾರ್ಗವ್