ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉತ್ತರ ಪ್ರದೇಶದ ವಿಧಾನ ಸಭೆಯಲ್ಲಿ ಮಾತನಾಡಲಿದೆ ಕರ್ನಾಟಕದ ಸ್ಪೀಕರ್ ಕುರ್ಚಿ !

ಎಲ್ಲಿ ಕರ್ನಾಟಕ, ಎಲ್ಲಿ ಉತ್ತರ ಪ್ರದೇಶ.. ಹಾಗಿದ್ದರೂ ಇನ್ನು ಮುಂದೆ ದೇಶದ ಅತೀ ದೊಡ್ಡ ಉತ್ತರ ಪ್ರದೇಶದ ವಿಧಾನ ಸಭೆಯಲ್ಲಿ ಕರ್ನಾಟಕದ ಸ್ಪೀಕರ್ ಕುರ್ಚಿ ಮಾತನಾಡಲಿದೆ. ಹೌದು ಕರ್ನಾಟಕದ ಸ್ಪೀಕರ್ ಕುರ್ಚಿ ಮಾದರಿಯಲ್ಲಿ ಕರ್ನಾಟಕದಲ್ಲೇ ತಯಾರಾದ ಕುರ್ಚಿ ಮುಂದಿನ ಬಜೆಟ್ ಅಧಿವೇಶನಕ್ಕೂ ಮೊದಲು ಲಕ್ನೋ ತಲುಪಲಿದೆ. ಇದರ ಹಿಂದಿದೆ ಒಂದು ಸ್ಟೋರಿ.

ಕರ್ನಾಟಕ ಸ್ಪೀಕರ್ ಕುರ್ಚಿಗೆ ಯುಪಿ ಸ್ಪೀಕರ್ ಕಣ್ಣು

ಸಂಗ್ರಹ ಚಿತ್ರ -

ಬೆಂಗಳೂರು: ಉತ್ತರ ಪದೇಶದೊಂದಿಗೆ (Uttar Pradesh) ಈಗ ಕರ್ನಾಟಕ (karnataka) ಕೂಡ ನಂಟು ಹೊಂದಿದೆ. ಅದು ಹೇಗೆಂದರೆ ಕುರ್ಚಿಯ (Speaker’s chair) ಮೂಲಕ. ಎಲ್ಲಿ ಕರ್ನಾಟಕ, ಎಲ್ಲಿ ಉತ್ತರ ಪ್ರದೇಶ.. ಹಾಗಿದ್ದರೂ ಇನ್ನು ಮುಂದೆ ದೇಶದ ಅತೀ ದೊಡ್ಡ ಉತ್ತರ ಪ್ರದೇಶದ ವಿಧಾನ ಸಭೆಯಲ್ಲಿ ಕರ್ನಾಟಕದ ಸ್ಪೀಕರ್ ಕುರ್ಚಿ ಮಾತನಾಡಲಿದೆ. ಕರ್ನಾಟಕದ ಸ್ಪೀಕರ್ ಕುರ್ಚಿ ಮಾದರಿಯಲ್ಲಿ ಕರ್ನಾಟಕದಲ್ಲೇ ತಯಾರಾದ ಕುರ್ಚಿ ಮುಂದಿನ ಬಜೆಟ್ ಅಧಿವೇಶನಕ್ಕೂ (UP Budget session 2026) ಮೊದಲು ಲಕ್ನೋ ತಲುಪಲಿದೆ. ಈ ಮೂಲಕ ಕರ್ನಾಟಕ ಮತ್ತು ಉತ್ತರ ಪ್ರದೇಶ ಕುರ್ಚಿಯಿಂದ ಸಂಬಂಧವನ್ನು ಹೊಂದಿದಂತಾಗಿದೆ.

ಉತ್ತರ ಪ್ರದೇಶ ವಿಧಾನಸಭೆಯು ಫೆಬ್ರವರಿ 9 ರಂದು ಬಜೆಟ್ ಅಧಿವೇಶನಕ್ಕಾಗಿ ಸಭೆ ಸೇರಲಿದ್ದು ಇದಕ್ಕೂ ಮೊದಲು ಉತ್ತರ ಪ್ರದೇಶದ ವಿಧಾನಸಭೆಗೆ ಕರ್ನಾಟಕದಲ್ಲಿ ತಯಾರಾದ ವಿಶೇಷ ಕೆತ್ತನೆಯ ಸ್ಪೀಕರ್ ಕುರ್ಚಿ ತಲುಪಲಿದೆ. ಇದರಲ್ಲಿರುವ ಒಂದು ವಿಶೇಷತೆ ಎಂದರೆ ಯುಪಿಯ ರಾಜ್ಯ ಲಾಂಛನವನ್ನು ಅಳವಡಿಸಲಾಗಿದೆ.

Union Budget 2026: ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಅನುದಾನ ಹೆಚ್ಚಳ? ಬಜೆಟ್‌ನಲ್ಲಿ ರೈತರಿಗೆ ಗುಡ್‌ನ್ಯೂಸ್‌ ನೀಡುತ್ತ ಮೋದಿ ಸರ್ಕಾರ?

ಬೆಂಗಳೂರಿನಿಂದ ಏಳು ಅಡಿ ಎತ್ತರದ ಕುರ್ಚಿಯನ್ನು ಶುಕ್ರವಾರ ಲಕ್ನೋಗೆ ರವಾನಿಸಲಾಗಿದೆ. ಇದನ್ನು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಮೇಲ್ವಿಚಾರಣೆಯಲ್ಲಿ 10 ಕುಶಲಕರ್ಮಿಗಳು ರೋಸ್‌ವುಡ್‌ನಿಂದ ಕೆತ್ತಿದ್ದಾರೆ. ಇದರ ಬೆಲೆ 29.79 ಲಕ್ಷ ರೂ. ಗಳಾಗಿವೆ.

2025ರ ಸೆಪ್ಟೆಂಬರ್ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ​​ಆಯೋಜಿಸಿದ್ದ ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದ ಉತ್ತರ ಪ್ರದೇಶದ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನಾ ಅವರು ಕರ್ನಾಟಕ ವಿಧಾನಸಭೆಯಲ್ಲಿನ ಸ್ಪೀಕರ್ ಕುರ್ಚಿ ನೋಡಿ ಪ್ರಭಾವಿತರಾಗಿದ್ದರು. ಬಳಿಕ ಅವರು ಇದೇ ಮಾದರಿಯ ಕುರ್ಚಿ ಮಾಡಿಕೊಡಲು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸಂಪರ್ಕಿಸಿ ಮಾತನಾಡಿದ್ದರು.

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್‌ ಪ್ರಮಾಣ ವಚನ

ಬಳಿಕ ಖಾದರ್ ಅವರ ಸೂಚನೆ ಮೇರೆಗೆ ಇದನ್ನು ತಯಾರಿಸುವ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮಕ್ಕೆ ವಹಿಸಲಾಯಿತು. ಡಿಸಿಎಫ್ ಶ್ರೀಧರ್ ಸೇರಿದಂತೆ ನಿಗಮದ ತಂಡವು ಉತ್ತರ ಪ್ರದೇಶದ ವಿಧಾನಸಭೆಗೆ ಭೇಟಿ ನೀಡಿ ಮಾತುಕತೆಗಳನ್ನು ನಡೆಸಿ ಅಗತ್ಯ ಮಾಹಿತಿಗಳನ್ನು ಪಡೆದು ಬಂದರು.

ಇದನ್ನು ತಯಾರಿಸಲು ಕಾರ್ಮಿಕರು ಸರಿಸುಮಾರು ಎರಡು ತಿಂಗಳು ಕಾಲಾವಕಾಶವನ್ನು ತೆಗೆದುಕೊಂಡಿದ್ದು, ಈಗ ಸಿದ್ದವಾಗಿರುವ ಕುರ್ಚಿ ಫೆಬ್ರವರಿ 5 ರೊಳಗೆ ಲಕ್ನೋ ತಲುಪಲಿದೆ ಎನ್ನಲಾಗಿದೆ.