ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gubbi News: ಮೇಯುತ್ತಿದ್ದ ಮೇಕೆಗಳ ಮೇಲೆ ಚಿರತೆ ದಾಳಿ: ಕುರಿಗಾಯಿ ಮಹಿಳೆ ಕೂದಲೆಳೆಯಲ್ಲಿ ಪಾರು

ತೋಟದ ಸಾಲಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಹಠಾತ್ ದಾಳಿ ಮಾಡಿದ ಚಿರತೆ ಎರಡು ಮೇಕೆಗಳನ್ನು ಬಲಿ ತೆಗೆದುಕೊಂಡಿದೆ. ಮೇಕೆ ಕಾಯುತ್ತಿದ್ದ ಕುರಿಗಾಯಿ ಮಹಿಳೆ ಮೇಲೆರ ಗುವ ಮುನ್ನ ಸ್ಥಳದಿಂದ ಓಡಿಹೋಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರದ ಘಟನೆ ತಾಲ್ಲೂಕಿನ ಕಸಬ ಹೋಬಳಿ ಕಿಟ್ಟದಕುಪ್ಪೆ ಗ್ರಾಮದಲ್ಲಿ ನಡೆದಿದೆ

ಮೇಯುತ್ತಿದ್ದ ಮೇಕೆಗಳ ಮೇಲೆ ಚಿರತೆ ದಾಳಿ

-

Ashok Nayak
Ashok Nayak Jan 11, 2026 11:24 PM

ಗುಬ್ಬಿ: ತೋಟದ ಸಾಲಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ, ಹಠಾತ್ ದಾಳಿ ಮಾಡಿದ ಚಿರತೆ ಎರಡು ಮೇಕೆಗಳನ್ನು ಬಲಿ ತೆಗೆದುಕೊಂಡಿದೆ. ಮೇಕೆ ಕಾಯುತ್ತಿದ್ದ ಕುರಿಗಾಯಿ ಮಹಿಳೆ ಮೇಲೆರ ಗುವ ಮುನ್ನ ಸ್ಥಳದಿಂದ ಓಡಿ ಹೋಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲ್ಲೂಕಿನ ಕಸಬ ಹೋಬಳಿ ಕಿಟ್ಟದಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: Crime News: ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗಿಳಿಸಿದ ಪಾಪಿ ತಂದೆ, ಅಜ್ಜಿ ಸೇರಿ 12 ಮಂದಿ ಬಂಧನ

ಸ್ಥಳೀಯ ತಿಮ್ಮಕ್ಕ ಎಂಬಾಕೆ ತನ್ನ ಮೇಕೆ ಹಾಗೂ ಕುರಿಗಳನ್ನು ಮೇಯಿಸುವುದಕ್ಕಾಗಿ ತೋಟಕ್ಕೆ ಹೋದಾಗ ಹಾಡುಹಗಲೇ ತೋಟದ ಅಂಚಿನ ಬೇಲಿ ಸಾಲಿನಿಂದ ಪ್ರತ್ಯಕ್ಷವಾದ ಚಿರತೆ ಎರಡು ಮೇಕೆಯನ್ನು ಎಳೆದೊಯ್ದು ಅರೆಬರೆ ತಿಂದಿದೆ.

ಮಹಿಳೆಯು ತಕ್ಷಣ ಎಚ್ಚೆತ್ತು ಸ್ಥಳದಿಂದ ಓಡಿ ಹೋಗದಿದ್ದರೆ ಆಕೆಯ ಬಲಿಯಾಗಬೇಕಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಚಿರತೆಗಳ ಹಾವಳಿ ಕಿಟ್ಟದಕುಪ್ಪೆ ಭಾಗದಲ್ಲಿ ಮಿತಿ ಮೀರಿದ್ದು, ಈಗ ಗ್ರಾಮದೊಳಗೆ ಕಾಣಿಸಿಕೊಳ್ಳುತ್ತಿದೆ. ಕೂಡಲೇ ಅರಣ್ಯ ಇಲಾಖೆ ಚಿರತೆ ಹಾವಳಿಗೆ ಕಡಿವಾಣ ಹಾಕ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.