Madhugiri News: 15 ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಿ ರಾಜ್ಯೋತ್ಸವ ಪ್ರಶಸ್ತಿ: ತಹಸೀಲ್ದಾರ್ ಎಸ್.ಎ.ನಂದಿನಿ
ಸಭೆಗೆ ಅಧಿಕಾರಿಗಳು ಗೈರು ಆಗಿರುವುದನ್ನು ಜೀವಿಕ ಚಿಕ್ಕಮ್ಮರವರು ಸಭಾಧ್ಯಕ್ಷರವರ ಗಮನಕ್ಕೆ ತಂದರು. ಸಭೆ ಮುಂದೂಡಿ ಎಂದು ಟಿ.ಪ್ರಸನ್ನ ಕುಮಾರ್ ಹೇಳಿದಾಗ ತಹಸೀಲ್ದಾರ್ ಎಸ್.ಎ.ನಂದಿನಿ ಈಗಾಗಲೇ ಸಮಯ ನಿಗದಿ ಮಾಡಿದ್ದೇವೆ ಎಂದರು. ಕಾಟಾಚಾರದ ಪೂರ್ವಭಾವಿ ಸಭೆ ಎಂದು ದಲಿತ ಮುಖಂಡ ದೊಡ್ಡೇರಿ ಕಣಿಮಯ್ಯ ಬೇಸರ ವ್ಯಕ್ತಪಡಿಸಿದರು.
-
ಮಧುಗಿರಿ: ಈ ಬಾರಿಯ ರಾಜ್ಯೋತ್ಸವ(Rajyotsava) ಕಾರ್ಯಕ್ರಮ ನಡೆಸಲು ಸ್ಥಳದ ಗೊಂದಲ, ಅಧಿಕಾರಿಗಳ ದ್ವಂದ್ವ ಹೇಳಿಕೆಗಳು, ಸೀಮಿತರಿಗೆ ಮಾತ್ರ ಪ್ರಶಸ್ತಿ ನೀಡಬೇಕು ಕಾರ್ಯಕ್ರಮದ ಮೆರವಣಿಗೆಯಲ್ಲಿ ಅಧಿಕಾರಿಗಳು ಹಾಜರಾಗಲಿ ಜೊತೆಗೆ ಶಾಲಾ ಮಕ್ಕಳಿಗೆ ಸಿಹಿತಿಂಡಿಯನ್ನು ಕೊಡಬೇಕು, ಮಧುಗಿರಿ ನಗರದ ವೃತ್ತಗಳಿಗೆ ದೀಪಾಲಂಕಾರ ಮಾಡಿ ಹೀಗೆ ಇನ್ನಿತರೆ ವಿಷಯಗಳು ಚರ್ಚೆಗೆ ಬಂತು.
ತಾಲೂಕುನಲ್ಲಿ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಕರುನಾಡ ವಿಜಯ ಸೇನೆ ಅಧ್ಯಕ್ಷ ತಿಮ್ಮರಾಜು ಮಾತಾಡಿ, ಬೇರೆ ರಾಷ್ಟ್ರೀಯ ಹಬ್ಬಗಳಿಗೆ ಆಹ್ವಾನ ನೀಡುವುದಿಲ್ಲ ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ ವೇಳೆ ಕರವೇ ಪಾಂಡುರಂಗಯ್ಯ ಧ್ವನಿಗೂಡಿಸಿದರು.
ಸಭೆಗೆ ಅಧಿಕಾರಿಗಳು ಗೈರು ಆಗಿರುವುದನ್ನು ಜೀವಿಕ ಚಿಕ್ಕಮ್ಮರವರು ಸಭಾಧ್ಯಕ್ಷರವರ ಗಮನಕ್ಕೆ ತಂದರು. ಸಭೆ ಮುಂದೂಡಿ ಎಂದು ಟಿ.ಪ್ರಸನ್ನ ಕುಮಾರ್ ಹೇಳಿದಾಗ ತಹಸೀಲ್ದಾರ್ ಎಸ್.ಎ.ನಂದಿನಿ ಈಗಾಗಲೇ ಸಮಯ ನಿಗದಿ ಮಾಡಿದ್ದೇವೆ ಎಂದರು. ಕಾಟಾಚಾರದ ಪೂರ್ವಭಾವಿ ಸಭೆ ಎಂದು ದಲಿತ ಮುಖಂಡ ದೊಡ್ಡೇರಿ ಕಣಿಮಯ್ಯ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Sadguru Shri Madhusudhan Sai: ರಾಮನಾಮ ಸ್ಮರಣೆಯಿಂದ ದುರ್ಗುಣಗಳ ನಿವಾರಣೆ: ಸದ್ಗುರು ಶ್ರೀ ಮಧುಸೂದನ ಸಾಯಿ
15 ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು ಜೊತೆಗೆ ಈ ಬಾರಿ ವಿಶೇಷವಾಗಿ ಎಂ.ಜಿ.ಧನುಷ್ ರವರಿಗೂ ಸನ್ಮಾನಿಸ ಲಾಗುವುದು ಎಂದು ತಹಸೀಲ್ದಾರ್ ಎಸ್.ಎ.ನಂದಿನಿ ತಿಳಿಸಿದರು.
ಸಭೆಯಲ್ಲಿ ಮಾತನಾಡುವಾಗ ಪದೇಪದೇ ಆಂಗ್ಲ ಭಾಷೆ ಬಳಸುತ್ತಿರುವ ಮಧುಗಿರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ.ಉತ್ತಮ ರವರಿಗೆ ಕನ್ನಡಪರ ಸಂಘಟನೆ ಪದಾಧಿಕಾರಿಗಳು ಕನ್ನಡದಲ್ಲಿ ಮಾತನಾಡಿ ಎಂದು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ನೀರಿನ ವ್ಯವಸ್ಥೆ ಮಾಡದೆ ಇರುವುದನ್ನು ಮನಗಂಡ ಕರುನಾಡ ವಿಜಯ ಸೇನೆ ಅಧ್ಯಕ್ಷ ತಿಮರಾಜುರವರು ನೀರಿನ ಬಾಟಲ್ ಗಳನ್ನು ಅಧಿಕಾರಿಗಳಿಗೆ ತರಿಸಿಕೊಟ್ಟರು.
ತಹಸೀಲ್ದಾರ್ ಎಸ್.ಎ.ನಂದಿನಿ, ತಾಲೂಕು ಪಂಚಾಯತಿ ಕಾರ್ಯ ನಿರ್ವಾಣಾಧಿಕಾರಿ ಬಿ.ಕೆ. ಉತ್ತಮ, ಕಸಪಾ ಅಧ್ಯಕ್ಷೆ ಸಹನಾ ನಾಗೇಶ್, ಕನ್ನಡಪರ ಸಂಘಟನೆ ಮುಖಂಡರುಗಳಾದ ತಿಮ್ಮರಾಜು, ಜಲಾಲ್ ಬಾಷ,ಐ.ಡಿ.ಹಳ್ಳಿ, ರಾಘವೇಂದ್ರ, ದೊಡ್ಡಯಲ್ಕೂರು ಲಕ್ಷ್ಮಿಪತಿ, ತಿಮ್ಮರಾಜು, ಆರ್ ಎಸ್ ರಂಗನಾಥ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ದಲಿತಪರ ಸಂಘಟನೆಗಳು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.