ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur (Chikkanayakahalli) News: ಮದ್ಯ ಅಕ್ರಮ ಮಾರಾಟಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್: ಮಹಿಳೆಯರ ಆರೋಪ

ಬಾರ್, ವೈನ್ ಶಾಪ್‌ಗಳ ಮುಂದೆ ಬೆಳಗಿನಜಾವ 5 ಗಂಟೆಯಿಂದಲೇ ಮದ್ಯ ಮಾರಾಟ ನಡೆಯುತ್ತಿದೆ. ಪುರಸಭೆಯ ವಿವಿಧ ಬಡಾವಣೆ ಗಳ ಕಿರಾಣಿ, ಟೀ ಶಾಪ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಬಹುತೇಕ ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಹಣದ ಅರ್ಧದಷ್ಟನ್ನು ಮದ್ಯ ಸೇವನೆಗೆ ವಿನಿಯೋಗಿ ಸುತ್ತಿದ್ದಾರೆ. ಹಲವು ಕುಟುಂಬಗಳು ಬೀದಿಗೆ ಬಂದಿವೆ. ಕೌಟಂಬಿಕ ಹಾಗು ಸಾಮಾಜಿಕ ಕಲಹಗಳು ಹೆಚ್ಚಾಗಿ ಅಶಾಂತಿ ಮೂಡುತ್ತಿದೆ

ಮದ್ಯ ಅಕ್ರಮ ಮಾರಾಟಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್

Ashok Nayak Ashok Nayak Apr 23, 2025 10:53 AM

ಚಿಕ್ಕನಾಯಕನಹಳ್ಳಿ: ಪಟ್ಟಣ ಸೇರಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ತಪ್ಪಿ ತಸ್ಥರ ವಿರುದ್ದ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ. ಕಾನೂನು ಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕಾದ ಅಬಕಾರಿ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದು ಅಕ್ರಮ ವ್ಯವಹಾರಕ್ಕೆ ಅವರೇ ಸಾಥ್ ನೀಡುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಮಿತಿ ಮೀರಿದೆ. ಬಾರ್, ವೈನ್ ಶಾಪ್‌ಗಳ ಮುಂದೆ ಬೆಳಗಿನಜಾವ 5 ಗಂಟೆಯಿಂದಲೇ ಮದ್ಯ ಮಾರಾಟ ನಡೆಯುತ್ತಿದೆ. ಪುರಸಭೆಯ ವಿವಿಧ ಬಡಾವಣೆ ಗಳ ಕಿರಾಣಿ, ಟೀ ಶಾಪ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಬಹುತೇಕ ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಹಣದ ಅರ್ಧದಷ್ಟನ್ನು ಮದ್ಯ ಸೇವನೆಗೆ ವಿನಿಯೋಗಿಸುತ್ತಿದ್ದಾರೆ. ಹಲವು ಕುಟುಂಬಗಳು ಬೀದಿಗೆ ಬಂದಿವೆ. ಕೌಟಂಬಿಕ ಹಾಗು ಸಾಮಾಜಿಕ ಕಲಹಗಳು ಹೆಚ್ಚಾಗಿ ಅಶಾಂತಿ ಮೂಡುತ್ತಿದೆ.

ಇದನ್ನೂ ಓದಿ: Chikkaballapur News: ಬಾಗೇಪಲ್ಲಿ:ಕೃಷಿ ಇಲಾಖೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಕಡತಗಳ ತನಿಖೆ

ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕನಿಷ್ಠ 4 ರಿಂದ 5 ಅಕ್ರಮ ಮದ್ಯದ ಮಾರಾಟ ಅಂಗಡಿ ಗಳಿವೆ. ಅನುಮತಿ ಪಡೆದ ಮದ್ಯದಂಗಡಿಯ ಮಾಲೀಕರೇ ಸುತ್ತಮುತ್ತಲಿನ ಹಳ್ಳಿಗಳಿಗೆ ಅಕ್ರಮ ಮದ್ಯ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಬಾರ್‌ಗಳಿಂದ ಖರೀದಿಸಿ, ಹಳ್ಳಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗೆ ಮದ್ಯವು ಸ್ಥಳಿಯವಾಗಿ ಸಿಗುವುದರಿಂದ ಹೆಚ್ಚಿನ ಜನರು ಕುಡಿತಕ್ಕೆ ದಾಸರಾಗುವುದರಿಂದ ಆರೋಗ್ಯದ ಮೇಲೆಯೂ ದುಷ್ಟ ಪರಿಣಾಮ ಬೀರುತ್ತಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಬಾರ್ ವೈನ್‌ಶಾಪ್‌ಗಳ ಪರವಾನಿಗೆ ರದ್ದುಪಡಿಸಿ

ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಮದ್ಯ ಸಿಗುತ್ತಿದೆ. ಕಾನೂನು ಬಾಹಿರ ವಾಗಿ ಮದ್ಯ ಮಾರಾಟದಲ್ಲಿ ತೊಡಗಿದವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದು ಅವ್ಯವಹಾರಕ್ಕೆ ಅವರೇ ಸಾಥ್ ನೀಡುತ್ತಿದ್ದಾರೆ. ತಾಲ್ಲೂಕು ಆಡಳಿತ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು. ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡುತ್ತಿರುವ ಬಾರ್ ಮತ್ತು ವೈನ್‌ಶಾಪ್ ವಿರುದ್ದ ಕ್ರಮ ಕೈಗೊಂಡು ಪರವಾನಿಗೆ ರದ್ದುಪಡಿಸಬೇಕು ಎಂದು ಬಿಜೆಪಿ ಯುವ ಮೋರ್ಚ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣೇ ಕಟ್ಟೆ ರಾಕೇಶ್ ಒತ್ತಾಯಿಸಿದ್ದಾರೆ.