Hampi Utsav 2025: ಫೆ. 28ರಿಂದ ಹಂಪಿ ಉತ್ಸವ; ಲಾಂಛನ ಬಿಡುಗಡೆ
ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ 2025ರ ಹಂಪಿ ಉತ್ಸವ ಫೆ. 28ರಿಂದ ನಡೆಯಲಿದ್ದು, ಇದರ ಲಾಂಛನವನ್ನು ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.

ಹಂಪಿ ಮತ್ತು ಒಳ ಚಿತ್ರದಲ್ಲಿ ಹಂಪಿ ಉತ್ಸವದ ಲಾಂಛನ.

ವಿಜಯನಗರ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ 2025ರ ಹಂಪಿ ಉತ್ಸವ (Hampi Utsav 2025) ಫೆ. 28ರಿಂದ ನಡೆಯಲಿದ್ದು, ಇದರ ಲಾಂಛನವನ್ನು ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ (Zameer Ahmed) ಬಿದುಗಡೆಗೊಳಿಸಿದರು.
ಫೆ. 28, ಮಾ. 1, 2ರಂದು 3 ದಿನಗಳ ಕಾಲ ಹಂಪಿ ಉತ್ಸವ ಮಡೆಯಲಿದೆ. ಕಳೆದ ಬಾರಿಗಿಂತಲೂ ಈ ಬಾರಿ ಇನ್ನಷ್ಟು ಅದ್ದೂರಿಯಾರಿ ಮಾಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ. ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ ಉತ್ಸವದಲ್ಲಿ ಯಾವೆಲ್ಲ ಕಲಾವಿದರು ಇರಲಿದ್ದಾರೆ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ. ಹಂಪಿ ಉತ್ಸವದ ವೇಳೆ 1 ವಾರ ವಿಜಯನಗರ ಜಿಲ್ಲೆಯಲ್ಲೇ ಠಿಕಾಣಿ ಹೂಡುತ್ತೇನೆ ಎಂದು ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಹೇಳಿದ್ದಾರೆ. ಎಲ್ಲರೂ ಸೇರಿ ವಿಜೃಂಭಣೆಯಿಂದ ಹಂಪಿ ಉತ್ಸವ ಮಾಡೋಣ ಎಂದು ಕರೆಯನ್ನೂ ನೀಡಿದ್ದಾರೆ.
ಹಂಪಿ ಉತ್ಸವ ಲೋಗೋ ಬಿಡುಗಡೆ ವೇಳೆ ವೇಳೆ ಶಾಸಕರಾದ ಗವಿಯಪ್ಪ, ಎನ್.ಟಿ. ಶ್ರೀನಿವಾಸ್, ನೇಮಿರಾಜ್ ನಾಯಕ್, ಕೃಷ್ಣ ನಾಯಕ್, ಲತಾ ಮಲ್ಲಿಕಾರ್ಜುನ, ಡಿಸಿಎಫ್ ಅರ್ಸಲಾನ್, ಜಿಲ್ಲಾಧಿಕಾರಿ ದಿವಾಕರ್, ಎಎಸ್‌ಪಿ ಅಕ್ರಂ ಪಾಷಾ ಮತ್ತಿತರರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ: Bengaluru Karaga 2025: ವಿಶ್ವ ವಿಖ್ಯಾತ ಬೆಂಗಳೂರು ಕಗರ ಉತ್ಸವಕ್ಕೆ ಡೇಟ್ ಫಿಕ್ಸ್
ಸಿಎಂ ಉದ್ಘಾಟನೆ
ಫೆ. 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದು, ಮಾ. 1 ಮತ್ತು 2ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಳೆದ ವರ್ಷ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ.