Diljit Dosanjh: ಪ್ರಧಾನಿ ಮೋದಿಯನ್ನು ಭೇಟಿಯಾದ ಬಿಜೆಪಿ ಟೀಕೆಗೆ ಗುರಿಯಾಗಿದ್ದ ಗಾಯಕ ದಿಲ್ಜಿತ್ ದೊಸಾಂಜ್
Diljit Dosanjh: ಗಾಯಕ ದಿಲ್ಜಿತ್ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರನ್ನು ಭೇಟಿಯಾಗಿದ್ದಾರೆ.
-
ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರು ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದರು ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುತ್ತೀರೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಹೌದು ಅಥವಾ ಇಲ್ಲ ಎನ್ನುವ ಸ್ಪಷ್ಟ ಉತ್ತರ ಬೇಕು ಎಂದು ರೈತರು ಪಟ್ಟು ಹಿಡಿದಿದ್ದರು. ಆ ವೇಳೆ ರೈತರ ಪ್ರತಿಭಟನೆಗೆ ಅನೇಕರು ಬೆಂಬಲ ನೀಡಿದ್ದಾರೆ. ಅನೇಕ ಸಿನಿಮಾ ಮತ್ತು ಕ್ರೀಡಾ ತಾರೆಯರು ರೈತರ ಬೆನ್ನಿಗೆ ನಿಂತಿದ್ದರು. ಆ ಸಮಯದಲ್ಲಿ ನಟ ದಿಲ್ಜಿತ್ ದೊಸಾಂಜ್(Diljit Dosanjh) ಪ್ರತಿಭಟನಾ ನಿರತ ರೈತರಿಗೆ 1 ಕೋಟಿ ರೂಪಾಯಿ ನೀಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು.
ಪ್ರತಿಭಟನಾ ರೈತರಿಗೆ ಬೆಚ್ಚಗಿನ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ನೀಡಲು ದಿಲ್ಜಿತ್ 1 ಕೋಟಿ ನೀಡಿದ್ದರು. ಪಂಜಾಬ್ ಮೂಲಕ ನಟ ಮತ್ತು ಗಾಯಕ ದಿಲ್ಜಿತ್ ಆರಂಭದಿಂದನೂ ರೈತರ ಬೆಂಬಲಕ್ಕೆ ನಿಂತಿದ್ದರು. ದೆಹಲಿಯಲ್ಲಿ ಸಿಕ್ಕಾಪಟ್ಟೆ ಚಳಿ ಇದೆ. ಚಳಿಯ ಮಧ್ಯೆಯೂ ಸರ್ಕಾರದ ವಿರುದ್ಧ ರಸ್ತೆಯಲ್ಲೇ ಪ್ರತಿಭಟನೆಗೆ ಮುಂದಾಗಿರುವ ಲಕ್ಷಾಂತರ ಮಂದಿ ರೈತರಿಗೆ ಬೆಚ್ಚಗಿನ ವಸ್ತ್ರ, ಬೆಡ್ ಶೀಟ್ ಕೊಳ್ಳಲು 1 ಕೋಟಿ ನೀಡಿದ್ದಾರೆ ಎಂದು ಹೇಳಲಾಗಿತ್ತು.
ಹೀಗೆ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್ ರೈತರು ನಡೆಸಿದ್ದ ಬೃಹತ್ ಪ್ರತಿಭಟನೆಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದ ಪಂಜಾಬಿ ಗಾಯಕ, ನಟ ದಿಲ್ಜಿತ್ ದೋಸಾಂಜ್ ಅಂದು ಬಿಜೆಪಿ(BJP)ಗರ ಅಸಹನೆಗೆ ಗುರಿಯಾಗಿದ್ದರು. ಇದೇ ವಿಚಾರವಾಗಿ ಈಗಿನ ಬಿಜೆಪಿ ಸಂಸದರು ಹಾಗೂ ದಿಲ್ಜಿತ್ ದೋಸಾಂಜ್ ವಾಕ್ಸಮರವೂ ನಡೆದಿತ್ತು. ಆದರೀಗ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಬಿಜೆಪಿ, ಬಲಪಂಥಿಯರ ಟೀಕೆಗೆ ಗುರಿಯಾಗಿದ್ದ ಗಾಯಕ ದಿಲ್ಜಿತ್ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರನ್ನು ಭೇಟಿಯಾಗಿದ್ದಾರೆ.
ಹೌದು ಹೊಸ ವರ್ಷದ ದಿನ ಗಾಯಕ ದಿಲ್ಜಿತ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು, ಮೋದಿಯ ಕಾರ್ಯ ಶೈಲಿಯ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೇ ದಿಲ್ಜಿತ್ ಮೋದಿ ಹಾಗೂ ಅವರ ತಾಯಿ ಜೊತೆಗಿನ ಮಮತೆಯ ಬಗ್ಗೆಯೂ ಮಾತಾನಾಡಿದ್ದು, ಗಂಗಾ ನದಿ ಶುದ್ಧೀಕರಣಕ್ಕೆ ಪ್ರಧಾನಿ ಅವರು ಕೈಗೊಂಡ ಕಾರ್ಯಗಳ ಕುರಿತಾಗಿಯೂ ಹಾಡಿ ಹೊಗಳಿದ್ದಾರೆ.
https://twitter.com/diljitdosanjh/status/1874504293606404108
ಇನ್ನು ಮೋದಿ ಅವರು ಕೂಡ ನಿಮ್ಮ ಹೆಸರು ದಿಲ್ಜಿತ್ ಆಗಿದ್ದು, ನೀವು ಎಲ್ಲರ ಹೃದಯವನ್ನು ಗೆದ್ದಿದ್ದೀರಿ ಎಂದು ಪ್ರಶಂಸಿಸಿದ್ದಾರೆ. ನಂತರ ದಿಲ್ಜಿತ್ ಹಾಡಿದ ಪಂಜಾಬಿ ಹಾಡಿಗೆ ಮೋದಿ ತಲೆದೂಗಿದರು. ಪಕ್ಕದಲ್ಲೇ ಇದ್ದ ಟೇಬಲ್ ತಟ್ಟಿ ಗಾಯನಕ್ಕೆ ತಾಳ ಬೆರೆಸಿದರು ಮೋದಿ. ಈ ಅಪೂರ್ವ ಸಂಗಮದ ವಿಡಿಯೋವನ್ನು ದಿಲ್ಜಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಮೂಲಕ 2025ಕ್ಕೆ ಅತ್ಯಂತ ಅದ್ಭುತ ಆರಂಭ ಸಿಕ್ಕಿದ್ದು, ಇದೊಂದು ಸ್ಮರಣೀಯ ದಿನವಾಗಿ ಉಳಿಯಲಿದೆ. ಸಂಗೀತ ಸೇರಿದಂತೆ ನಾವು ಸಹಜವಾಗಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೇವೆ ಎಂದು ಕ್ಯಾಷ್ಷನ್ ನೀಡಿ ದಿಲ್ಜಿತ್ ಅವರು ಪ್ರಧಾನ ಮಂತ್ರಿಯೊಂದಿಗಿನ ಭೇಟಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
View this post on Instagram A post shared by Narendra Modi (@narendramodi)
ಪಿಎಂ ಮೋದಿ ಅವರು ಸಹ ತಮ್ಮ Xಖಾತೆಯಲ್ಲಿ ದಿಲ್ಜಿತ್ರನ್ನು ಭೇಟಿಯಾದ ಬಗ್ಗೆ ಹಂಚಿಕೊಂಡಿದ್ದಾರೆ. “ದಿಲ್ಜಿತ್ ದೋಸಾಂಜ್ ಅವರೊಂದಿಗೆ ಉತ್ತಮ ಸಂವಾದ ನಡೆಯಿತು. ಅವರು ನಿಜವಾಗಿಯೂ ಬಹುಮುಖ ಪ್ರತಿಭೆ ಮತ್ತು ಸಂಪ್ರದಾಯದ ಮಿಶ್ರಣ. ನಾವು ಸಂಗೀತ, ಸಂಸ್ಕೃತಿ ಮತ್ತು ಹೆಚ್ಚಿನವುಗಳೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ವಿವಾದಿತ ಅಜ್ಮೀರ್ ಷರೀಫ್ ದರ್ಗಾಕ್ಕೆ 11ನೇ ಬಾರಿ ಪ್ರಧಾನಿಯಿಂದ ʼಚಾದರ್ʼ ಅರ್ಪಣೆ