ಮನೆ ಸಮೀಪದ ಕೆರೆಯಲ್ಲಿ ಬಿದ್ದು 5 ವರ್ಷದ ಅವಳಿ ಸಹೋದರರು ಸಾವು
ಮನೆ ಸಮೀಪದ ಕೆರೆಯಲ್ಲಿ ಬಿದ್ದು ಐದು ವರ್ಷದ ಇಬ್ಬರು ಅವಳಿ ಸಹೋದರರು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಳ್ಯ ಗ್ರಾಮದ ಕಡೀರದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಮೃತ ಬಾಲಕರು ಮುರುಳ್ಯ ಗ್ರಾಮದ ಕಡೀರ ನಿವಾಸಿ ವಸಂತ್ ಅವರ ಇಬ್ಬರು ಪುತ್ರರು ಎಂದು ತಿಳಿದುಬಂದಿದೆ.