ತೀವ್ರ ಬರಸ್ಥಿತಿ; ಮಧ್ಯಂತರ ಆರ್ಥಿಕ ನೆರವಿಗಾಗಿ ಪ್ರಧಾನಿ ಮೋದಿಗೆ ಸಿಎಂ ಪತ್ರ
ಪ್ರಸ್ತುತ ಮಾನ್ಸೂನ್ನಲ್ಲಿ ಗಣನೀಯ ಮಳೆ ಕೊರತೆ ಈ ಎಲ್ಲ ವಲಯಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿರುವುದು ಗಂಭೀರ ಕಳವಳದ ವಿಷಯ. 40 ಲಕ್ಷ ಹೆಕ್ಟೇರ್ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಬರ ಪರಿಹಾರ ಕ್ರಮಗಳಿಗೆ ಆರ್ಥಿಕ ನೆರವು ಒದಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರು ಕೋರಿದ್ದಾರೆ.