ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಂಬಿಬಿಎಸ್ ಮುಗಿಸಿದ ಬೆನ್ನಲ್ಲೇ ಸ್ಟಾರ್‌ ನಟಿಗೆ ಟ್ರೀಟ್‌ಮೆಂಟ್‌ ನೀಡಿದ ʻಡಾಕ್ಟರ್‌ʼ ಶ್ರೀಲೀಲಾ

Sreeleela: ನಟಿ ಶ್ರೀಲೀಲಾ ಅವರು ಇತ್ತೀಚೆಗಷ್ಟೇ ತಮ್ಮ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದು, ಈಗ ಸಹನಟಿ ರಾಶಿ ಖನ್ನಾ ಅವರ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ವೈರಲ್ ಜ್ವರದಿಂದ ಬಳಲುತ್ತಿದ್ದ ರಾಶಿ ಖನ್ನಾ, ಶ್ರೀಲೀಲಾ ಅವರ ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಖ್ಯಾತ ನಟಿಗೆ ಚಿಕಿತ್ಸೆ ನೀಡಿದ ʻಡಾಕ್ಟರ್‌ʼ ಶ್ರೀಲೀಲಾ!

-

Avinash GR
Avinash GR Mar 8, 2026 3:19 PM

ಸ್ಯಾಂಡಲ್‌ವುಡ್‌ ನಟಿ ಶ್ರೀಲೀಲಾ ಅವರು ಸದ್ಯ ಟಾಲಿವುಡ್‌ನಲ್ಲಿ ಎಂಥ ಕ್ರೇಜ್‌ ಸೃಷ್ಟಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಎಂಬಿಬಿಎಸ್‌ ಡಿಗ್ರಿಯನ್ನು ಕೂಡ ಪಡೆದುಕೊಂಡಿದ್ದು ಶ್ರೀಲೀಲಾ ಅವರ ಸಾಧನೆಯೇ ಸರಿ. ಅಂದಹಾಗೆ, ಡಾಕ್ಟರ್‌ ಆಗಿರುವ ಶ್ರೀಲೀಲಾ, ಈಚೆಗೆ ಒಬ್ಬ ಸ್ಟಾರ್‌ ನಟಿರಿಗೆ ಟ್ರೀಟ್‌ಮೆಂಟ್‌ ಕೊಟ್ಟಿದ್ದರಂತೆ. ಆ ಬಗ್ಗೆ ಸ್ಟಾರ್‌ ನಟಿಯೇ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ರಾಶಿ ಖನ್ನಾ!

'ಉಸ್ತಾದ್ ಭಗತ್ ಸಿಂಗ್' ಸಿನಿಮಾದಲ್ಲಿ ನಟನೆ

ಪವನ್ ಕಲ್ಯಾಣ್ ಅವರೊಂದಿಗೆ 'ಉಸ್ತಾದ್ ಭಗತ್ ಸಿಂಗ್' ಸಿನಿಮಾದಲ್ಲಿ ರಾಶಿ ಖನ್ನಾ ಮತ್ತು ಶ್ರೀಲೀಲಾ ಅವರು ಒಟ್ಟಿಗೆ ನಟಿಸಿದ್ದಾರೆ. ಈ ಮಧ್ಯೆ ರಾಶಿ ಖನ್ನಾಗೆ ಆರೋಗ್ಯ ಸ್ವಲ್ಪ ಹದಗೆಟ್ಟಿದೆಯಂತೆ. ಈ ವಿಷಯವನ್ನು ಅವರೇ ಹಂಚಿಕೊಂಡಿದ್ದು, ತಮಗೆ ಗಂಟಲು ನೋವು ಮತ್ತು ಜ್ವರ ಕಾಣಿಸಿಕೊಂಡಿದೆ ಹಾಗೂ ವೈರಲ್ ಫೀವರ್‌ನಿಂದ ಬಳಲುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಅವರಿಗೆ ಒಬ್ಬರು ಡಾಕ್ಟರ್ ಚಿಕಿತ್ಸೆ ನೀಡಿದ್ದಾರಂತೆ. "ಆ ಡಾಕ್ಟರ್‌ ತುಂಬಾ ಚೆನ್ನಾಗಿ ಚಿಕಿತ್ಸೆ ನೀಡಿದ್ದು, ತಾನು ಅವರನ್ನು ಎಲ್ಲರಿಗೂ ರೆಕಮೆಂಡ್ ಮಾಡುತ್ತೇನೆ" ಎಂದು ರಾಶಿ ಖನ್ನಾ ಹೇಳಿದ್ದಾರೆ. ಹೀಗೆ ಟ್ರೀಟ್‌ಮೆಂಟ್‌ ಕೊಟ್ಟವರು ಶ್ರೀಲೀಲಾ.

ʻನಿಮ್ ಹುಡುಗಿ ಕೊಟ್ಟ ಮಾತು ಉಳಿಸಿಕೊಂಡಿದ್ದಾಳೆʼ; ಎಂಬಿಬಿಎಸ್‌ ಪದವಿ ಪಡೆದ ಖುಷಿಯಲ್ಲಿ ಡಾ. ಶ್ರೀಲೀಲಾ; ಇಲ್ಲಿವೆ ಘಟಿಕೋತ್ಸವದ ಫೋಟೋಗಳು

ವೈರಲ್‌ ಆಯ್ತು ವಿಡಿಯೋ

ಡಾಕ್ಟರ್ ಶ್ರೀಲೀಲಾ ಅವರು ಇತ್ತೀಚೆಗಷ್ಟೇ ತಮ್ಮ ಎಂಬಿಬಿಎಸ್ (MBBS) ಪೂರ್ಣಗೊಳಿಸಿದ್ದು, ಸದ್ಯ ರಾಶಿ ಖನ್ನಾ ಅವರಿಗೆ ವಿಶೇಷ ಚಿಕಿತ್ಸೆ ನೀಡಿದ್ದಾರಂತೆ. ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರಾಶಿ ಖನ್ನಾ, ಆ ಸಂತೋಷವನ್ನು ಹಂಚಿಕೊಳ್ಳುತ್ತಾ ಒಂದು ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಶ್ರೀಲೀಲಾ ಕೂಡ ಕಾಣಿಸಿಕೊಂಡು ನಗು ಚೆಲ್ಲಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗುತ್ತಿದೆ.

ಕಿಸ್‌ ಬ್ಯೂಟಿಯನ್ನು ಇನ್ಮೇಲೆ ಡಾ. ಶ್ರೀಲೀಲಾ ಅಂತ ಕರೀಬೇಕು! MBBS ಡಿಗ್ರಿ ಪಡೆದ ನಟಿ, ಘಟಿಕೋತ್ಸವದ ವಿಡಿಯೋ ವೈರಲ್!‌

ಫ್ಯಾನ್ಸ್‌ ಏನಂದ್ರು?

ಈ ವಿಡಿಯೋ ನೋಡಿದ ಫ್ಯಾನ್ಸ್‌, "ನಮಗೂ ಜ್ವರ ಬಂದರೆ ಚೆನ್ನಾಗಿರುತ್ತಿತ್ತು" ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಆದರೆ ಶ್ರೀಲೀಲಾ ಮಾತ್ರ ಸದ್ಯ ಎಲ್ಲರಿಗೂ ಚಿಕಿತ್ಸೆ ನೀಡುವಷ್ಟು ಫ್ರೀ ಇಲ್ಲ. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಭವಿಷ್ಯದಲ್ಲಿ ಅವರು ಪ್ರಾಕ್ಟೀಸ್ ಆರಂಭಿಸಿ, ಜನರಿಗೆ ಟ್ರೀಟ್‌ಮೆಂಟ್‌ ನೀಡುತ್ತಾರಾ? ಕಾದುನೋಡಬೇಕು.

ರಾಶಿ ಖನ್ನಾ ಹಂಚಿಕೊಂಡ ವಿಡಿಯೋ ಇಲ್ಲಿದೆ



ಮಾ.19ಕ್ಕೆ 'ಉಸ್ತಾದ್ ಭಗತ್ ಸಿಂಗ್' ರಿಲೀಸ್‌

ಇನ್ನು, ಪವನ್‌ ಕಲ್ಯಾಣ್‌, ರಾಶಿ ಖನ್ನಾ, ಶ್ರೀಲೀಲಾ ಅವರು ಒಟ್ಟಿಗೆ ನಟಿಸಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾವು ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವುದರಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಪವನ್ ಕಲ್ಯಾಣ್ ಅವರು ಶನಿವಾರವಷ್ಟೇ ತಮ್ಮ ಡಬ್ಬಿಂಗ್ ಕೆಲಸಗಳನ್ನು ಆರಂಭಿಸಿದ್ದಾರೆ. ಈ ಚಿತ್ರಕ್ಕೆ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದು, ಹಾಡುಗಳಿಗೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರೆ, ಹಿನ್ನೆಲೆ ಸಂಗೀತವನ್ನು ಎಸ್‌ ಥಮನ್‌ ನೀಡುತ್ತಿದ್ದಾರೆ.