ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rashmika Mandanna : ರಶ್ಮಿಕಾಗೆ ಸ್ಪೆಷಲ್‌ ಉಡುಗೊರೆ ಕೊಟ್ಟ ವಿಜಯ್ ದೇವರಕೊಂಡ ತಾಯಿ!

Rashmika Vijay: ಕಳೆದ 8 ವರ್ಷಗಳಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ವಿಜೃಂಭಣೆಯಿಂದ ನೆರವೇರುತ್ತಿದೆ. ವಿವಾಹಪೂರ್ವ ಸಂಭ್ರಮವೂ ಅತ್ಯಂತ ಅದ್ಧೂರಿಯಾಗಿಯೇ ನೆರವೇರಿದೆ. ತಾರೆಯರು ವಿರೋಶ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದರು. ರಶ್ಮಿಕಾಗೆ ವಿಜಯ್ ತಾಯಿ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ.

ರಶ್ಮಿಕಾಗೆ ಸ್ಪೆಷಲ್‌ ಉಡುಗೊರೆ ಕೊಟ್ಟ ವಿಜಯ್ ದೇವರಕೊಂಡ ತಾಯಿ!

ರಶ್ಮಿಕಾ ಮಂದಣ್ಣ -

Yashaswi Devadiga
Yashaswi Devadiga Feb 26, 2026 10:22 AM

ಕಳೆದ 8 ವರ್ಷಗಳಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ವಿವಾಹವು ವಿಜೃಂಭಣೆಯಿಂದ ನೆರವೇರುತ್ತಿದೆ. ವಿವಾಹಪೂರ್ವ ಸಂಭ್ರಮವೂ ಅತ್ಯಂತ ಅದ್ಧೂರಿಯಾಗಿಯೇ ನೆರವೇರಿದೆ. ತಾರೆಯರು ವಿರೋಶ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದರು. ರಶ್ಮಿಕಾಗೆ ವಿಜಯ್ ತಾಯಿ (Vijay Mother) ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಉಡುಗೊರೆ ಪಡೆದ ರಶ್ಮಿಕಾ ಭಾವುಕರಾಗಿದ್ದಾರೆ ಎಂದು ವರದಿಯಾಗಿದೆ.

ಚಿನ್ನದ ಬಳೆ

ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಅವರ ತಾಯಿ, ತಮ್ಮ ಕುಟುಂಬದಲ್ಲಿ ತಲೆ ತಲೆಮಾರುಗಳಿಂದಲೂ ಬಳುವಳಿಯಾಗಿ ಬಂದಿರುವ ಚಿನ್ನದ ಬಳೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rashmika-Vijay Wedding: ಇಂದು ರಶ್ಮಿಕಾ-ವಿಜಯ್‌ ಅದ್ಧೂರಿ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ

ಸಂಗೀತ್ ಕಾರ್ಯಕ್ರಮದಲ್ಲಿ ಮಾಧವಿ ಅವರು ಸೊಸೆಗೆ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದು, ಅತ್ಯಂತ ಅಮೂಲ್ಯವೂ ಅಪರೂಪವೂ ಆಗಿರುವ ಬಳೆಗಳನ್ನು ಪಡೆದು ರಶ್ಮಿಕಾ ಅವರು ಭಾವುಕರಾಗಿ, ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಅವರ ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ರಶ್ಮಿಕಾಗೆ ಆಹ್ವಾನ ಇದ್ದೇ ಇರುತ್ತಿತ್ತು.

ತೆಲುಗು ಹಿಂದೂ ಆಚರಣೆ

ವರದಿಯ ಪ್ರಕಾರ, ವಿಜಯ್ ಮತ್ತು ರಶ್ಮಿಕಾ ಅವರ ವಿವಾಹದ ಶುಭ ಮುಹೂರ್ತವನ್ನು ಬೆಳಿಗ್ಗೆ 8 ಗಂಟೆಗೆ ನಿಗದಿಪಡಿಸಲಾಗಿದೆ. ತೆಲುಗು ಮತ್ತು ಕೊಡವ ಸಂಪ್ರದಾಯಗಳನ್ನು ಗೌರವಿಸಲು ಎರಡು ವಿಭಿನ್ನ ಸಮಾರಂಭಗಳಲ್ಲಿ ವಿವಾಹವಾಗಲಿದ್ದಾರೆ ಎಂದು ಈ ಹಿಂದೆ ಬಹಿರಂಗಪಡಿಸಲಾಗಿತ್ತು ಮೊದಲ ವಿವಾಹ ಸಮಾರಂಭವು ವಿಜಯ್ ದೇವರಕೊಂಡ ಅವರ ಪರಂಪರೆಯನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ತೆಲುಗು ಹಿಂದೂ ಆಚರಣೆಗಳನ್ನು ಅನುಸರಿಸುತ್ತದೆ.

ಇದು ಬೆಳಿಗ್ಗೆ 8 ಗಂಟೆಗೆ ನಡೆಯುವ ಸಮಾರಂಭ. ಅದರ ನಂತರ ಸಂಜೆ ರಶ್ಮಿಕಾ ಮಂದಣ್ಣ ಅವರು ಕೊಡವ ಸಂಪ್ರದಾಯದಲ್ಲಿ ವಿವಾಹ ಆಗಲಿದ್ದಾರೆ.ಜೋಡಿ ತಮ್ಮ ಅತಿಥಿಗಳಿಗಾಗಿ ವಿಶೇಷ ಜಪಾನೀಸ್ ಭೋಜನದೊಂದಿಗೆ ತಮ್ಮ ವಿವಾಹಪೂರ್ವ ಸಂಭ್ರಮವನ್ನು ಪ್ರಾರಂಭಿಸಿದರು. ಇದರ ನಂತರ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯ ನಡೆಯಿತು. ಮರುದಿನ, ಸಂಗೀತ ರಾತ್ರಿಯನ್ನು ಆಯೋಜಿಸಿದ್ದರು. ಸಂಗೀತದ ನಂತರ, ನಟರು ಹಲ್ದಿ ಸಮಾರಂಭವನ್ನು ಸಹ ಆಯೋಜಿಸಿದರು.

ಇದನ್ನೂ ಓದಿ: Rashmika Mandanna: ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಫೋಟೋಗಳಿವು!

ರಶ್ಮಿಕಾ ಮತ್ತು ವಿಜಯ್‌ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ‘ರಶ್ಮಿಕಾ ಮತ್ತು ವಿಜಯ್‌ ಹಾಗೂ ಅವರ ಕುಟುಂಬಸ್ಥರಿಗೆ ಅಭಿನಂದನೆಗಳು. ಇದು ಇಬ್ಬರ ಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಒಟ್ಟಿಗೆ ಸಪ್ತಪದಿ ತುಳಿದು ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ. ಮುಂದಿನ ದಿನಗಳು ಕನಸುಗಳು ಮತ್ತು ಅವುಗಳ ಈಡೇರಿಕೆಯಿಂದ ತಂಬಿರಲಿ. ಇಬ್ಬರಿಗೂ ಶುಭಾಶಯಗಳು’ ಎಂದಿದ್ದಾರೆ.