ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohanlal: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೋಹನ್ ಲಾಲ್; ಆ ಕ್ಷಣ ಹೇಗಿತ್ತು ಗೊತ್ತಾ?

ಮಂಗಳವಾರ ನಡೆದ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಲಯಾಳಂ ನಟ ಮೋಹನ್ ಲಾಲ್ ಅವರಿಗೆ ಭಾರತದ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೋಹನ್ ಲಾಲ್

-

Vishakha Bhat Vishakha Bhat Sep 24, 2025 12:14 PM

ನವದೆಹಲಿ: ಮಂಗಳವಾರ ನಡೆದ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಲಯಾಳಂ ನಟ ಮೋಹನ್ ಲಾಲ್ (Mohanlal) ಅವರಿಗೆ ಭಾರತದ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮೋಹನ್ ಲಾಲ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದಾಗ ಸಭಾಂಗಣದಲ್ಲಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಚಿತ್ರರಂಗದಲ್ಲಿ ಮೋಹನ್‌ಲಾಲ್‌ ಮಾಡಿದ ಸಾಧನೆಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

65 ವರ್ಷದವರಾದ ಮೋಹನ್ ಲಾಲ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಮಲಯಾಳಂ ಚಲನಚಿತ್ರೋದ್ಯಮದ ಅತ್ಯಂತ ಕಿರಿಯ ವ್ಯಕ್ತಿ ಎಂದೆನಿಸಿದ್ದಾರೆ. ಕೇರಳದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ ಚಲನಚಿತ್ರ ನಿರ್ಮಾಪಕ ಅಡೂರ್ ಗೋಪಾಲಕೃಷ್ಣನ್, ಅವರನ್ನು 2004 ರಲ್ಲಿ ಗೌರವಿಸಲಾಯಿತು. ಮೋಹನ್ ಲಾಲ್ ಅವರನ್ನು ಗೌರವಿಸಲು, ತೀರ್ಪುಗಾರರು ಅವರ ಶ್ರೇಷ್ಠ ವೃತ್ತಿಜೀವನ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಯನ್ನು ಎತ್ತಿ ತೋರಿಸುವ ವಿಶೇಷ ಕಿರುಚಿತ್ರವನ್ನು ಪ್ರದರ್ಶಿಸಿದರು.

ಮೋಹನ್‌ಲಾಲ್‌ಗೆ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಇವರು, 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1978 ರಲ್ಲಿ ತಿರನೊಟ್ಟಂ ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು , ಇದು 2005 ರ ನಂತರ ಬಿಡುಗಡೆಯಾಯಿತು. ನಾಟಕ, ಆಕ್ಷನ್, ಹಾಸ್ಯ ಮತ್ತು ಥ್ರಿಲ್ಲರ್‌ಗಳನ್ನು ಒಳಗೊಂಡ ಬಹುಮುಖ ಅಭಿನಯಗಳೊಂದಿಗೆ ಅವರು 1980 ಮತ್ತು 1990 ರ ದಶಕಗಳಲ್ಲಿ ಬೇಡಿಕೆಯ ನಟ ಎಂದೆಸಿನಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Karan Johar: ಶಾರುಖ್‌ ಖಾನ್‌ ಮಗ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಕರಣ್ ಜೋಹರ್!

ಇದೇ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಶಾರುಖ್ ಖಾನ್ "ಜವಾನ್" ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಇದು ಅವರ 33 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 12th ಫೇಲ್​ ಚಿತ್ರಕ್ಕೆ ವಿಕ್ರಾಂತ್ ಮಾಸ್ಸಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರೆ, ಶ್ರೀಮತಿ ಚಟರ್ಜಿ vs ನಾರ್ವೆ ಚಿತ್ರಕ್ಕಾಗಿ ರಾಣಿ ಮುಖರ್ಜಿಗೆ ಪ್ರಶಸ್ತಿ ಸಂದಿದೆ.