ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಅಮೃತಧಾರೆ ಸೀರಿಯಲ್‌ ಮಾಡುವಾಗಲೇ ನಾವು ಪ್ರೀತಿಸ್ತಿದ್ವಿʼ; ರಾಣವ್‌ ಜೊತೆಗಿನ ಲವ್‌ ಸ್ಟೋರಿ ಬಿಚ್ಚಿಟ್ಟ ನಟಿ ರಾಧಾ ಭಗವತಿ

Radha Bhagavati Raanav Love Story: 'ಅಮೃತಧಾರೆ' ಧಾರಾವಾಹಿಯ ಜೈದೇವ್-ಮಲ್ಲಿ ಪಾತ್ರಧಾರಿಗಳಾದ ರಾಣವ್ ಮತ್ತು ರಾಧಾ ಭಗವತಿ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ತಮ್ಮ ಲವ್‌ ಸ್ಟೋರಿ ಬಗ್ಗೆ ʻವಿಶ್ವವಾಣಿʼ ಟಿವಿಗೆ ನೀಡಿದ ಸಂದರ್ಶನದಲ್ಲಿ ರಾಧಾ ಭಗವತಿ ಮನಬಿಚ್ಚಿ ಮಾತನಾಡಿದ್ದಾರೆ.

ಅಮೃತಧಾರೆ ಸೆಟ್‌ನಲ್ಲಿ ಶುರುವಾಯ್ತು ಪ್ರೀತಿ; ಇದು ರಾಧಾ ಭಗವತಿ ಲವ್ ಸ್ಟೋರಿ

-

Avinash GR
Avinash GR Mar 25, 2026 7:48 PM

'ಅಮೃತಧಾರೆ' ಖ್ಯಾತಿಯ ರಾಣವ್ ಮತ್ತು 'ಭಾರ್ಗವಿ ಎಲ್ಎಲ್ ಬಿ' ನಟಿ ರಾಧಾ ಭಗವತಿ ಈಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂದಹಾಗೆ, ಇವರಿಬ್ಬರು ʻಅಮೃತಧಾರೆʼ ಧಾರಾವಾಹಿಯಲ್ಲಿ ಜೈದೇವ್‌ - ಮಲ್ಲಿ ಎಂಬ ಪಾತ್ರಗಳಲ್ಲಿ ನಟಿಸಿ, ಜನಪ್ರಿಯರಾಗಿದ್ದರು. ಇದೀಗ ನಿಜ ಜೀವನದಲ್ಲೂ ಒಂದಾಗಿದ್ದಾರೆ. ಶೀಘ್ರದಲ್ಲೇ ಮದುವೆ ಆಗುತ್ತಿದ್ದಾರೆ. ಈಚೆಗೆ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ರಾಧಾ ಭಗವತಿ ತಮ್ಮ ಲವ್‌ ಸ್ಟೋರಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಧಾ ಭಗವತಿ ಹೇಳಿದ್ದೇನು?

"ನಮ್ಮದು ತುಂಬಾ ಸಿಂಪಲ್‌ ಲವ್‌ ಸ್ಟೋರಿ. ನಾವು ಯಾವಾಗಲೂ ಸಿನಿಮಾ ಮತ್ತಿತರ ವಿಚಾರಗಳನ್ನು ಇಟ್ಟುಕೊಂಡು ಮಾತನಾಡುತ್ತಿದ್ದೆವು. ನಮ್ಮಿಬ್ಬರ ಮಧ್ಯೆ ಒಳ್ಳೆಯ ವೈಬ್‌ ಮ್ಯಾಚ್‌ ಆಗುತ್ತಿತ್ತು. ನಂತರ ನಮ್ಮ ನಡುವೆ ಸ್ನೇಹ ಶುರುವಾಯಿತು. ಆಗ ನಮ್ಮ ಮಧ್ಯೆ ನಮಗೆ ಗೊತ್ತಿಲ್ಲದೇ ಫೀಲಿಂಗ್ಸ್‌ ಶುರುವಾಯಿತು. ಅದನ್ನು ನಾವು ಯಾವತ್ತೂ ಹೇಳಿಕೊಂಡಿರಲಿಲ್ಲ. ಆದರೆ ರಾಧಾ ಅಂದ್ರೆ ನಂಗಿಷ್ಟ ಅಂತ ತಮ್ಮ ತಾಯಿ ಬಳಿಕ ರಾಣವ್ ಹೇಳಿಕೊಂಡಿದ್ದರು" ಎಂದು ರಾಧಾ ಭಗವತಿ ತಿಳಿಸಿದ್ದಾರೆ.

ರಾಣವ್‌ ಅಮ್ಮ ಪೋನ್‌ ಮಾಡಿ ಹೇಳಿದ್ರು

"ರಾಣವ್‌ನ ಅವರ ಮನೆಯವರು ಪಾಪು ಅಂತ ಕರೆಯುತ್ತಾರೆ. ಒಮ್ಮೆ ರಾಣವ್‌ನ ತಾಯಿ ನನಗೆ ಕರೆಮಾಡಿ, ʻರಾಣವ್ ನಿನ್ನ ಇಷ್ಟಪಡ್ತಾ ಇದ್ದಾನೆ ರಾಧಾʼ ಎಂದು ಹೇಳಿದರು. ಆಗ ನಾನು, ಇದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದೆ. ಆನಂತರ ರಾಣವ್‌ ನನ್ನ ಇಷ್ಟಪಡ್ತಾ ಇರೋದು ಗೊತ್ತಿದ್ದರಿಂದ, ನಾನೇ ಮೊದಲು ಪ್ರಪೋಸ್‌ ಮಾಡಿದೆ. ಆದರೆ ಅವರು ಒಂದು ವಾರ ಆಟ ಆಡಿಸಿದರು, ಮೊದಲಿಗೆ ಒಪ್ಪಿಕೊಳ್ಳಲಿಲ್ಲ" ಎಂದು ರಾಧಾ ಭಗವತಿ ಹೇಳಿದ್ದಾರೆ.

Serial Time: ಬಹುಮುಖ ಪ್ರತಿಭೆ, ನಟಿ ರಾಧಾ ಭಗವತಿಗೆ ಸಿಕ್ಕಿದೆ ಈ ಸೀರಿಯಲ್‌ನಲ್ಲಿ ಲೀಡ್ ರೋಲ್

ನನ್ನ ಪೋಸ್ಟ್‌ಗೆ ತುಂಬಾ ಲೈಕ್ಸ್‌ ಬಂದಿದೆ

"ಆಮೇಲೆ ರಾಣವ್‌ ನನಗೆ ಪ್ರಪೋಸ್‌ ಮಾಡಿದರು. ಆಗ ನಾನು ಮೂರು ದಿನ ಆಟ ಆಡಿಸಿದೆ. ಕೊನೆಗೆ ನಾವು ಒಪ್ಪಿಕೊಂಡೆವು. ಈಚೆಗೆ ನಾವು ಹಾಕಿದ ಎಂಗೇಜ್‌ ಪೋಸ್ಟ್‌ ವೈರಲ್‌ ಆಯಿತು. ಮಲ್ಲಿ ಮತ್ತು ಜೈದೇವ್‌ ನಿಜ ಜೀವನದಲ್ಲೂ ಒಂದಾಗಬೇಕು ಎಂಬ ಆಸೆ ಎಷ್ಟೋ ಜನರಿಗೆ ಇತ್ತು. ನಾನು ಹಾಕಿರುವ ಪೋಸ್ಟ್‌ ಒಂದು ಮುಕ್ಕಾಲು ಕೋಟಿ ವೀವ್ಸ್‌ ಆಗಿದೆ. 4.50 ಲಕ್ಷ ಲೈಕ್ಸ್‌ ಬಂದಿದೆ. ಇಷ್ಟೊಂದು ಜನರ ಆಶೀರ್ವಾದ ಸಿಕ್ತಲ್ಲ ಅಂತ ಖುಷಿ ಇದೆ. ನಮ್ಮ ಮದುವೆ ಡೇಟ್‌ ಫಿಕ್ಸ್‌ ಕುರಿತ ಚರ್ಚೆ ನಡೆಯುತ್ತಿದೆ" ಎಂದು ರಾಧಾ ಭಗವತಿ ತಿಳಿಸಿದ್ದಾರೆ.

ಸಮಾಜದಲ್ಲಿ ನಾವು ಒಳ್ಳೆಯ ಕಪಲ್‌ ಆಗಿರಬೇಕು

"ನಾವು ಅಮೃತಧಾರೆ ಧಾರಾವಾಹಿ ಮಾಡುವಾಗಲೇ ರಿಲೇಷನ್‌ಶಿಪ್‌ನಲ್ಲಿ ಇದ್ದೆವು. ಆದರೆ ಅದನ್ನು ಎಲ್ಲಿಯೂ ನಾವು ಅದನ್ನು ಬಿಟ್ಟುಕೊಟ್ಟಿರಲಿಲ್ಲ. ಕೆಲವರಿಗೆ ಮಾತ್ರ ಸಣ್ಣದಾಗಿ ಅನುಮಾನಗಳಿತ್ತು, ಅದಕ್ಕೆ ನಾವು ಪ್ರತಿಕ್ರಿಯಿಸಲು ಹೋಗಿರಲಿಲ್ಲ. ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ಗೆ ಹೋಗು ಅಂತ ಹೇಳಿದ್ದೇ ರಾಣವ್‌. ಅವರು ನನಗೆ ತುಂಬ ಸಪೋರ್ಟಿವ್‌ ಆಗಿದ್ದಾರೆ. ನಾನು ಕೂಡ ಅವರಿಗೆ ಸಪೋರ್ಟಿವ್‌ ಆಗಿದ್ದೇನೆ. ಸಮಾಜದಲ್ಲಿ ನಾವು ಒಳ್ಳೆಯ ಕಪಲ್‌ ಆಗಿರಬೇಕು ಎಂಬ ನಮ್ಮ ಉದ್ದೇಶವಾಗಿದೆ" ಎಂದು ರಾಧಾ ಭಗವತಿ ತಿಳಿಸಿದ್ದಾರೆ.

ರಾಧಾ ಭಗವತಿ ಅವರ ಸಂದರ್ಶನ



ಸಿಪಾಯಿ ಸಿನಿಮಾ ಅಂದ್ರೆ ನಮಗಿಷ್ಟ

ಅಂದಹಾಗೆ, ರಾಧಾ ಮತ್ತು ರಾಣವ್‌ ಅವರದ್ದು ಅಂತರ್ಜಾತಿ ವಿವಾಹ. ಈ ಬಗ್ಗೆ ಮಾತನಾಡಿರುವ ಅವರು, "ಇದು ನಮಗೆ ಸ್ವಲ್ಪ ಕಷ್ಟವಾಯಿತು. ಎರಡು ಕಡೆಯ ಪೋಷಕರು ಇದರ ಬಗ್ಗೆ ಯೋಚಿಸಿದರು. ನಾವು ಪ್ರೀತಿ ಮಾಡುತ್ತಿದ್ದರಿಂದ, ನಾವು ಚೆನ್ನಾಗಿ ಇರ್ತಿವಿ ಎಂಬ ಕಾನ್ಫಿಡೆನ್ಸ್‌ ಅವರಿಗೂ ಇದೆ. ಹಾಗಾಗಿ, ಒಪ್ಪಿಗೆ ನೀಡಿದರು. ಅಮೃತಧಾರೆ ಸೀರಿಯಲ್‌ನಲ್ಲೂ ಸಿಪಾಯಿ ಸಿನಿಮಾದ ಡೈಲಾಗ್‌ ಹೇಳಿದರು. ಅದು ನನಗೆ ತುಂಬಾ ಇಂಪ್ರೆಸ್‌ ಮಾಡಿತ್ತು. ನಮ್ಮಿಬ್ಬರಿಗೂ ಸಿಪಾಯಿ ಸಿನಿಮಾ ಅಂದ್ರೆ ತುಂಬಾ ಇಷ್ಟ" ಎಂದು ರಾಧಾ ಭಗವತಿ ಹೇಳಿಕೊಂಡಿದ್ದಾರೆ.