Bhavya Gowda: Boys vs Girls ಶೋನಿಂದ ಭವ್ಯಾ ಗೌಡ ಹೊರಬರಲು ಕಾರಣ ಬಹಿರಂಗ: ಇಲ್ಲಿದೆ ನೋಡಿ ಮಾಹಿತಿ
ಭವ್ಯಾ ಗೌಡ ಸಹ ಬಾಯ್ಸ್ vs ಗರ್ಲ್ ಎಂಬ ಹೊಸ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಇವರು ಶೋನಲ್ಲಿ ಕಾಣಿಸಿಕೊಳ್ಳಲಿಲ್ಲ. ಶನಿವಾರ ಹಾಗೂ ಭಾನುವಾರ ಪ್ರಸಾರವಾಗಿದ್ದ ಸಂಚಿಕೆಯಲ್ಲಿ ಭವ್ಯಾ ಗೌಡ ಬಂದಿರಲಿಲ್ಲ. ಇದೀಗ ಭವ್ಯಾ ಗೌಡ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬೆನ್ನಲ್ಲೇ ವೀಕೆಂಡ್ನಲ್ಲಿ ಇದೇ ಸಮಯಕ್ಕೆ ಅನುಪಮಾ ಗೌಡ ಸಾರಥ್ಯದಲ್ಲಿ ಬಾಯ್ಸ್ vs ಗರ್ಲ್ ಎಂಬ ಹೊಸ ರಿಯಾಲಿಟಿ ಶೋ ಆರಂಭವಾಗಿದೆ. ಕಳೆದ ಶನಿವಾರ ಹಾಗೂ ಭಾನುವಾರ ಈ ಶೋನ ಗ್ರ್ಯಾಂಡ್ ಓಪನಿಂಗ್ ನಡೆದಿತ್ತು. ಈ ಶೋನ ಬಾಯ್ಸ್ ತಂಡದಲ್ಲಿ ಬಿಗ್ ಬಾಸ್ ಕನ್ನಡ 11ಕಾರ್ಯಕ್ರಮದ ವಿನ್ನರ್ ಹನುಮಂತ ಲಮಾಣಿ, ಧನರಾಜ್, ರಜತ್ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಗರ್ಲ್ಸ್ ತಂಡದಲ್ಲಿ ಚೈತ್ರಾ ಕುಂದಾಪುರ, ಶೋಭಾ ಶೆಟ್ಟಿ ಹಾಗೂ ಐಶ್ವರ್ಯಾ ಸಿಂಧೋಗಿ ಇದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಭವ್ಯಾ ಗೌಡ ಸಹ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಇವರು ಶೋನಲ್ಲಿ ಕಾಣಿಸಿಕೊಳ್ಳಲಿಲ್ಲ.
ಬಿಗ್ ಬಾಸ್ ಸೀಸನ್ 11ರ ಟಿಕೆಟ್ ಟು ಫಿನಾಲೆ ವಾರ ನಡೆಯುವಾಗ ಅನುಪಮಾ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಡೆಯಲಿದೆ ಎಂದ ಮಾಹಿತಿ ನೀಡಿದ್ದರು. ಫಿನಾಲೆ ವಾರದ ದಿನ ಈ ಕಾರ್ಯಕ್ರಮದ ಸ್ಪರ್ಧಿಗಳು ಕೂಡ ಎಂಟ್ರಿ ಕೊಟ್ಟರು. ಆಗ ಫಿನಾಲೆಯಲ್ಲಿದ್ದ ಸ್ಪರ್ಧಿಗಳಾದ ಹನುಮಂತು, ರಜತ್ ಕಿಶನ್ ಮತ್ತು ಭವ್ಯಾ ಗೌಡರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಿದ್ದರು. ಅಲ್ಲಿಗೆ ಈ ನಾಲ್ವರಿಗೆ ಬಿಗ್ ಬಾಸ್ ಮುಗಿಯುವ ಮುನ್ನವೇ ಬಂಪರ್ ಆಫರ್ ಬಂದಿತ್ತು.
ಆದ್ರೆ ಶನಿವಾರ ಹಾಗೂ ಭಾನುವಾರ ಪ್ರಸಾರವಾಗಿದ್ದ ಸಂಚಿಕೆಯಲ್ಲಿ ಭವ್ಯಾ ಗೌಡ ಬಂದಿರಲಿಲ್ಲ. ಬದಲಾಗಿ ಅನಿರೀಕ್ಷಿತವಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ನೀಡಲಾಗಿತ್ತು. ಈ ಎಪಿಸೋಡ್ ಪ್ರಸಾರವಾದ ಬೆನ್ನಲ್ಲೇ ಭವ್ಯಾ ಗೌಡ ಈ ಆಫರ್ ರಿಜೆಕ್ಟ್ ಮಾಡಿಬಿಟ್ರಾ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಯಾಕೆಂದರೆ ಬಿಗ್ ಬಾಸ್ ಮನೆಯೊಳಗೆ ಹೇಳಿದಂತೆ ಭವ್ಯಾ ಇದರಲ್ಲಿ ಭಾಗವಹಿಸಬೇಕಿತ್ತು. ಚೈತ್ರಾ ಹೆಸರು ಇದರಲ್ಲಿ ಇರಲೇ ಇಲ್ಲ. ಭವ್ಯಾ ಜಾಗಕ್ಕೆ ಚೈತ್ರಾರನ್ನು ಕರೆತಂದಿದ್ದು ಯಾಕೆ ಎಂಬ ಅನುಮಾನ ಎಲ್ಲರಲ್ಲಿತ್ತು.
ಆದರೀಗ ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಭವ್ಯಾ ಗೌಡ ಅವರೇ ಉತ್ತರ ನೀಡಿದ್ದಾರೆ. ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಶೂಟಿಂಗ್ ಶುರುವಾಗುವ ಮುನ್ನವೇ ನನ್ನ ಆರೋಗ್ಯದಲ್ಲಿ ಏರುಪೇರಾಯಿತು. ಹಾಗಾಗಿ ನಾನು ಹೋಗಲಿಲ್ಲ. ನಾನು ಬಿಗ್ ಬಾಸ್ ಶೋನಿಂದ ನಮ್ಮ ಮನೆಗೆ ಬಂದ ಮೇಲೆ ನನಗೆ ತುಂಬಾ ಜ್ವರ, ಕೆಮ್ಮು ಮತ್ತು ಶೀತ ಶುರುವಾಗಿತ್ತು. ಆರೋಗ್ಯ ಸರಿಯಾಗಿರಲಿಲ್ಲ. ಇದೇ ಸಮಯಕ್ಕೆ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಶೂಟಿಂಗ್ ಶುರು ಮಾಡಿಬಿಟ್ಟರು. ನನಗೆ ಹುಷಾರಿಲ್ಲದ ಕಾರಣ ನಾನು ಆ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ಸ್ವತಃ ಭವ್ಯಾ ಗೌಡ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ನಾನು ಭಾಗಿಯಾಗದೇ ಇರುವುದಕ್ಕೆ ಆರೋಗ್ಯ ಸಮಸ್ಯೆ ಅಷ್ಟೇ ಕಾರಣ ಹೊರತು ಬೇರೇ ಏನೂ ಅಲ್ಲ. ಅಲ್ಲದೆ ನಾನು ಕೂಡ ಆ ಶೋನಲ್ಲಿ ಭಾಗಿಯಾಗಬೇಕು ಅಂತ ತುಂಬಾ ಟ್ರೈ ಮಾಡಿದ್ದೀನಿ. ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರದಲ್ಲಿ ಇರುವಾಗಲೇ ಅಂತಹದ್ದೊಂದು ಅವಕಾಶ ಹುಡುಕಿ ಬಂದಾಗ ಯಾರು ಬೇಡ ಅಂತ ಹೇಳುತ್ತಾರೆ ಯಾರು ಮಿಸ್ ಮಾಡಿಕೊಳ್ಳುವುದ್ದಕ್ಕೆ ಇಷ್ಟ ಪಡುತ್ತಾರೆ? ಈಗ ಮಿಸ್ ಆಗಿದೆ ಎಂದಿದ್ದಾರೆ ಭವ್ಯಾ.
Trivikram BBK 11: ಎಲ್ಲಾ ಗೊತ್ತಿದ್ರೂ ಬಿಗ್ ಬಾಸ್ ಮನೆಯಲ್ಲಿ ಏನೂ ಗೊತ್ತಿಲ್ಲದಂತಿದ್ದ ತ್ರಿವಿಕ್ರಮ್-ಅನುಷಾ ರೈ