Bigg Boss Kannada Finale: ಗೆಲುವು ಅನ್ನೋದು ನನ್ನ ಹಣೆಬರಹದಲ್ಲಿ ಬರೆದಿಲ್ಲವೆನೋ ಎಂದ ಗಿಲ್ಲಿ! ಮೊದಲ ಎಲಿಮಿನೇಷನ್ ಯಾರದ್ದು?
Bigg Boss Kannada: ಬಿಗ್ ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕೌಂಡ್ ಡೌನ್ ಶುರು ಆಗಿದೆ. ಸ್ವಲ್ಪ ಸಮಯದಲ್ಲೇ ಶೋ ಪ್ರಾರಂಭ ಆಗುತ್ತೆ. ಈಗ ಹೊಸ ಪ್ರೋಮೋ ಔಟ್ ಆಗಿದೆ. ಅಂತಿಮವಾಗಿ ಗಿಲ್ಲಿ ನಟ , ಕಾವ್ಯಾ ಶೈವ, ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ ಅವರು ಫಿನಾಲೆಗೆ ಬಂದಿದ್ದಾರೆ. ಯಾರು ವಿನ್ ಎಂಬುದನ್ನು ಕಿಚ್ಚ ಸುದೀಪ್ಅ ವರು ಇಂದು ರಾತ್ರಿ ಘೋಷಿಸಲಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ (Bigg boss Kannada Grand Finale) ಕೌಂಡ್ ಡೌನ್ ಶುರು ಆಗಿದೆ. ಸ್ವಲ್ಪ ಸಮಯದಲ್ಲೇ ಶೋ ಪ್ರಾರಂಭ ಆಗುತ್ತೆ. ಈಗ ಹೊಸ ಪ್ರೋಮೋ (Promo) ಔಟ್ ಆಗಿದೆ. ಅಂತಿಮವಾಗಿ ಗಿಲ್ಲಿ ನಟ (Gilli Nata), ಕಾವ್ಯಾ ಶೈವ, ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ (Rakshitha Shetty) ಅವರು ಫಿನಾಲೆಗೆ ಬಂದಿದ್ದಾರೆ. ಯಾರು ವಿನ್ ಎಂಬುದನ್ನು ಕಿಚ್ಚ ಸುದೀಪ್ (Sudeep) ಅವರು ಇಂದು ರಾತ್ರಿ ಘೋಷಿಸಲಿದ್ದಾರೆ.
24 ಜನಗಳಲ್ಲಿ ಲಾಸ್ಟ್ ಆರನೇ ಸ್ಪರ್ಧಿ ಯಾರು ಬರಬೇಕು ಅಂತ ಸುದೀಪ್ ಕೇಳಿದ್ದಾರೆ. ನನ್ನ ಬಗ್ಗೆ ನಂಗೆ ಹೆಮ್ಮೆ ಇದೆ ಎಂದಿದ್ದಾರೆ ಕಾವ್ಯ. ಮುಂದಕ್ಕೆ ಹೋಗಬೇಕು ಎನ್ನುವ ಆಸೆ ಇದೆ ಎಂದಿದ್ದಾರೆ ಧನುಷ್.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಹುಟ್ಟೂರಿನಲ್ಲಿ ಸಂಭ್ರಮವೋ ಸಂಭ್ರಮ; ಅದ್ಧೂರಿ ಮೆರವಣಿಗೆಗೆ ಸಿದ್ಧತೆ
ಇನ್ನು ಅಶ್ವಿನಿ ಅವರು ನನ್ನನ್ನು ನಾನು ಸಂಪೂರ್ಣವಾಗಿ ಮನೆಯಲ್ಲಿ ಡೆಡಿಕೆಟ್ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ವಿನ್ ಅನ್ನೋದು ನನ್ನ ಹಣೆಬರಹದಲ್ಲಿ ಬರೆದಿಲ್ಲವೆನೋ ಅಂತ ಅಂದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ ಗಿಲ್ಲಿ. ಆರನೇ ಸ್ಥಾನಕ್ಕೆ ಬಂದ ವೋಟ್ ನಿಮ್ಮ ಮುಂದೆ ಇದೆ ಎಂದು ಹೇಳಿದ್ದಾರೆ ಸುದೀಪ್. ಅದು ಯಾರು ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಕಲರ್ಸ್ ಕನ್ನಡ ಪ್ರೋಮೋ
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಮೊದಲು ಧನುಷ್ ಅವರೇ ಮೊದಲು ಎಲಿಮಿನೇಟ್ ಆಗಿದ್ದಾರೆ ಅಂತ ಚರ್ಚೆಗಳು ಶುರುವಾಗಿದೆ. ಆದರೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಇಂದು ರಾತ್ರಿ ಈ ಬಗ್ಗೆ ಗೊತ್ತಾಗಲಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಸ್ಪರ್ಧಿಗೆ 37 ಕೋಟಿ ವೋಟ್ ಬಿದ್ದಿದೆ ಎಂದು ಸುದೀಪ್ ಘೋಷಣೆ ಮಾಡಿದ್ದರು. ಈ ಮತ ಗಿಲ್ಲಿ ನಟನಿಗೆ ಬಿದ್ದಿದೆ ಎಂಬುದು ಅನೇಕರ ಊಹೆ.
ಇದನ್ನೂ ಓದಿ: ಡಾಲಿ ಪಿಕ್ಚರ್ಸ್‌ನ 6ನೇ ಸಿನಿಮಾ ಘೋಷಿಸಿದ ನಟ ಧನಂಜಯ; ʻಹೆಗ್ಗಣ ಮುದ್ದುʼ ಸಿನಿಮಾಗೆ ಅರುಣ್ ಸಾಗರ್ ಪುತ್ರಿ ನಾಯಕಿ
ಮತ್ತೊಂದೆಡೆ ಈ ಬಾರಿಯ ಬಿಗ್ ಬಾಸ್ ಭಾರೀ ಕ್ರೇಜ್ ಕ್ರಿಯೆಟ್ ಮಾಡಿದ್ದು, ವಿನ್ನರ್ ಆಗುವ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದು ನಿನ್ನೆಯಷ್ಟೇ ಪ್ರೋಮೋದ ಮೂಲಕ ತಿಳಿಸಲಾಗಿದೆ.. ಇನ್ನೇನು ಕೆಲವೇ ಗಂಟೆಗಳಲ್ಲಿ ಫಿನಾಲೆ ಪ್ರಸಾರ ಆರಂಭವಾಗಲಿದ್ದು, ವೀಕ್ಷಕರು ಹಾಗೂ ಫ್ಯಾನ್ಸ್‌ನ ಎಲ್ಲ ಪ್ರಶ್ನೆ ಹಾಗೂ ಗೊಂದಲಗಳಿಗೆ ಉತ್ತರ ಸಿಗಲಿದೆ.