ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻಕಳಪೆʼ ಕೊಡುವ ವಿಚಾರದಲ್ಲಿ ಅಶ್ವಿನಿ ಗೌಡ ಹೀಗೆ ಮಾತಾಡಿದ್ದು ಸರಿನಾ? ಅದೊಂದು ಮಾತು ಈಗ ಚರ್ಚೆಗೆ ಬಂತು!

BBK 12: ಬಿಗ್ ಬಾಸ್ ಕನ್ನಡ 12ರ ಶುಕ್ರವಾರದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಅವರ ಒಂದು ನಡೆ ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಚೈತ್ರಾ ಕುಂದಾಪುರ ಅವರಿಗೆ ಕಳಪೆ ಪಟ್ಟ ನೀಡುವ ಸಂದರ್ಭದಲ್ಲಿ ಅಶ್ವಿನಿ ಅವರು, "ಇಡೀ ಮನೆಯವರು ಚೈತ್ರಾಗೆ ಕಳಪೆ ಅಂತ ನಿರ್ಧಾರ ಮಾಡಿದ್ದಾರೆ, ಹಾಗಾಗಿ ನಾನು ಅವರಿಗೆ ಕಳಪೆ ನೀಡುತ್ತಿದ್ದೇನೆ" ಎಂದಿದ್ದು ವೀಕ್ಷಕರಲ್ಲಿ ಬೇಸರ ಮೂಡಿಸಿದೆ.

ʻಕಳಪೆʼ ಕೊಡುವ ವಿಚಾರದಲ್ಲಿ ಅಶ್ವಿನಿ ಗೌಡ ಹೀಗೆ ಮಾತಾಡಿದ್ದು ಸರಿನಾ?

-

Avinash GR
Avinash GR Dec 20, 2025 4:35 PM

ಬಿಗ್‌ ಬಾಸ್‌ ಮನೆಯಲ್ಲಿ ಇರುವ ಹಿರಿಯರಲ್ಲಿ ಅಶ್ವಿನಿ ಗೌಡ ಅವರು ಕೂಡ ಒಬ್ಬರು. ಆರಂಭದಲ್ಲಿ ಒಂದು ನೆಗೆಟಿವ್‌ ಕಾರಣಗಳಿಗೆ ಅಶ್ವಿನಿ ಗೌಡ ಅವರು ಸುದ್ದಿಯಾಗಿದ್ದರು. ರಕ್ಷಿತಾ ಶೆಟ್ಟಿ ಅವರ ಜೊತೆಗಿನ ಜಗಳವಂತೂ ಅಶ್ವಿನಿಗೆ ತುಂಬಾ ಡ್ಯಾಮೇಜ್‌ ಮಾಡಿತ್ತು. ಈ ಮಧ್ಯೆ ಅಶ್ವಿನಿ ಗೌಡ 2.0 ನೋಡಲಿದ್ದೀರಿ ಎಂದು ಅವರೇ ಹೇಳಿಕೊಂಡಿದ್ದರು. ಆದರೆ ಶುಕ್ರವಾರದ ಸಂಚಿಕೆಯಲ್ಲಿನ ಒಂದು ವಿಚಾರ ವೀಕ್ಷಕರಲ್ಲಿ ಬೇಸರ ಮೂಡಿಸಿದೆ.

ಚೈತ್ರಾಗೆ ಕಳಪೆ ನೀಡಿದ ಸದಸ್ಯರು

ಈ ವಾರದ ಅತ್ಯುತ್ತಮವನ್ನು ಕಾವ್ಯಗೆ ನೀಡಿದರೆ, ಕಳಪೆ ಪಟ್ಟ ಚೈತ್ರಾ ಕುಂದಾಪುರ ಪಾಲಾಗಿದೆ. ಬಹುತೇಕರ ಆಯ್ಕೆ ಚೈತ್ರಾ ಕುಂದಾಪುರ ಅವರೇ ಆಗಿದ್ದರು. ಕಳಪೆ ನೀಡುತ್ತಿರುವುದೇಕೆ ಎಂದು ಸದಸ್ಯರು ತಮ್ಮ ತಮ್ಮ ಕಾರಣಗಳನ್ನು ಹೇಳಿದರು. ಅಂತಿಮವಾಗಿ ಅಶ್ವಿನಿ ಗೌಡ ಅವರ ಸರದಿ ಬಂತು. ಅವರು ಕೂಡ ಚೈತ್ರಾ ಕುಂದಾಪುರ ಅವರಿಗೆ ಕಳಪೆ ನೀಡಿದರು. ಅಸಲಿಗೆ, ಅವರು ನೀಡಿದ ಕಾರಣವಿತ್ತಲ್ಲ, ಅದು ಈಗ ವೀಕ್ಷಕರಲ್ಲಿ ಬೇಸರ ಮೂಡಿಸಿರುವುದು.

Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್‌

ಎಲ್ಲರೂ ಕಳಪೆ ನೀಡಿದ್ದಕ್ಕೆ ನಾನು ಕೊಡ್ತಾ ಇದ್ದೇನೆ!

ಹೌದು, ಅಶ್ವಿನಿ ಗೌಡ ಅವರು ಕಳಪೆ ನೀಡುವುದಕ್ಕೂ ಮುನ್ನ ಅನೇಕರು ಚೈತ್ರಾ ಕುಂದಾಪುರಗೆ ಕಳಪೆ ನೀಡಿದ್ದರು. ಅದನ್ನೇ ಹೈಲೈಟ್‌ ಮಾಡಿದ ಅಶ್ವಿನಿ ಗೌಡ, "ಇಡೀ ಮನೆಯವರು ಚೈತ್ರಾಗೆ ಕಳಪೆ ಅಂತ ನಿರ್ಧಾರ ಮಾಡ್ತಾರೆ. ಇದು ನಾನು ಮನಸ್ಸಿಲ್ಲದ ಮನಸ್ಸಿನಿಂದ ಕಳಪೆಯನ್ನು ನಾನು ಅವರಿಗೆ ಕೊಡ್ತಾ ಇದ್ದೇನೆ. ಆಟ ಅಂತ ಬಂದಾಗ, ಆತುರದಲ್ಲಿ, ಆತಂಕದಲ್ಲಿ ಏನೋ ಆಗಿರುತ್ತದೆ. ಅದನ್ನು ನೀವು ಬೇಕು ಅಂತ ಮಾಡಿದ್ರೋ, ಗೊತ್ತಿಲ್ಲದೆ ಮಾಡಿದ್ರೋ ನನಗೆ ತಿಳಿದಿಲ್ಲ. ಆದರೆ ಒಬ್ಬ ವ್ಯಕ್ತಿ ಕ್ಷಮೆ ಕೇಳಿದಾಗ, ಆ ವ್ಯಕ್ತಿ ಇನ್ನೂ ಎತ್ತರಕ್ಕೆ ಹೋಗುತ್ತಾನೆ. ಆ ವ್ಯಕ್ತಿ ಯಾವತ್ತೂ ಕಳಪೆ ಅಲ್ಲ. ಆಟದಲ್ಲಿ ನಡೆದಿದ್ದು ಇನ್ನೊಮ್ಮೆ ಆಗಬಾರದು ಎಂದು ನಾನು ಕಳಪೆಯನ್ನು ನೀಡುತ್ತಿದ್ದೇನೆ" ಎಂದು ಹೇಳಿದರು.

ಅಸಲಿಗೆ, ನಾಮಿನೇಷನ್, ಕಳಪೆ, ಉತ್ತಮ ಇದ್ಯಾವುದನ್ನೂ ಕೂಡ ಮಾತನಾಡಿಕೊಂಡು ನೀಡಬಾರದು ಮಾಡಬಾರದು ಎಂಬ ನಿಯಮವಿದೆ. ಈ ಹಿಂದೆ ಚರ್ಚೆ ಮಾಡಿಕೊಂಡು ನಾಮಿನೇಷನ್‌ ಮಾಡುತ್ತಿದ್ದವರಿಗೆ ಸುದೀಪ್‌ ಎಚ್ಚರಿಕೆಯನ್ನು ನೀಡಿದ್ದಾರೆ. ಇದೀಗ ತಮಗೆ ನಿಜವಾಗಿಯೂ ಚೈತ್ರಾಗೆ ಕಳಪೆ ನೀಡಬೇಕು ಎನಿಸಿದ್ದರೆ, ಅಶ್ವಿನಿ ಅದನ್ನು ನೀಡಬಹುದಿತ್ತು. ಆದರೆ ಮನೆಯವರ ನಿರ್ಧಾರದಂತೆ ಎಂದು ಹೇಳಿದ್ದು ಅಚ್ಚರಿ ಮೂಡಿಸಿತು.

BBK 12: ಬಿಗ್ ಬಾಸ್ ಕಾಲೇಜ್​ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ

ಹೀಗೆ ಬೇರೆಯವರ ನಿರ್ಧಾರಗಳ ಮೇಲೆ ಅವಲಂಬಿತರಾಗಬಾರದು, ಸ್ವಂತ ನಿರ್ಧಾರದ ಮೂಲಕ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂಬುದು ಅಶ್ವಿನಿ ಗೌಡ ಅವರಿಗೆ ಯಾಕೆ ಹೊಳೆಯಲಿಲ್ಲ ಎಂಬುದು ವೀಕ್ಷಕರ ಪ್ರಶ್ನೆ ಆಗಿದೆ. ಅಶ್ವಿನಿ ಗೌಡ ಅವರ ಈ ನಡೆಯನ್ನು ಕಿಚ್ಚ ಸುದೀಪ್‌ ಅವರು ವೀಕೆಂಡ್‌ನಲ್ಲಿ ಚರ್ಚೆ ಮಾಡುತ್ತಾರಾ ಎಂಬ ಕುತೂಹಲ ಕೂಡ ವೀಕ್ಷಕರಲ್ಲಿ ಮೂಡಿದೆ.

ಇನ್ನು, ಈ ವಾರ ಮನೆಯ ಕ್ಯಾಪ್ಟನ್ ಆಗಿ ಕಾವ್ಯ ಅವರು ಸೆಲೆಕ್ಟ್ ಆಗಿದ್ದಾರೆ. ಜೊತೆಗೆ ಉತ್ತಮ ಪಟ್ಟವನ್ನು ಕೂಡ ಮನೆಯವರಿಂದ ಪಡೆದುಕೊಂಡಿದ್ದಾರೆ.