Bigg Boss Kannada 12: ಇಂದು 'Pre Finaleʼ, ನಾಳೆ ಗ್ರ್ಯಾಂಡ್ ಫಿನಾಲೆ; ಸುದೀಪ್ ಅಭಿಮಾನಿಗಳ ಬೇಸರಕ್ಕೆ ಕಾರಣ ಏನು?
Bigg Boss Kannada Finale: ಬಿಗ್ ಬಾಸ್ ಮನೆಯಲ್ಲಿ ಫಿನಾಲೆಗೆ ದಿನಗಣನೆ ಆರಂಭವಾಗಿದ್ದು, ಜನವರಿ 18 ರಂದು ಅದ್ಧೂರಿ ಸಮಾರಂಭ ನಡೆಯಲಿದೆ. ಧ್ರುವಂತ್ ಎಲಿಮಿನೇಷನ್ ನಂತರ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರೆಲ್ಲರೂ ಫೈನಲಿಸ್ಟ್ ಆಗಿದ್ದು, ಇವರಲ್ಲಿ ಯಾರಿಗೆ ಜಾಸ್ತಿ ವೋಟ್ ಬರಲಿದೆಯೋ, ಅವರೇ ಈ ಸೀಸನ್‌ನ ವಿನ್ನರ್ . ಈಗಾಗಲೇ ವೋಟಿಂಗ್ ಲೈನ್ಸ್ ಓಪನ್ ಆಗಿದ್ದು, ಬಿಗ್ ಬಾಸ್ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಫಿನಾಲೆಗೆ (Finale) ದಿನಗಣನೆ ಆರಂಭವಾಗಿದ್ದು, ಜನವರಿ 18 ರಂದು ಅದ್ಧೂರಿ ಸಮಾರಂಭ ನಡೆಯಲಿದೆ. ಧ್ರುವಂತ್ ಎಲಿಮಿನೇಷನ್ ನಂತರ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರೆಲ್ಲರೂ ಫೈನಲಿಸ್ಟ್ (Finalist) ಆಗಿದ್ದು, ಇವರಲ್ಲಿ ಯಾರಿಗೆ ಜಾಸ್ತಿ ವೋಟ್ ಬರಲಿದೆಯೋ, ಅವರೇ ಈ ಸೀಸನ್‌ನ ವಿನ್ನರ್ (Winner). ಈಗಾಗಲೇ ವೋಟಿಂಗ್ ಲೈನ್ಸ್ ಓಪನ್ ಆಗಿದ್ದು, ಬಿಗ್ ಬಾಸ್ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡುತ್ತಿದ್ದಾರೆ. ಇದೀಗ ಹೊಸ ಪ್ರೋಮೋ ಔಟ್ (Promo Out) ಆಗಿದೆ.
ಪ್ರೋಮೋ ವೈರಲ್
ಇದೀಗ ಪ್ರೋಮೋ ಔಟ್ ಆಗಿದೆ. ಬರೋಬ್ಬರಿ 111 ದಿನ. ಬಿಗ್ ಬಾಸ್ ಮನೆಯಲ್ಲಿ ಥರ ಥರಾನೇ 24 ಕಂಟೆಸ್ಟ್‌ಗಳು, 6 ಫೈನೆಲಿಸ್ಟ್‌ಗಳು, ಕರ್ನಾಟಕದ ಅತಿ ದೊಡ್ಡ ಶೋ, ಬಿಗ್ ಬಾಸ್ ವಿನ್ನರ್ ಮಹಾಪಟ್ಟ ಯಾರಿಗೆ? ಬಿಗ್ ಬಾಸ್ ಪ್ರಿ ಫಿನಾಲೆ ಇಂದು 9ಗಂಟೆಗೆ, ಗ್ರ್ಯಾಂಡ್ ಫಿನಾಲೆ ನಾಳೆ ಸಂಜೆ 6 ಗಂಟೆಗೆ ಎಂದಿದೆ ವಾಹಿನಿ.
ಇದನ್ನೂ ಓದಿ: Bigg Boss Kannada 12: ಇದು ಅನ್ನವನ್ನೇ ಕದ್ದು ತಿಂದ ಕಥೆ! ಮೊದಲ ಬಾರಿಗೆ ಮನದಾಳದ ನೋವನ್ನು ಹೊರಹಾಕಿದ ಗಿಲ್ಲಿ ನಟ
It will be even more boring than Varada Kathe with Kiccha🥲.#BBK12 #BBK12Finale pic.twitter.com/OvJpjnJPor
— ಗೂಳಿ ||𝗩𝗞18||ᵀᵒˣᴵᶜ (@YASHBOSS09) January 17, 2026
ಇಂದು ಸುದೀಪ್ ಗೈರು?
ಇದೀಗ ಸುದೀಪ್ ಇಂದು ಆಗಮಿಸಲು ಸಾಧ್ಯವಾಗದ ಕಾರಣ ಭಾನುವಾರ ಮಾತ್ರ ಬಿಗ್ ಬಾಸ್ ಫಿನಾಲೆ ಎಪಿಸೋಡ್ ನಡೆಸಿಕೊಡುತ್ತಿದ್ದಾರೆ ಎನ್ನಲಾಗಿದೆ. ಪ್ರತಿ ಬಾರಿ ಬಿಗ್ ಬಾಸ್ ಫಿನಾಲೆ ಎರಡು ದಿನ ನಡೆಯುತ್ತಿತ್ತು. ಆದರೆ, ಈ ಸೀಸನ್ ಅಲ್ಲಿ ಒಂದೇ ದಿನ ಫಿನಾಲೆ ನಡೆಯುವಂತೆ ಆಗಿದೆ.
ಸುದೀಪ್ ಅವರು ಸಿಸಿಎಲ್ನಲ್ಲಿ ಬ್ಯುಸಿ ಇದ್ದಾರೆ. ಆಟ ಮುಗಿದ ಬಳಿಕ ರಾತ್ರೋ ರಾತ್ರಿ ಬೆಂಗಳೂರಿಗೆ ಬಂದು ಬೆಳಿಗ್ಗೆ ಬಿಗ್ ಬಾಸ್ ನಡೆಸಿಕೊಡೋದು ಎಂದರೆ ಅದು ಅಸಾಧ್ಯವಾದ ಮಾತು. ಈ ಕಾರಣದಿಂದಲೇ ಒಂದು ದಿನ ಬಿಡುವು ಪಡೆದು ಸುದೀಪ್ ‘ಬಿಗ್ ಬಾಸ್ 12’ ಫಿನಾಲೆ ನಡೆಸಿಕೊಡುತ್ತಿದ್ದಾರೆ ಎನ್ನಲಾಗಿದೆ.
ವರದಿಯ ಪ್ರಕಾರ ಇಂದು ಸಾಮಾನ್ಯ ಎಪಿಸೋಡ್ ಪ್ರಸಾರ ಕಾಣಲಿದೆಯಂತೆ. ವಿಶೇಷ ಡ್ಯಾನ್ಸ್ಗಳು ಇಂದು ಪ್ರಸಾರ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Bigg Boss Kannada 12: ಫಿನಾಲೆ ದಿನ ಬನಿಯನ್ ಧರಿಸಿ ಬರ್ತಾರಾ ಗಿಲ್ಲಿ ನಟ? ಕಾವ್ಯಾ, ರಕ್ಷಿತಾ ಕಾಸ್ಟ್ಯೂಮ್ಸ್ ಹೇಗಿವೆ?
ಅಂದಹಾಗೆ, ಕಳೆದ ಸೀಸನ್‌ನಲ್ಲಿ ಹನುಮಂತ ಲಮಾಣಿ ಅವರು ವಿನ್ನರ್ ಆಗಿದ್ದರು. ಅವರು ದಾಖಲೆಯ 5.23 ಕೋಟಿ ಮತಗಳನ್ನು ಪಡೆದುಕೊಂಡಿದ್ದರು. ಇದು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಸ್ಪರ್ಧಿಯೊಬ್ಬರು ಪಡೆದ ಅತಿ ಹೆಚ್ಚು ಮತಗಳ ದಾಖಲೆಯಾಗಿದೆ. ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಅವರು ಸುಮಾರು 2.53 ಕೋಟಿ ಮತಗಳನ್ನು ಪಡೆದಿದ್ದರು. ಸದ್ಯದ ಕ್ರೇಜ್ ನೋಡಿದರೆ, ಹನುಮಂತು ದಾಖಲೆಯನ್ನು ಗಿಲ್ಲಿ ನಟ ಬ್ರೇಕ್ ಮಾಡುವ ಸಾಧ್ಯತೆಗಳಿವೆ. ಕೊನೇ ಕ್ಷಣದಲ್ಲಿ ಗೆಲುವು ಯಾರಿಗೆ ಸಿಗಬಹುದು ಎಂಬ ಕುತೂಹಲವಂತೂ ಇದೆ.