ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shraddha Kapoor: ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಅಬ್ಬರ; ಹೊಸ ಸಾಂಗ್‌ ಔಟ್‌!

Shraddha Kapoor: ನಟಿ ಶ್ರದ್ಧಾ ಕಪೂರ್ (Shraddha Kapoor) ಅಭಿನಯದ ಬಹುನಿರೀಕ್ಷಿತ ‘ಈಥಾ’ (Eetha) ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಚಿತ್ರತಂಡ ಸಿನಿಮಾ ಕುರಿತು ಒಂದೊಂದೇ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್ (Movie Trailer) ಬಿಡುಗಡೆ ಮಾಡಿರುವ ಚಿತ್ರತಂಡ, ಮಂಗಳವಾರ ಚಿತ್ರದ ಮೊದಲ ಹಾಡು ಯನ್ನು ಬಿಡುಗಡೆ ಮಾಡಿದೆ.

ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಅಬ್ಬರ; ಹೊಸ ಸಾಂಗ್‌ ಔಟ್‌!

ಶ್ರದ್ಧಾ ಕಪೂರ್ -

Yashaswi Devadiga
Yashaswi Devadiga Nov 17, 2026 7:30 PM

ನಟಿ ಶ್ರದ್ಧಾ ಕಪೂರ್ (Shraddha Kapoor) ಅಭಿನಯದ ಬಹುನಿರೀಕ್ಷಿತ ‘ಈಥಾ’ (Eetha) ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಚಿತ್ರತಂಡ ಸಿನಿಮಾ ಕುರಿತು ಒಂದೊಂದೇ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್ (Movie Trailer) ಬಿಡುಗಡೆ ಮಾಡಿರುವ ಚಿತ್ರತಂಡ, ಮಂಗಳವಾರ ಚಿತ್ರದ ಮೊದಲ ಹಾಡು ಯನ್ನು ಬಿಡುಗಡೆ ಮಾಡಿದೆ.

ಈ ಹಾಡಿನಲ್ಲಿ ಮಹಾನ್ ಜನಪದ ಕಲಾವಿದೆ ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಜೀವನದ ಅತ್ಯಂತ ಭಾವನಾತ್ಮಕ ಹಾಗೂ ಸಾಹಸಮಯ ಘಟನೆಯೊಂದನ್ನು ತೋರಿಸಲಾಗಿದೆ. ಚಿತ್ರದಲ್ಲಿ ವಿಠಾಬಾಯಿ ಅವರ ಪಾತ್ರಕ್ಕೆ ಶ್ರದ್ಧಾ ಕಪೂರ್ ಜೀವ ತುಂಬಿದ್ದಾರೆ.

‘ಜಿ ಜಿ ರೇ ಜಿ’ ಹಾಡಿನಲ್ಲಿ ವಿಠಾಬಾಯಿ ಅವರ ಸಾಹಸಗಾಥೆ

ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದರೂ ಲಾವಣಿ ಪ್ರದರ್ಶನವನ್ನು ನಿಲ್ಲಿಸದೆ ಮುಂದುವರಿಸಿದ್ದ ವಿಠಾಬಾಯಿ ಅವರ ನೈಜ ಜೀವನದ ಘಟನೆಯನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

ವೇದಿಕೆಯಲ್ಲಿ ಲಾವಣಿ ಪ್ರದರ್ಶನ ನೀಡುತ್ತಿರುವಾಗಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಬಳಿಕ ತೆರೆಮರೆಯಲ್ಲಿ ಮಗುವಿಗೆ ಜನ್ಮ ನೀಡಿದ ಅವರು, ಮತ್ತೆ ವೇದಿಕೆಗೆ ಮರಳಿ ತಮ್ಮ ಕಲಾಪ್ರದರ್ಶನ ಮುಂದುವರಿಸುತ್ತಾರೆ. ಈ ದೃಶ್ಯಗಳು ಹಾಡಿನಲ್ಲಿ ಮನಮುಟ್ಟುವಂತೆ ಮೂಡಿಬಂದಿವೆ.

ಇದನ್ನೂ ಓದಿ: Bigg Boss Kannada 13: ಆಸಿಯಾ ಈಗ ಯುವರಾಣಿ! ನಾಮಿನೇಶನ್‌ ಅಧಿಕಾರ ಚೆನ್ನಾಗಿ ನಿಭಾಯಿಸಿದ್ರಾ ಸೌಂದರ್ಯ?

ಹಾಡಿನಲ್ಲಿ ಶ್ರದ್ಧಾ ಕಪೂರ್ ಬಣ್ಣಬಣ್ಣದ ನೌವಾರಿ ಸೀರೆಯುಟ್ಟು ಅದ್ಭುತವಾಗಿ ಲಾವಣಿ ನೃತ್ಯ ಪ್ರದರ್ಶಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಸುತ್ತಮುತ್ತಲಿನವರು ಆತಂಕ ವ್ಯಕ್ತಪಡಿಸುವ ದೃಶ್ಯಗಳೂ ಕಾಣಿಸುತ್ತವೆ. ನೃತ್ಯದ ತೀವ್ರತೆಯಿಂದ ಬಳಲುವ ಅವರು ಕೊನೆಗೆ ವೇದಿಕೆಯಲ್ಲೇ ಕುಸಿದು ಬೀಳುವ ಹಾಗೂ ರಕ್ತಸ್ರಾವವಾಗುವ ದೃಶ್ಯಗಳು ಹಾಡಿನ ಗಂಭೀರತೆಯನ್ನು ಹೆಚ್ಚಿಸಿವೆ.

ಈ ಹಾಡಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಜೋಡಿ ಅಜಯ್–ಅತುಲ್ ಸಂಗೀತ ಸಂಯೋಜನೆ ಮತ್ತು ನಿರ್ಮಾಣ ಮಾಡಿದ್ದಾರೆ. ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಧ್ವನಿ ನೀಡಿದ್ದಾರೆ. ವೈಭವೀ ಮರ್ಚೆಂಟ್ ನೃತ್ಯ ನಿರ್ದೇಶನ ಮಾಡಿದ್ದಾರೆ.



ಚಿತ್ರೀಕರಣದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಶ್ರದ್ಧಾ

ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಶ್ರದ್ಧಾ ಕಪೂರ್, ವಿಠಾಬಾಯಿ ಪಾತ್ರಕ್ಕಾಗಿ ನಡೆಸಿದ ಕಠಿಣ ತಯಾರಿ ಹಾಗೂ ಲಾವಣಿ ನೃತ್ಯ ಕಲಿಯಲು ಪಟ್ಟ ಶ್ರಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.ಚಿತ್ರೀಕರಣದ ವೇಳೆ ನೃತ್ಯ ಮಾಡುತ್ತಿದ್ದಾಗ ಸ್ನಾಯು ಸೆಳೆತದ ಗಾಯಕ್ಕೆ ಒಳಗಾಗಿದ್ದ ಘಟನೆಯನ್ನೂ ಅವರು ನೆನಪಿಸಿಕೊಂಡಿದ್ದಾರೆ.

"ಈ ಚಿತ್ರಕ್ಕಾಗಿ ನಾನು ತುಂಬಾ ಆಸಕ್ತಿದಾಯಕ ವ್ಯಕ್ತಿಗಳನ್ನು ಭೇಟಿಯಾದೆ. ಸಂಪೂರ್ಣ ವಿಭಿನ್ನ ಜಗತ್ತಿಗೆ ಪ್ರವೇಶಿಸಿದ ಅನುಭವವಾಯಿತು. ಸೆಟ್‌ನಲ್ಲಿ ನೃತ್ಯ ಮಾಡುವಾಗ ಒಂದು ಅನಿರೀಕ್ಷಿತ ಘಟನೆ ನಡೆಯಿತು. ನನಗೆ ಸ್ನಾಯು ಸೆಳೆತ ಉಂಟಾಗಿತ್ತು. ಆದರೆ ಚಿತ್ರತಂಡದವರು ತುಂಬಾ ಬೆಂಬಲ ನೀಡಿದರು. ಅವರ ಪ್ರೀತಿ ಮತ್ತು ಕಾಳಜಿಯಿಂದಾಗಿ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಮತ್ತೆ ಚಿತ್ರೀಕರಣಕ್ಕೆ ಮರಳಲು ಸಾಧ್ಯವಾಯಿತು. ಲಾವಣಿಯನ್ನು ಅರ್ಥಮಾಡಿಕೊಳ್ಳಬೇಕಿತ್ತು. ಅದಕ್ಕಾಗಿ ಸಾಕಷ್ಟು ಅಭ್ಯಾಸ ಮಾಡಬೇಕಾಯಿತು" ಎಂದು ಶ್ರದ್ಧಾ ಹೇಳಿದ್ದಾರೆ.

‘ಈಥಾ’ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ

‘ಜರಾ ಹಟ್ಕೆ ಜರಾ ಬಚ್ಕೆ’ ಖ್ಯಾತಿಯ ನಿರ್ದೇಶಕ ಲಕ್ಷ್ಮಣ್ ಉತೇಕರ್ ‘ಈಥಾ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದಿನೇಶ್ ವಿಜನ್, ಲಕ್ಷ್ಮಣ್ ಉತೇಕರ್ ಮತ್ತು ಕರಿಷ್ಮಾ ಶರ್ಮಾ ಅವರು ಮ್ಯಾಡಾಕ್ ಫಿಲ್ಮ್ಸ್ ಹಾಗೂ ಕಠಪುಟ್ಲಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ಚಿತ್ರದ ಚಿತ್ರಕಥೆಯನ್ನು ಕ್ಷಿತಿಜ್ ಪಟವರ್ಧನ್ ಬರೆದಿದ್ದು, ಅಜಯ್–ಅತುಲ್ ಸಂಗೀತ ಸಂಯೋಜಿಸಿದ್ದಾರೆ. ಆಕಾಶ್ ಅಗರ್ವಾಲ್ ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಇದನ್ನೂ ಓದಿ: Spandana Somanna: ನೆಗೆಟಿವ್ ಕಮೆಂಟ್ ಮಾಡುವವರಿಗೆ ಖಡಕ್ ತಿರುಗೇಟು ನೀಡಿದ ಸ್ಪಂದನಾ ಸೋಮಣ್ಣ

ಶ್ರದ್ಧಾ ಕಪೂರ್ ಅಭಿನಯದ ‘ಈಥಾ’ ಚಿತ್ರವು ಸಲ್ಮಾನ್ ಖಾನ್ ನಟನೆಯ ಯುದ್ಧ ಹಿನ್ನೆಲೆಯ ಕಥಾಹಂದರ ಹೊಂದಿರುವ ‘ಮಾತೃಭೂಮಿ’ ಚಿತ್ರದೊಂದಿಗೆ ಚಿತ್ರಮಂದಿರಗಳಲ್ಲಿ ಮುಖಾಮುಖಿಯಾಗಲಿದೆ. ಎರಡೂ ಚಿತ್ರಗಳು ಡಿಸೆಂಬರ್ 4ರಂದು ತೆರೆಕಾಣಲು ಸಜ್ಜಾಗಿವೆ. ಈ ನಡುವೆ ತಮ್ಮ ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಪೈಪೋಟಿ ಇದ್ದರೂ ಸಲ್ಮಾನ್ ಖಾನ್ ಅವರು ಸಾಮಾಜಿಕ ಜಾಲತಾಣದ ಮೂಲಕ ‘ಈಥಾ’ ಚಿತ್ರಕ್ಕೆ ಶುಭ ಹಾರೈಸಿ, ಶ್ರದ್ಧಾ ಕಪೂರ್ ಅವರಿಗೆ ಬೆಂಬಲ ಸೂಚಿಸಿರುವುದು ವಿಶೇಷ.