ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: 'ಧ್ರುವಂತ್‌ ಒಬ್ಬ ಸ್ಯಾಡಿಸ್ಟ್‌.. ರಾಶಿಕಾಗೆ ಅಹಂಕಾರ..'; ಸ್ಪರ್ಧಿಗಳ ಬಾಯಿಂದ ಹೊರಬಿದ್ದ ಸತ್ಯಗಳಿವು!

BBK 12 Nomination: ಬಿಗ್‌ ಬಾಸ್‌ ಮನೆಯಲ್ಲಿ 9ನೇ ವಾರದ ನಾಮಿನೇಷನ್‌ ಪ್ರಕ್ರಿಯೆ ನಡೆಯುತ್ತಿದೆ. ʻಯೋಗ್ಯತೆ ಇಲ್ಲದವರನ್ನು ಹೊರಹಾಕಿʼ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಈ ವೇಳೆ ಸ್ಪರ್ಧಿಗಳು ಒಬ್ಬರ ವಿರುದ್ಧ ಒಬ್ಬರು ಹೊಸ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಧ್ರುವಂತ್‌ರನ್ನು ʻಸ್ಯಾಡಿಸ್ಟ್‌ʼ ಎಂದು ರಾಶಿಕಾ ಶೆಟ್ಟಿ, ಕರೆದರೆ, ರಾಶಿಕಾಗೆ ಅಹಂಕಾರವಿದೆ ಎಂದು ಸ್ಪಂದನಾ ನಾಮಿನೇಟ್‌ ಮಾಡಿದ್ದಾರೆ.

Bigg Boss 12: ಅಯ್ಯೋ, ಧ್ರುವಂತ್‌ಗೆ ʻಸ್ಯಾಡಿಸ್ಟ್‌ʼ ಎಂದ ರಾಶಿಕಾ ಶೆಟ್ಟಿ!

-

Avinash GR
Avinash GR Nov 17, 2025 5:53 PM

ಬಿಗ್‌ ಬಾಸ್‌ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡವಳಿಕೆಯಲ್ಲಿ ಬದಲಾವಣೆಗಳು ಕಾಣಿಸುತ್ತಿವೆ. ದಿನ ಕಳೆದಂತೆ ಒಬ್ಬರಿಗೊಬ್ಬರು ಜಾಸ್ತಿಯೇ ಅರ್ಥವಾಗುತ್ತಿದ್ದಾರೆ. ಹಾಗಾಗಿ, ಪ್ರತಿ ಬಾರಿ ನಾಮಿನೇಷನ್‌ ಮಾಡುವಾಗಲೂ ಹೊಸ ಹೊಸ ಕಾರಣಗಳನ್ನು ಸರ್ಧಿಗಳು ನೀಡುತ್ತಿದ್ದಾರೆ. ಇದೀಗ 9ನೇ ವಾರದ ನಾಮಿನೇಷನ್‌ ಪ್ರಕ್ರಿಯೆ ಆರಂಭವಾಗಿದೆ. ಈ ಬಾರಿ ವಿಭಿನ್ನವಾಗಿ ನಾಮಿನೇಷನ್‌ ಪ್ರಕ್ರಿಯೆಯನ್ನು ಬಿಗ್‌ ಬಾಸ್‌ ನಡೆಸುತ್ತಿದ್ದಾರೆ.

ಯೋಗ್ಯತೆ ಇಲ್ಲದೇ ಇರುವವರು ಯಾರು?

ಯೋಗ್ಯತೆ ಇಲ್ಲದದವರು ʻಬಿಗ್‌ ಬಾಸ್‌ʼ ಮನೆಯಲ್ಲಿ ಇರುವುದು ಅಪರಾಧ. ಅಂತಹ ಯೋಗ್ಯತೆ ಇಲ್ಲದವರನ್ನು ಈ ಮನೆಯಿಂದ ಹೊರಕಳಿಸಲು ನಾಮಿನೇಟ್‌ ಮಾಡಿ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಅಂತೆಯೇ ಸ್ಪರ್ಧಿಗಳು ಇಬ್ಬಿಬ್ಬರನ್ನು ನಾಮಿನೇಟ್‌ ಮಾಡಿದ್ದಾರೆ. ಸದ್ಯ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿರುವ ಪ್ರೋಮೋದಲ್ಲಿ ನಾಮಿನೇಷನ್‌ ಕುರಿತ ಒಂದು ಸಣ್ಣ ಝಲಕ್‌ ಗೊತ್ತಾಗಿದೆ. ಅದೇನು? ಮುಂದೆ ಓದಿ.

‌Bigg Boss 12: ʻನಾನು ಹುಲಿ ವೇಷದಲ್ಲಿರುವ ಹಸು, ನಾನು ಡ್ರಗ್‌ ಅಡಿಕ್ಟ್‌ ಅಲ್ಲʼ; ಕಾಕ್ರೋಚ್‌ ಸುಧಿ ಫಸ್ಟ್‌ ರಿಯಾಕ್ಷನ್

ಧ್ರುವಂತ್‌ ಒಬ್ಬ ಅಹಂಕಾರಿ!

ಮಾಳು ನಿಪನಾಳ್‌ ಮತ್ತು ಅಭಿಷೇಕ್‌ ಶ್ರೀಕಾಂತ್‌ ಅವರನ್ನು ಧ್ರುವಂತ್‌ ನಾಮಿನೇಟ್‌ ಮಾಡಿದ್ದಾರೆ. ರಿಷಾ ಗೌಡ ಕೂಡ ಮಾಳು ಅವರನ್ನೇ ನಾಮಿನೇಟ್‌ ಮಾಡಿದರೆ, ಸ್ಪಂದನಾ ಅವರನ್ನು ನಾಮಿನೇಟ್‌ ಮಾಡಿದ್ದಾರೆ ಅಶ್ವಿನಿ ಗೌಡ.

Bigg Boss 12: ʻಸುಮ್‌ ಸುಮ್ನೆ ಜಗಳ ಮಾಡೋಣ, ಮಾತು ಬಿಡೋಣʼ; ಜಾಹ್ನವಿ - ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!‌

ಧ್ರುವಂತ್‌ ಸ್ಯಾಡಿಸ್ಟ್‌ ವ್ಯಕ್ತಿ

ರಕ್ಷಿತಾ ಶೆಟ್ಟಿ ಅವರನ್ನು ನಾಮಿನೇಟ್‌ ಮಾಡಿರುವ ಧನುಷ್‌, "ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ" ಎಂದು ಕಾರಣ ನೀಡಿದ್ದಾರೆ. ಧ್ರುವಂತ್‌ ಅವರನ್ನು ಟಾರ್ಗೆಟ್‌ ಮಾಡಿರುವ ರಾಶಿಕಾ ಶೆಟ್ಟಿ, "ಧ್ರುವಂತ್‌ ಒಂಥರಾ ನಗ್ತಾರೆ. ಸ್ಯಾಡಿಸ್ಟ್‌ ಥರ ವರ್ತಿಸುತ್ತಾರೆ. ಸ್ಯಾಡಿಸ್ಟ್‌ ವ್ಯಕ್ತಿ ಅವರು" ಎಂದು ಹೇಳಿದ್ದಾರೆ.

ರಾಶಿಕಾಗೆ ಅಹಂಕಾರ ಇದೆ

ಇನ್ನು, ರಾಶಿಕಾ ಶೆಟ್ಟಿ ನಾಮಿನೇಟ್‌ ಮಾಡಿರುವುದು ಸ್ಪಂದನಾ ಸೋಮಣ್ಣ. "ನಾನು ಎಲ್ಲ ಆಟವನ್ನು ಆಡಬಲ್ಲೆ ಎಂಬ ಅವಳ ಅಹಂಕಾರ, ಅವಳ ಆಟವನ್ನೇ ಕೆಡಿಸುತ್ತಿದೆ. ಎಲ್ಲೋ ಒಂದು ಕಡೆ, ಒಬ್ಬರ ಬಳಿ ಮಾತ್ರ ತನ್ನ ಅಭಿಪ್ರಾಯವನ್ನು ಹೇಳಿಕೊಳ್ಳುವುದಕ್ಕೆ ಅವಳು ಸೀಮಿತ ಆಗಿದ್ದಾಳೆ ಎಂದು ನನಗೆ ಅನ್ನಿಸುತ್ತಿದೆ" ಎಂದು ಸ್ಪಂದನಾ ಹೇಳಿದ್ದಾರೆ.

ನಾಮಿನೇಷನ್‌ ಕುರಿತ ಪ್ರೋಮೋ



ಕಳೆದ ವಾರದಲ್ಲಿ ಹೇಗಿತ್ತು ನಾಮಿನೇಷನ್?

ಕಳೆದ ವಾರ ಕ್ಯಾಪ್ಟನ್‌ ಆಗಿದ್ದ ಮಾಳು ನಿಪನಾಳ್‌ ಅವರಿಗೆ ನಾಮಿನೇಟ್‌ ಮಾಡುವ ಅಧಿಕಾರವನ್ನು ನೀಡಲಾಗಿತ್ತು. ತಮಗೆ ಸಿಕ್ಕ ಸೂಪರ್‌ ಪವರ್‌ನಿಂದ 6 ಮಂದಿಯನ್ನು ಮಾಳು ನಾಮಿನೇಟ್‌ ಮಾಡಿದ್ದರು. ಕೆಸರು, ತಣ್ಣೀರು, ಕಪ್ಪು ನೀರು, ಕಸ, ಚಿಣಿಮಿಣಿ ಹಾಗೂ ಸಗಣಿ ನೀರನ್ನ ಸುರಿದು ಒಟ್ಟು 6 ಸದಸ್ಯರನ್ನು ನಾಮಿನೇಟ್‌ ಮಾಡಿದ್ದರು ಮಾಳು. ಕಾಕ್ರೋಚ್‌ ಸುಧಿ, ಧ್ರುವಂತ್‌, ಜಾಹ್ನವಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ಅವರು ನಾಮಿನೇಟ್‌ ಆಗಿದ್ದರು. ಆ ರೀತಿ ನಾಮಿನೇಟ್‌ ಆದವರಲ್ಲಿ ಕಾಕ್ರೋಚ್‌ ಸುಧಿ ಈಗ ಎಲಿಮಿನೇಟ್‌ ಆಗಿ ಹೊರಬಂದಿದ್ದಾರೆ. ನಾಮಿನೇಟ್‌ ಮಾಡುವಾಗ ಬಹಳಷ್ಟು ಎಚ್ಚರಿಕೆಯಿಂದ ಮಾಡಿ ಎಂದು ಸುದೀಪ್‌ ಕೂಡ ಹೇಳಿದ್ದಾರೆ.