BBK 13: ನಟಿ ಆಸಿಯಾ ಫಿರ್ದೋಸ್ ಹಿಂದೆ ಬಿದ್ರಾ ಧನುಷ್? ʻಬಿಗ್ ಬಾಸ್ʼ ಮನೆಯಲ್ಲಿ ಇವರದ್ದೇ ಮೊದಲ ಲವ್ ಸ್ಟೋರಿ!
ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭದಲ್ಲೇ ಕನ್ನಡಿಗರ ಗಮನ ಸೆಳೆದಿದೆ. ಸ್ಪರ್ಧಿಗಳಾದ ಧನುಷ್ ಹಾಗೂ ನಟಿ ಆಸಿಯಾ ಫಿರ್ದೋಸ್ ನಡುವಿನ ತುಂಟಾಟ, ಸರಸದ ಮಾತುಗಳು ಮನೆಯೊಳಗೆ ಹೊಸ ಪ್ರೇಮ ಚಿಗುರೊಡೆದಿರುವ ಸೂಚನೆ ನೀಡಿವೆ. "ಪ್ರೀತಿಗೆ ಬೆಲೆ ಸಿಗ್ತಿಲ್ಲ" ಎಂಬ ಧನುಷ್ ಮಾತುಗಳು ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.
-
ಬಿಗ್ ಬಾಸ್‌ನ ಪ್ರತಿ ಸೀಸನ್‌ನಲ್ಲೂ ಲವ್ ಟ್ರ್ಯಾಕ್ ಅಥವಾ ಕ್ಯೂಟ್ ಜೋಡಿಗಳು ಸದ್ದು ಮಾಡುವುದು ಸಾಮಾನ್ಯ. ಇದೀಗ 'ಬಿಗ್ ಬಾಸ್ ಕನ್ನಡ ಸೀಸನ್ 13'ರ ಮನೆಯಲ್ಲೂ ಅಂಥದ್ದೇ ಹೊಸ ಪ್ರೇಮಕಥೆಯೊಂದು ಚಿಗುರೊಡೆದ ಲಕ್ಷಣಗಳು ಕಾಣಿಸುತ್ತಿದ್ದು, ಸ್ಪರ್ಧಿಗಳಾದ ಧನುಷ್ ಹಾಗೂ ನಟಿ ಆಸಿಯಾ ಫಿರ್ದೋಸ್ ಜೋಡಿ ಪ್ರೇಕ್ಷಕರ ಮತ್ತು ನೆಟ್ಟಿಗರ ಗಮನ ಸೆಳೆಯುತ್ತಿದೆ. ಮನೆಯೊಳಗೆ ಧನುಷ್ ಸದಾ ಆಸಿಯಾ ಅವರ ಆಸುಪಾಸಿನಲ್ಲೇ ಇರುತ್ತಾ, ಅವರೊಂದಿಗೆ ಮಾತುಕತೆ ನಡೆಸುವುದು ಹಾಗೂ ತರಲೆ-ಚೇಷ್ಟೆ ಮಾಡುವುದರಲ್ಲಿ ಮುಳುಗಿರುವುದು ಸದ್ಯ ಭರ್ಜರಿ ಚರ್ಚೆಗೆ ಗ್ರಾಸವಾಗಿದೆ.
ಇವರಿಬ್ಬರೂ ಒಂದಾದರೆ ಸೂಪರ್
ಧನುಷ್ ಮಾಡುವ ತುಂಟಾಟಗಳನ್ನು ಆಸಿಯಾ ಕೂಡ ತಮಾಷೆಯಾಗಿಯೇ ಸ್ವೀಕರಿಸುತ್ತಿದ್ದು, ಇವರಿಬ್ಬರ ನಡುವಿನ ಆಪ್ತ ಒಡನಾಟ ಹಾಗೂ ಕೆಮಿಸ್ಟ್ರಿ ವೀಕ್ಷಕರಿಗೆ ಸಖತ್ ಇಷ್ಟವಾಗುತ್ತಿದೆ. ಇತ್ತೀಚಿನ ಸಂಚಿಕೆಯೊಂದರಲ್ಲಿ ಮಾಡರ್ನ್ ಮಹಾಕವಿ ಮಂಜ, ಧನುಷ್ ಅವರ ಕಾಲೆಳೆಯುತ್ತಾ, "ನಿನ್ನ ಹಾರ್ಟ್ ಬ್ರೇಕ್ ಮಾಡಿದ್ರಾ? ನಿನ್ನ ಪ್ರೀತಿಗೆ ಬೆಲೆ ಸಿಕ್ಕಿಲ್ವಾ?" ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಧನುಷ್ ನಗುತ್ತಲೇ, "ಪ್ರೀತಿಗೆ ಬೆಲೆ ಸಿಗ್ತಾ ಇಲ್ಲ ಮಂಜ.." ಎಂದು ಉತ್ತರಿಸಿದ್ದು, ಈ ಮಾತುಕತೆಯ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಜೋಡಿಯನ್ನು ಮೆಚ್ಚಿಕೊಂಡಿದ್ದು, "ಇವರಿಬ್ಬರೂ ಒಂದಾದರೆ ಸೂಪರ್" ಎಂದು ಕಾಮೆಂಟ್‌ಗಳ ಮೂಲಕ ಶುಭ ಹಾರೈಸುತ್ತಿದ್ದಾರೆ.
ಫ್ಯಾನ್ ಪೇಜ್‌ಗಳು ಆರಂಭ
ಇವರಿಬ್ಬರ ಒಡನಾಟಕ್ಕೆ ಸೋಷಿಯಲ್ ಮೀಡಿಯಾದಲ್ಲಿ ದೊರೆತಿರುವ ಜನಪ್ರಿಯತೆ ಎಷ್ಟರಮಟ್ಟಿಗಿದೆ ಎಂದರೆ, ಧನುಷ್ ಮತ್ತು ಆಸಿಯಾ ಹೆಸರಿನಲ್ಲಿ ಈಗಾಗಲೇ ಹಲವು ಫ್ಯಾನ್ ಪೇಜ್‌ಗಳು ಹುಟ್ಟಿಕೊಂಡಿದ್ದು, ಇಬ್ಬರ ಕ್ಯೂಟ್ ಕ್ಷಣಗಳ ವೀಡಿಯೋಗಳು ವೈರಲ್ ಆಗುತ್ತಿವೆ. ಆದರೆ, ಇದು ಆರಂಭಿಕ ಹಂತದ ಸ್ನೇಹವೋ ಅಥವಾ ನಿಜಕ್ಕೂ ಪ್ರೇಮದ ಹಾದಿ ಹಿಡಿಯಲಿದೆಯೋ ಎಂಬ ಕುತೂಹಲ ಮನೆಮಾಡಿದೆ. ಮತ್ತೊಂದೆಡೆ, ಇದೇ ಸೀಸನ್‌ನಲ್ಲಿ ತಾಂಡವ್ ರಾಮ್ ಹಾಗೂ ಕಾವ್ಯ ಗೌಡ ನಡುವಿನ ಒಡನಾಟವೂ ಸದ್ದು ಮಾಡುತ್ತಿದ್ದು, ಕಾವ್ಯ ಅವರ ಕಣ್ಣು ಹಾಗೂ ಬಟ್ಟೆಯ ಬಗ್ಗೆ ತಾಂಡವ್ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಇಬ್ಬರ ಹೆಸರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಪೇಜ್‌ಗಳು ಆರಂಭವಾಗಿವೆ.
ಈ ಹಿಂದೆ ನಡೆದ ಸೀಸನ್‌ಗಳಲ್ಲೂ ಇಂಥ ಜೋಡಿಗಳು ಸಿಕ್ಕಾಪಟ್ಟೆ ಹೈಲೈಟ್ ಆಗಿದ್ದವು. ಹಿಂದಿನ ಸೀಸನ್‌ನಲ್ಲಿ ರಾಶಿಕಾ ಶೆಟ್ಟಿ ಮತ್ತು ಸೂರಜ್ ಸಿಂಗ್ ಜೋಡಿ, ಹಾಗೆಯೇ ‘ಗಿಲ್ಲಿ ನಟ’ ಹಾಗೂ ಕಾವ್ಯ ಶೈವ ಜೋಡಿಗೆ ಪ್ರೇಕ್ಷಕರಿಂದ ಭಾರೀ ಬೆಂಬಲ ಸಿಕ್ಕಿತ್ತು. ಇವರ ಹೆಸರಿನಲ್ಲಿ ನೂರಾರು ಫ್ಯಾನ್ ಪೇಜ್‌ಗಳು ಸೃಷ್ಟಿಯಾಗಿ, ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಈ ಜೋಡಿಗಳು ದೊಡ್ಡ ಮಟ್ಟದ ಜನಪ್ರಿಯತೆ ಕಾಯ್ದುಕೊಂಡಿದ್ದವು. ಅದೇ ಹಾದಿಯಲ್ಲಿ ಇದೀಗ ಸೀಸನ್ 13ರ ಧನುಷ್-ಆಸಿಯಾ ಹಾಗೂ ತಾಂಡವ್-ಕಾವ್ಯ ಜೋಡಿ ಮುನ್ನಡೆಯಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.