Anupama Parameswaran: ಅನುಪಮಾ ಪರಮೇಶ್ವರನ್ ಹೇಳಿಕೆಗೆ ಧ್ರುವ ವಿಕ್ರಮ್ ಖಡಕ್ ರಿಪ್ಲೈ
Anupama Parameswaran: ಹೆಸರಿಸದ ಮಾಜಿ ಗೆಳೆಯನೊಂದಿಗಿನ 2 ವರ್ಷಗಳ ಸಂಬಂಧದಲ್ಲಿ ಅನುಪಮಾ ಪರಮೇಶ್ವರನ್ ಅವರು ಬ್ರೇಕಪ್ ಬಗ್ಗೆ, ಮಾಜಿ ಪ್ರೇಮಿಯ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಇವುಗಳಿಗೆ ಸಂಬಂಧಿಸಿದಂತೆ ಧ್ರುವ್ (dhruva) ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಕೂಡ ಅನುಪಮಾ ಹೆಸರನ್ನು ಪ್ರಸ್ತಾಪಿಸಿಲ್ಲ.
ಅನುಪಮಾ ಪರಮೇಶ್ವರನ್ -
ಅನುಪಮಾ ಪರಮೇಶ್ವರನ್ (Anupama Parameshwaran) ಅವರೊಂದಿಗಿನ ವದಂತಿಯಿಂದಾಗಿ ನಟ ಧ್ರುವ ವಿಕ್ರಮ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಹೆಸರಿಸದ ಮಾಜಿ ಗೆಳೆಯನೊಂದಿಗಿನ 2 ವರ್ಷಗಳ ಸಂಬಂಧದಲ್ಲಿ ಅನುಪಮಾ ಪರಮೇಶ್ವರನ್ ಅವರು ಬ್ರೇಕಪ್ ಬಗ್ಗೆ, ಮಾಜಿ ಪ್ರೇಮಿಯ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಇವುಗಳಿಗೆ ಸಂಬಂಧಿಸಿದಂತೆ ಧ್ರುವ್ (dhruva) ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಕೂಡ ಅನುಪಮಾ ಹೆಸರನ್ನು ಪ್ರಸ್ತಾಪಿಸಿಲ್ಲ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ನನ್ನ ಮೇಲೆ ಎಂದಿಗೂ ಪರಿಣಾಮ ಬೀರಿಲ್ಲ ಎಂದು ನಾನು ಹೇಳಲಾರೆ. ಆದರೆ ವಾಸ್ತವದಲ್ಲಿ ನಿಮ್ಮನ್ನು ನೀವು ಸ್ಥಿರಗೊಳಿಸಿಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನೀವು ಯಾರೆಂದು ತಿಳಿದುಕೊಳ್ಳಿ, ನೀವು ಯಾವುದಕ್ಕಾಗಿ ನಿಲ್ಲುತ್ತೀರಿ ಎಂಬುದನ್ನು ತಿಳಿದುಕೊಳ್ಳಿ .ನಿಮಗೆ ನಿಮ್ಮದೇ ಆದ ಪ್ರಪಂಚವಿದೆ ಎಂದಿದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಿಗೆ ಸೂಚನೆ
ನಿಮ್ಮ ಜೀವನದಲ್ಲಿ ಪ್ರಾಮುಖ್ಯತೆ ಹೊಂದಿರುವ ವಿಷಯಗಳನ್ನು ತೀವ್ರವಾಗಿ ರಕ್ಷಿಸಿಕೊಳ್ಳುವುದು ಮುಖ್ಯ. ನೀವು ಸತ್ಯದ ಪರವಾಗಿ ನಿಂತಾಗ, ಈ ಎಲ್ಲಾ ಟೀಕೆ-ಚರ್ಚೆಗಳು ನಿರ್ದಿಷ್ಟ ಮಿತಿಯಲ್ಲಷ್ಟೇ ಉಳಿಯುತ್ತವೆ. ಪ್ರತಿಯೊಬ್ಬರೂ ತಮ್ಮದೇ ಆದ ಪ್ರಪಂಚವನ್ನು ನಿರ್ಮಿಸಿಕೊಂಡು, ಒಳಗಿನಿಂದ ಬಲಶಾಲಿಯಾಗುವುದನ್ನು ಕಲಿಯುತ್ತಾರೆ’ ಎಂದ ಧ್ರುವ್ ವಿಕ್ರಮ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಿಲ್ಲ
ಇದೇ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ವಿಡಿಯೋ ಎಡಿಟ್ ಮಾಡುವುದು, ಫೋಟೋ-ವಿಡಿಯೋಗಳನ್ನು ಶೂಟ್ ಮಾಡುವುದು ಎಂದರೆ ತುಂಬಾ ಇಷ್ಟ. ಆದರೆ ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಿಲ್ಲ. ಸಿನಿಮಾಗಳ ಪ್ರಚಾರದ ಸಮಯದಲ್ಲಿ ಮಾತ್ರ ನಾನು ಆ್ಯಕ್ಟಿವ್ ಆಗಿರುತ್ತೇನೆ, ಉಳಿದ ಸಮಯದಲ್ಲಿ ಪುಸ್ತಕ ಓದುವುದು ಹಾಗೂ ಸಂಗೀತ ಕೇಳುವುದರಲ್ಲಿ ಮಗ್ನನಾಗಿರುತ್ತೇನೆ’ ಎಂದಿದ್ದಾರೆ.
ಅನುಪಮಾ ಪರಮೇಶ್ವರನ್ ಆರೋಪ ಏನಾಗಿತ್ತು?
ಅವರೊಂದಿಗೆ ನಾನು ಸಂಬಂಧದಲ್ಲಿದ್ದಾಗ, ಅವರು ನನಗೆ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸುತ್ತಿದ್ದರು. ನನ್ನನ್ನು ಎಲ್ಲ ರೀತಿಯಲ್ಲೂ ನಿಯಂತ್ರಿಸುತ್ತಿದ್ದರು. ನಾನು ಯಾವ ಬಟ್ಟೆ ಧರಿಸಬೇಕು? ಯಾವ ಬಟ್ಟೆ ಧರಿಸಬಾರದು? ಯಾವ ಸಿನಿಮಾಗೆ ಪ್ರಚಾರ ಮಾಡಬಾರದು? ಯಾವ ಸಿನಿಮಾಗೆ ಪ್ರಚಾರ ಮಾಡಬೇಕು? ಇನ್‌ಸ್ಟಾಗ್ರಾಮ್‌ನಲ್ಲಿ ಯಾವ ಪೋಸ್ಟ್‌ಗಳನ್ನು ಹಾಕಬೇಕು? ಏನಾದರೂ ಪೋಸ್ಟ್‌ಗಳನ್ನು ಹಾಕಿದರೆ, ಅವುಗಳನ್ನು ಡಿಲೀಟ್ ಮಾಡಿಸುತ್ತಿದ್ದರು.
ಇದನ್ನೂ ಓದಿ: Jana Nayagan OTT: ಒಟಿಟಿಗೆ ಬರ್ತಿದೆ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್'! ಸ್ಟ್ರೀಮಿಂಗ್ ಯಾವಾಗಿನಿಂದ?
ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಅವರೇ ನಿರ್ವಹಿಸುವಂತೆ ನನ್ನನ್ನು ನಿಯಂತ್ರಿಸುತ್ತಿದ್ದರು ಎಂದು ಅನುಪಮಾ ಹೇಳಿದ್ದಾರೆ.