ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗ್ರ್ಯಾಂಡ್‌ ಆಗಿ ನಡೆಯಿತು ಮಾನಸ - ಶಿವು ಎಂಗೇಜ್‌ಮೆಂಟ್‌; ಗುಡ್‌ ನ್ಯೂಸ್‌ ನೀಡಿದ ʻಗಿಚ್ಚಿ ಗಿಲಿ ಗಿಲಿʼ ಜೋಡಿ

Gicchi Giligili Manasa Shivu Engagement: ಕಲರ್ಸ್ ಕನ್ನಡದ ಜನಪ್ರಿಯ ಶೋಗಳಾದ 'ಗಿಚ್ಚಿ ಗಿಲಿ ಗಿಲಿ' ಮತ್ತು 'ಮಜಾಭಾರತ'ದ ಮೂಲಕ ಪ್ರಸಿದ್ಧರಾದ ನಟಿ ಮಾನಸಾ ಗುರುಸ್ವಾಮಿ ಮತ್ತು ಶಿವಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ನವೆಂಬರ್ 27 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಜೋಡಿಯ ಅದ್ದೂರಿ ನಿಶ್ಚಿತಾರ್ಥ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಎಂಗೇಜ್‌ಮೆಂಟ್‌ ಮಾಡಿಕೊಂಡ ʻಗಿಚ್ಚಿ ಗಿಲಿ ಗಿಲಿʼ ಖ್ಯಾತಿಯ ಮಾನಸ - ಶಿವು

-

Avinash GR
Avinash GR Nov 27, 2025 5:10 PM

ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ಶೋಗಳಾದ ʻಗಿಚ್ಚಿ ಗಿಲಿ ಗಿಲಿʼ & ʻಮಜಾಭಾರತʼ ಮೂಲಕ ಫೇಮಸ್‌ ಆದವರು ನಟಿ ಮಾನಸ ಗುರುಸ್ವಾಮಿ (Manasa Guruswamy) ಮತ್ತು ಶಿವಕುಮಾರ್.‌ ಇದೀಗ ಈ ಜೋಡಿ ಒಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವುದಕ್ಕೆ ಮುಂದಾಗಿದೆ. ಅದಕ್ಕೂ ಮುನ್ನ ಗ್ರ್ಯಾಂಡ್‌ ಆಗಿ ನಿಶ್ಚಿತಾರ್ಥ (Gicchi Giligili Manasa Shivu Engagement) ಮಾಡಿಕೊಂಡಿದೆ. ಕಿರುತೆರೆಯ ಅನೇಕ ಕಲಾವಿದರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

ನಿಶ್ಚಿತಾರ್ಥದ ಫೋಟೋಗಳು ವೈರಲ್‌

ʻಗಿಚ್ಚಿ ಗಿಲಿಗಿಲಿʼ ರಿಯಾಲಿಟಿ ಶೋ ಖ್ಯಾತಿಯ ಮಾನಸ ಹಾಗೂ ಶಿವಕುಮಾರ್‌ ಪ್ರೀತಿಸುತ್ತಿದ್ದು, ಇಬ್ಬರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಲ್ಲೂ ಓಡಾಡುತ್ತಿತ್ತು. ಇದೀಗ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.‌ ಸದ್ಯ ಈ ಜೋಡಿಯ ಅದ್ದೂರಿ ಎಂಗೇಜ್‌ಮೆಂಟ್‌ನ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಹಿರಿಯ ನಟ ದೊಡ್ಡಣ್ಣ ಅವರು ಆಗಮಿಸಿ, ಈ ಜೋಡಿಗೆ ಶುಭ ಹಾರೈಸಿದ್ದಾರೆ.

Chillar Manju: ದುಬಾರಿ ಕಾರು ಖರೀದಿಸಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಿಲ್ಲರ್ ಮಂಜು; ಬೆಲೆ ಎಷ್ಟು ಗೊತ್ತಾ..?

ಹಲವು ವರ್ಷಗಳಿಂದ ಸ್ನೇಹ

ಮಾನಸ ಮತ್ತು ಶಿವು ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಈ ಜೋಡಿಯು ಒಟ್ಟಿಗೆ ಹಲವು ಕಾಮಿಡಿ ಸ್ಕಿಟ್‌ಗಳನ್ನ ಮಾಡಿದೆ. ಈ ಹಿಂದೆ ಇದೇ ಶೋನಲ್ಲಿ ಕಾಣಿಸಿಕೊಂಡಿದ್ದ ಸುಷ್ಮಿತಾ ಮತ್ತು ಜಗಪ್ಪ ಅವರು ಹೀಗೆ ಪ್ರೀತಿಸಿ ಮದುವೆ ಆಗಿದ್ದರು. ಇದೀಗ ಮಾಸನ ಮತ್ತು ಶಿವು ಅವರ ಸರದಿ. ಸದ್ಯ ಮಾನಸ ಅವರು ʻನೀ ಇರಲು ಜೊತೆಯಲ್ಲಿʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Raghavendra: ಇದು ಮನೆ ಅಲ್ಲ.. ಅರಮನೆ: ಗಿಚ್ಚಿ ಗಿಲಿಗಿಲಿ ರಾಘವೇಂದ್ರ ಅವರ ಹೊಸ ಮನೆ ನೋಡಿ

ಯಾರೆಲ್ಲಾ ಬಂದಿದ್ದರು?

ಮಾನಸ ಗುರುಸ್ವಾಮಿ ಮತ್ತು ಶಿವಕುಮಾರ್‌ ಅವರ ನಿಶ್ಚಿತಾರ್ಥ ಸಮಾರಂಭಕ್ಕೆ ಬಿಗ್‌ ಬಾಸ್‌ ವಿನ್ನರ್‌ ಮಂಜು ಪಾವಗಡ, ನಟ ಸಿಹಿ ಕಹಿ ಚಂದ್ರು, ನನ್ನಮ್ಮ ಸೂಪರ್‌ ಸ್ಟಾರ್‌ ವಿಜೇತೆ ಯಶಸ್ವಿನಿ ಮತ್ತು ವಂಶಿಕಾ ಅಂಜನಿ ಕಶ್ಯಪ ಸೇರಿದಂತೆ ಅನೇಕರು ಆಗಮಿಸಿದ್ದರು. ಕಿರುತೆರೆಯ ಅನೇಕರು ಬಂದು ಈ ಹೊಸ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳು ಕೂಡ ಮಾನಸ ಗುರುಸ್ವಾಮಿ ಮತ್ತು ಶಿವಕುಮಾರ್‌ ಅವರಿಗೆ ಶುಭ ಕೋರಿದ್ದಾರೆ. ಇವರ ಮದುವೆ ಯಾವಾಗ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ನವೆಂಬರ್‌ 27ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಬಹುಶಃ ಶೀಘ್ರದಲ್ಲೇ ಮದುವೆ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ.