Chillar Manju: ದುಬಾರಿ ಕಾರು ಖರೀದಿಸಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಿಲ್ಲರ್ ಮಂಜು; ಬೆಲೆ ಎಷ್ಟು ಗೊತ್ತಾ..?
ಗಿಚ್ಚಿ-ಗಿಲಿಗಿಲಿ ಶೋ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ಜೊತೆಗೆ ತಮ್ಮ ಅದ್ಭುತ ಹಾಸ್ಯದ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದ ಚಿಲ್ಲರ್ ಮಂಜು ಹೊಚ್ಚ ಹೊಸ ಕಾರನ್ನು ಖರೀದಿ ಮಾಡಿದ್ದಾರೆ.
ದುಬಾರಿ ಕಾರ್ ಖರೀದಿಸಿದ ಚಿಲ್ಲರ್ ಮಂಜು

ಬೆಂಗಳೂರು: ಒಬ್ಬೊಬ್ಬ ಕಲಾವಿದನ ಹಿಂದೆ ಒಂದೊಂದು ಹೇಳಿಕೊಳ್ಳಲಾಗದಂತ ನೋವು ಇದ್ದೇ ಇರುತ್ತೆ. ದೊಡ್ಡ ಮಟ್ಟಕ್ಕೆ, ಉನ್ನತ ಸ್ಥಾನಕ್ಕೆ ಬೆಳೀಬೇಕು ಅಂದ್ರೆ ಅದರ ಹಿಂದೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಅದರಲ್ಲೂ ಈಗಿನ ಕಾಲದ ಜನರಿಗೆ ನಗಿಸಬೇಕು ಅಂದ್ರೆ ಹರಸಾಹಸವೇ ಪಡಬೇಕು. ಹೀಗೆ ಕಷ್ಟಪಟ್ಟು ಮೇಲೆ ಬಂದ ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರವಾಗ್ತಿದ್ದ ಗಿಚ್ಚಿ ಗಿಲಿ ಗಿಲಿ (Gicchi Gili Gili) ಖ್ಯಾತಿಯ ಗ್ರಾಮೀಣ ಪ್ರತಿಭೆ ಚಿಲ್ಲರ್ ಮಂಜು(Chillar Manju) ಇಂದು ಸಾಧನೆಯ ಹಾದಿಯಲ್ಲಿದ್ದು, ದುಬಾರಿ ಮೌಲ್ಯದ ಕಾರು ಒಂದನ್ನು ಖರೀದಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾ(Socail Media)ದಲ್ಲಿ ಆ ಚಿಲ್ಲರ್ ಮಂಜು ಭಾರೀ ಸದ್ದು ಮಾಡುತ್ತಿದ್ದು, ಅವರು ಹಂಚಿಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.
ಹೌದು ತಮ್ಮ ಕಾಮಿಡಿ ಅಲ್ಲದೇ ಸಖತ್ ಪಂಚ್ ಮೂಲಕ ವೀಕ್ಷಕರ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುವ ಕಲಾವಿದರು ತೆರೆ ಹಿಂದೆ ಎಷ್ಟಲ್ಲಾ ಕಷ್ಟ ನೋವುಗಳನ್ನು ಅನುಭವಿಸುತ್ತಾರೆ ಅಂತ ಅವರಿಗೆ ಮಾತ್ರ ಗೊತ್ತಿರುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಲ್ಲರ್ ಮಂಜು ನಮ್ಮ ಕಣ್ಣ ಮುಂದೆ ಇದ್ದು, ತಮ್ಮ ಪ್ರತಿಭೆಯಿಂದ ಈಗ ಜೀವನದಲ್ಲಿ ಮುಂದೆ ಬಂದಿದ್ದಾರೆ.
ಮಜಾಭಾರತ, ಗಿಚ್ಚಿ-ಗಿಲಿಗಿಲಿ ಶೋ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ಜೊತೆಗೆ ತಮ್ಮ ಅದ್ಭುತ ಹಾಸ್ಯದ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದ ಇದೀಗ 22 ಲಕ್ಷದ ದುಬಾರಿ ಕಾರ್ ಖರೀದಿಸುವ ಮೂಲಕ ಗಮನ ಸೆಳೆದಿದ್ದು, ಟಾಟಾ ಕರ್ವ್ವಿ ಕೂಪೆ ಎಸ್‌ಯುವಿ (Tata Curvv Coupe SUV) ಕಾರನ್ನು ಖರೀದಿ ಮಾಡಿರುವ ಚಿಲ್ಲರ್ ಮಂಜು ತಮ್ಮ ಗಾಡಿಯ ಮುಂದೆ ಸಖತಾಗಿ ಫೋಸ್ ಕೂಡ ಕೊಟ್ಟಿದ್ದಾರೆ. ಹೊಸ ಕಾರನ್ನು ಖರೀದಿ ಮಾಡಿರೋ ವಿಡೀಯೋವನ್ನು ಚಿಲ್ಲರ್ ಮಂಜು ತಮ್ಮ ಇನ್ ಸ್ಟಾಗ್ರಾ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂಕ್ರಾಂತಿ ಹಬ್ಬದ ಸಮಯದಲ್ಲಿ ಚಿಲ್ಲರ್ ಮಂಜು ಈ ಕಾರ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನು ಓದಿ: Saif Ali Khan: ಸೈಫ್ ಕೇಸ್- ಸಿಸಿಟಿವಿ ದೃಶ್ಯದಲ್ಲಿರುವುದು ನನ್ನ ಮಗನಲ್ಲ... ಆರೋಪಿಯ ತಂದೆಯಿಂದ ಶಾಕಿಂಗ್ ಹೇಳಿಕೆ
ಇನ್ನೂ ನಟ ಶೇರ್ ಮಾಡಿಕೊಂಡ ವಿಡಿಯೋಗೆ ಸಾಕಷ್ಟು ಕಮೆಂಟ್, ಲೈಕ್ಸ್ ಬಂದಿದ್ದು, ಕೆಲವರು ಬಡವರು ಮಕ್ಕಳು ಹೀಗೆ ಬೆಳಿಬೇಕು ಕಂಡ್ರಯ್ಯಾ ಎಂದು ತಮ್ಮ ಖುಷಿಯನ್ನು ಹೊರಹಾಕಿದ್ದಾರೆ, ಮತ್ತೂ ಕೆಲವರೂ ಕಾರು ಖರೀದಿ ಮಾಡುವ ಮೊದಲು ಮನೆ ಅಥವಾ ಜಮೀನು ಖರೀದಿ ಮಾಡಿದ್ರೆ ಚೆನ್ನಾಗಿತ್ತು, ಇಷ್ಟು ದುಬಾರಿ ಮೌಲ್ಯದ ಕಾರ್ ಖರೀದಿ ಮಾಡುವ ಬದಲು ಫಿನಾನ್ಶಿಯಲ್ ಸ್ಟ್ರಾಂಗ್ ಆಗಿ ಜೀವನ ಕಟ್ಟಿಕೊಳ್ಳಬಹುದಿತ್ತು ಎಂದರೆ, ಮತ್ತೊಬ್ಬರು ಕಾರ್ಯಕ್ರಮಕ್ಕೆ ಹೋದ್ರೆ 10 -15 ಸಾವಿರ ಚಾರ್ಜ್ ಮಾಡ್ತಾರೆ.
ತಿಂಗಳಿಗೆ 10 ಪ್ರೋಗ್ರಾಂಗೆ ಹೋದ್ರೂ ಕನಿಷ್ಠ 75 ಸಾವಿರ ಸಿಗುತ್ತೆ. ಜಾಹೀರಾತು, ಗಿಚ್ಚಿ ಗಿಲಿಗಿಲಿ, ಸಿನಿಮಾ ಸೇರಿದಂತೆ ವರ್ಷಕ್ಕೆ ಸುಮಾರು 6 ಲಕ್ಷಕ್ಕಿಂತ ಹೆಚ್ಚು ಹಣವನ್ನು ಅವರು ಗಳಿಸ್ತಾರೆ. ಕಷ್ಟಪಟ್ಟು ದುಡಿದ ಹಣದಲ್ಲಿ ತಮ್ಮಿಷ್ಟದ ವಸ್ತು ಖರೀದಿ ಮಾಡಿದ್ದಾರೆ. ಇಎಂಐ ಮೂಲಕ ಕಾರ್ ಖರೀದಿ ಮಾಡಿರಬಹುದು. ಅವರ ಕೆಲಸವನ್ನು ಶ್ಲಾಘಿಸೋಣ, ಇನ್ನಷ್ಟು ಯಶಸ್ಸು ಕಾಣಲಿ ಅಂತ ಹರಸೋಣ ಎಂದು ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ. ಮಜಾ ಭಾರತ, ಗಿಚ್ಚಿ ಗಿಲಿಗಿಲಿ ನಂತ್ರ ಕೆಲ ಸಿನಿಮಾಗಳಲ್ಲಿ ಚಿಲ್ಲರ್ ಮಂಜು ನಟಿಸಿದ್ದಾರೆ. ಉದಯೋನ್ಮುಕ ಹಾಸ್ಯ ಕಲಾವಿದ ಚಿಲ್ಲರ್ ಮಂಜು ಕೆರೆ ಭೇಟೆ, ದಿಲ್ ದಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.