ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Moda Kavida Vatavarana: ಸಿಂಪಲ್‌ ಸುನಿ ಹೊಸ ಸಿನಿಮಾ ಘೋಷಣೆ; ‘ಮೋಡ ಕವಿದ ವಾತಾವರಣಕ್ಕೆ ಹೀರೋ ಆದ ಶೀಲಮ್

ಕನ್ನಡ ಚಿತ್ರರಂಗಕ್ಕೆ ಹೊಸಮುಖಗಳನ್ನು ಪರಿಚಯಿಸುವುದರಲ್ಲಿ ಫಂಟರ್‌ ಎನಿಸಿ ಕೊಂಡಿರುವ ಸಿಂಪಲ್‌ ಸುನಿ ಇದೀಗ ಮತ್ತೊಬ್ಬ ಹೊಸ ಹೀರೋವನ್ನು ಸಿನಿಮಾಪ್ರೇಕ್ಷಕರ ಎದುರು ಹಾಜರು ಪಡಿಸಿದ್ದಾರೆ. ಸುನಿ ಅವರು ಹೊಸ ಚಿತ್ರ ಮೋಡ ಕವಿದ ವಾತಾವರಣ ಸಿನಿಮಾ ಮೂಲಕ ಶೀಲಮ್‌ ಎಂಬ ಯುವ ಪ್ರತಿಭೆ ನಾಯಕನಾಗಿ ಹೆಜ್ಜೆ ಇಡುತ್ತಿದ್ದಾರೆ.

ಮೋಡ ಕವಿದ ವಾತಾವರಣ ಚಿತ್ರಕ್ಕೆ ಹೊಸ ಹೀರೋನ ಎಂಟ್ರಿ!

Moda Kavida Vatavarana Movie

Profile Pushpa Kumari Jul 13, 2025 8:53 PM

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಹೊಸಮುಖಗಳನ್ನು ಪರಿಚಯಿಸುವುದರಲ್ಲಿ ಫಂಟರ್‌ ಎನಿಸಿ ಕೊಂಡಿರುವ ಸಿಂಪಲ್‌ ಸುನಿ ಇದೀಗ ಮತ್ತೊಬ್ಬ ಹೊಸ ಹೀರೋವನ್ನು ಸಿನಿಮಾಪ್ರೇಕ್ಷಕರ ಎದುರು ಹಾಜರುಪಡಿಸಿದ್ದಾರೆ. ಸುನಿ ಅವರು ಹೊಸ ಚಿತ್ರ ಮೋಡ ಕವಿದ ವಾತಾವರಣ (Moda Kavida Vatavarana) ಸಿನಿಮಾ ಮೂಲಕ ಶೀಲಮ್‌ ಎಂಬ ಯುವ ಪ್ರತಿಭೆ ನಾಯಕನಾಗಿ ಹೆಜ್ಜೆ ಇಡುತ್ತಿದ್ದಾರೆ. ನಿರ್ದೇಶಕ ಸುನಿ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ, ಸಣ್ಣ ಪುಟ್ಟ ಪಾತ್ರಗಳಲ್ಲೂ ಕಾಣಿಸಿಕೊಂಡಿರುವ ಶೀಲಮ್‌ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೊನೆಯ ದಿನದ ಚಿತ್ರೀಕರಣ ಹಮ್ಮಿಕೊಳ್ಳಲಾಗಿತ್ತು. ಚಿತ್ರೀಕರಣ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಸಿಂಪಲ್‌ ಸುನಿ, ಒಂದು ಸರಳ ಪ್ರೇಮಕಥೆ ನನ್ನ ಲೈಫ್‌ನಲ್ಲಿ ಬೇರೆ ರೀತಿ ಸಿನಿಮಾ. ನನ್ನ ಲೈಫ್‌ಗೆ ಬೂಸ್ಟ್‌ ನೀಡಿದ ಸಿನಿಮಾ. ಇದಾದ ಬಳಿಕ ಕೈಗೆತ್ತಿಕೊಂಡಿರುವ ಸಿನಿಮಾವೇ ‘ಮೋಡ ಕವಿದ ವಾತಾ ವರಣʼ. ಈ ಚಿತ್ರದ ಮೂಲಕ ಹೊಸ ಹೀರೋ ಲಾಂಚ್‌ ಆಗುತ್ತಿದ್ದಾರೆ. ಹೀರೋ ನಮ್ಮ ಮನೆ ಮಗ ಶಿಲಮ್‌ ಎಂದು ಖುಷಿ ಹಂಚಿಕೊಂಡರು.

ನಟ ಶೀಲಮ್‌ ಮಾತನಾಡಿ ಗುರುಪೂರ್ಣಿಮಾ ದಿನ ಸುನಿ ಸರ್‌ ತಮ್ಮ ಶಿಷ್ಯನನ್ನು ಲಾಂಚ್‌ ಮಾಡಿ ದ್ದಾರೆ. ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿರುವುದು ನನ್ನ ಅದೃಷ್ಟ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಟೆಕ್ನಿಷಿಯನ್‌ ದೊಡ್ಡ ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಒಂದೊಳ್ಳೆ ಟೀಂ ಜೊತೆ ಲಾಂಚ್‌ ಆಗುತ್ತಿರುವುದು ಖುಷಿ ಇದೆ ಎಂದರು.

ನಟಿ ಸಾತ್ವಿಕಾ ಮಾತನಾಡಿ, ಇದು ನನ್ನ ಡ್ರೀಮ್‌ ಪ್ರಾಜೆಕ್ಟ್.‌ ಸುನಿ ಸರ್‌ ಜೊತೆ ಕೆಲಸ ಮಾಡ ಬೇಕೆಂದು ಕೇಳಿಕೊಂಡಿದ್ದೆ. ಅವರ ಬಳಿ ಕಲಿಯುವುದು ತುಂಬಾನೇ ಇದೆ. ಇನ್ನು ಶೀಲಮ್‌ ಡೆಡಿಕೇಟೆಡ್‌ ಆ್ಯಕ್ಟರ್ ಆಗಿದ್ದು ಅವರು ಸಿನಿಮಾಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಇದನ್ನು ಓದಿ:Kothalavadi Movie: 'ಕೊತ್ತಲವಾಡಿʼ ಟೈಟಲ್‌ ಟ್ರ್ಯಾಕ್ ರಿಲೀಸ್... ಯಶ್‌ ತಾಯಿ ನಿರ್ಮಾಣದ ಚಿತ್ರ ಆಗಸ್ಟ್‌ 1ಕ್ಕೆ ಬಿಡುಗಡೆ!

‘ಮೋಡ ಕವಿದ ವಾತಾವರಣʼ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ರೀ-ರೆಕಾರ್ಡಿಂಗ್‌ ಕೆಲಸಗಳೆಲ್ಲ ಬಹುತೇಕ ಮುಗಿದು ಚಿತ್ರದ ರಿಲೀಸ್‌ಗೆ ತಯಾರಾಗಿದೆ. ಸೈಂಟಿಫಿಕ್‌ ಫಿಕ್ಷನ್‌ ಪ್ರೇಮ ಕಥಾಹಂದರವನ್ನು ಹೊಂದಿರುವ ‘ಮೋಡ ಕವಿದ ವಾತಾವರಣವನ್ನು ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.‌ ಮೋಡ ಕವಿದ ವಾತಾವರಣ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ನೀಡಿದ್ದು ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ‌ ಸಿನಿಮಾಗಿದೆ.