ʻಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ..ʼ; ಹುಟ್ಟುಹಬ್ಬಕ್ಕಾಗಿ ಬಿಗ್ ಅಪ್ಡೇಟ್ ಕೊಟ್ಟ ಸುದೀಪ್, ಕಿಚ್ಚನ ಫ್ಯಾನ್ಸ್ ಇದನ್ನು ಓದಲೇಬೇಕು!
ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಕಿಚ್ಚ ಸುದೀಪ್ ಈ ಬಾರಿ ವೈಯಕ್ತಿಕ ಕಾರಣಗಳಿಂದಾಗಿ ರದ್ದುಗೊಳಿಸಿದ್ದಾರೆ. ಮೂರು ದಶಕಗಳ ಕಾಲ ಅಪಾರ ಪ್ರೀತಿ ತೋರಿದ ಅಭಿಮಾನಿಗಳಲ್ಲಿ ಕ್ಷಮೆ ಕೋರಿರುವ ಅವರು, ಮನೆಯ ಬಳಿ ಬಂದು ಗದ್ದಲ ಮಾಡದೆ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲು ವಿನಂತಿಸಿದ್ದಾರೆ.
-
ನಟ ʻಕಿಚ್ಚʼ ಸುದೀಪ್ ಅವರಿಗೆ ಸೆ.2ರಂದು ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳಲ್ಲಿ ಒಂದು ಕಳಕಳೀಯ ಮನವಿ ಮಾಡಿಕೊಂಡಿದ್ದಾರೆ. "ವರ್ಷಗಳಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಎಲ್ಲಾ ಪ್ರೀತಿಪಾತ್ರರಿಗೆ.. ಹೃತ್ಪೂರ್ವಕ ಧನ್ಯವಾದಗಳು. ನಾನು ಈ ವಿನಂತಿಯನ್ನು ಪತ್ರದ ರೂಪದಲ್ಲಿ ಹಾಕಲು ಹಲವಾರು ಕಾರಣಗಳಿವೆ. ಇದನ್ನು ಅರ್ಥಮಾಡಿಕೊಂಡು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲಾಗಿದೆ ಎಂದು ಭಾವಿಸುತ್ತೇನೆ.." ಎಂದು ಸುದೀಪ್ ಹೇಳಿಕೊಂಡಿದ್ದಾರೆ.
"ಆತ್ಮೀಯ ಸ್ನೇಹಿತರೇ, ನಮಸ್ಕಾರ, ಹೇಗಿದ್ದೀರಿ? ಸೆಪ್ಟೆಂಬರ್ 2 ಎ೦ಬುದು ಒ೦ದು ದಿನಾಂಕ ಅಷ್ಟೇ. ಅದನ್ನು ಸಂಭ್ರಮವನ್ನಾಗಿ 30 ವರ್ಷಗಳಿಂದ ಪರಿವರ್ತಿಸಿದ ಅಪಾರ ಪ್ರೀತಿ ನಿಮ್ಮದು. ನಿಮ್ಮ ಅಭಿಮಾನ, ಹುಚ್ಚು ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕಳೆದ 30 ವರ್ಷಗಳಲ್ಲಿ ನಿಮ್ಮ ಚಪ್ಪಾಳೆ, ಶಿಳ್ಳೆಗಳಲ್ಲಿ ಇನ್ನು ಹೆಚ್ಚು ಹೆಚ್ಚು ಪ್ರೋತ್ಸಾಹ ಪ್ರೀತಿ ಕಂಡುಕೊಂಡಿದ್ದೇನೆ"
Kiccha Sudeep: 'ಬಿಗ್ ಬಾಸ್ ಕನ್ನಡ' ಶೋಗೆ ಗುಡ್‌ಬೈ ಹೇಳಿದ Kiccha Sudeep; ಅಭಿಮಾನಿಗಳಿಗೆ ತೀವ್ರ ಬೇಸರ!
"ಪ್ರತಿ ಸಿನಿಮಾ ಇರಲಿ, BIGG BOSS ಇರಲಿ ಜೊತೆಗೆ ಯಾವುದೇ ಕಾರ್ಯಕ್ರಮಕ್ಕೆ ಮುಂದಾದಾಗ ನೀವು ತೋರಿಸಿದ ಪ್ರೀತಿ ಅಪರಿಮಿತ.. ಅದೇ ನನಗೆ ಶ್ರೀರಕ್ಷೆ. ಆದರೆ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಬಲವಾದ ಮತ್ತು ವೈಯಕ್ತಿಕ ಕಾರಣಗಳಿವೆ. ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವೆ ಅಲ್ಲ ನನಗೆ.."
"ನಿಮ್ಮ ನಿಮ್ಮ ಊರು, ಭಾಗಗಳಲ್ಲಿ ನೀವು ನೆಡೆಸುವ ಕಾರ್ಯಕ್ರಮಗಳೇ ಆಶೀರ್ವಾದ. ಅದು ಸದಾ ಮುಂದುವರೆಯಲಿ. ಮತ್ತೆ ಭೇಟಿ ಆಗೋಣ. ನನ್ನನ್ನು ನಿಮ್ಮನ್ನು ಎ೦ದಾದರೂ ಬೇರ್ಪಡಿಸಲು ಸಾಧ್ಯವೇ? ಅಂದು ಮನೆಯ ಬಳಿಯೂ ಯಾರಿಗೂ ಲಭ್ಯವಾಗುತ್ತಿಲ್ಲ. ಸತ್ಕಾರಗಳು ಗದ್ದಲವಾಗಬಾರದು ಎ೦ಬುದನ್ನು ನಿಮ್ಮಲ್ಲಿ ಪದೇ ಪದೇ ಅರಿಕೆ ಮಾಡಿಕೊಂಡಿದ್ದೇನೆ. ನಿಮ್ಮಉಡುಗೊರೆಗಳು ಸಮಾಜಕ್ಕೆ ಸದ್ವಿನಿಯೋಗವಾಗಲಿ. ನಿಮ್ಮ ಪ್ರೀತಿ, ಹಾರೈಕೆಗಳಿಗಿಂತ ಮತ್ತೊಂದು ಶ್ರೀರಕ್ಷೆ, ಆಶೀರ್ವಾದ ಇರಲು ಸಾಧ್ಯವೇ?"
ಕಿಚ್ಚ ಸುದೀಪ್ ಟ್ವೀಟ್
To all those lovable ones who have been celebrating my bday n me for years.. Heartfelt thanks ❤️.
— Kichcha Sudeepa (@KicchaSudeep) August 27, 2026
There are several reasons for me putting out this request in form of a letter.
Hope it’s understood & taken in th right spirit .
Much much luv to one n all❤️ pic.twitter.com/j9TKurIq0Y
"ಮತ್ತೊಂದು ವಿಷಯ .. 30 ವರ್ಷ... ಅಂದರೆ "ಬರೋಬ್ಬರಿ ಮೂವತ್ತು ವರ್ಷ" ಕನ್ನಡ ಚಿತ್ರರಂಗಕ್ಕೆ ಅರ್ಪಿಸಿಕೊಂಡವನಿಗೆ ಸಿನಿಮಾ ನನ್ನ ಪರಮ ಕಾಯಕ ಅನ್ನೋದು ಸ್ಪಷ್ಟ. ಕೆಲವೊಮ್ಮೆ ತಡವಾಗಬಹುದು ಅದಕ್ಕೂ ಕಾರಣಗಳಿರುತ್ತವೆ. ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ. ನೋಡಿ, ನನ್ನದೇ ಸಿನಿಮಾ ಸಂಭಾಷಣೆ ಹೀಗೆ ಈ ಪತ್ರದಲ್ಲಿ ನನ್ನ ಬಳಕೆಗೆ ಬರುತ್ತದೆ ಎ೦ದು ನಾನೂ ಅಂದುಕೊಂಡಿರಲಿಲ್ಲ. ಯಾವುದೇ ವೇದಿಕೆ, ಯಾವುದೇ ಕಾರ್ಯಕ್ರಮಕ್ಕೆ ಹೋದರು ಕನ್ನಡಿಗರನ್ನು ರಂಜಿಸಲು, ಕನ್ನಡವನ್ನು ಕುಣಿಸಲು"
"ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ. ನಿಮ್ಮನ್ನು ರಂಜಿಸುವ ವಿಷಯದಲ್ಲಿ ಯಾವತ್ತಿಗೂ ರಾಜಿಯಾದವನಲ್ಲ ನಾನು. ರಾಜಿ ಆಗುವುದೂ ಇಲ್ಲ. ನನ್ನ ಎಲ್ಲ ಹೆಜ್ಜೆಗಳಲ್ಲಿ ನೀವಿದ್ದೀರಿ ಹೆಜ್ಜೆ ಗುರುತಾಗಿ. ಏನೇ ಇರಲಿ ಜೀವನದಲ್ಲಿ ಹೂ ಮುಳ್ಳು, ನಿಮ್ಮ ಪ್ರೀತಿ ಮೈಲಿಗಲ್ಲು" - ಸುದೀಪ್ ವಿವರವಾಗಿ ಪತ್ರದಲ್ಲಿ ತಿಳಿಸಿದ್ದಾರೆ.