ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rita Bhattacharya: ಗರ್ಭಿಣಿಯಾಗಿದ್ದಾಗ ಚಿತ್ರಹಿಂಸೆ ನೀಡಿದ್ದರು; ಖ್ಯಾತ ಗಾಯಕನ ಮಾಜಿ ಪತ್ನಿಯಿಂದ ಗಂಭೀರ ಆರೋಪ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ರೀಟಾ ಭಟ್ಟಾಚಾರ್ಯ ಮದುವೆಯಾದ ಬಳಿಕ ಹಲವು ರೀತಿಯ ಹಿಂಸೆಯನ್ನು ತಾನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ತಮ್ಮ ಮೂರನೇ ಮಗು ಜಾನ್ ಕುಮಾರ್ ಸಾನು ಗರ್ಭದಲ್ಲಿದ್ದಾಗ ಕುಮಾರ್ ಸಾನು ಅವರಿಂದ ಚಿತ್ರಹಿಂಸೆಗೆ ಒಳಗಾಗಿದ್ದಾಗಿ ಆರೋಪಿಸಿದ್ದಾರೆ.

ಖ್ಯಾತ ಗಾಯಕನ ವಿರುದ್ಧ ಮಾಜಿ ಪತ್ನಿಯಿಂದ ಗಂಭೀರ ಆರೋಪ

-

Profile Pushpa Kumari Sep 23, 2025 7:42 PM

ಮುಂಬೈ: ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳ ಹಿಟ್ ಹಾಡುಗಳಿಗೆ ಧ್ವನಿ ನೀಡಿರುವ ಖ್ಯಾತ ಹಿನ್ನೆಲೆ ಗಾಯಕ ಕುಮಾರ್ ಸಾನು (Kumar Sanu) ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿ ಬಂದಿದೆ.‌ ಅವರ ಮಾಜಿ ಪತ್ನಿ ರೀಟಾ ಭಟ್ಟಾಚಾರ್ಯ ಹಲವು ಆರೋಪಗಳನ್ನು ಹೊರಿಸಿದ್ದಾರೆ. ತಾನು ಗರ್ಭಿಣಿಯಾಗಿದ್ದಾಗ ಕುಮಾರ್ ಸಾನು ಹೀನಾಯವಾಗಿ ಹಿಂಸಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಕುಮಾರ್ ಸಾನು ಹೊಂದಿರುವ ಆಫೇರ್ ಬಗ್ಗೆಯೂ ಮಾತನಾಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ರೀಟಾ ಭಟ್ಟಾಚಾರ್ಯ ಮದುವೆಯಾದ ಬಳಿಕ ಹಲವು ರೀತಿಯ ಹಿಂಸೆಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ತಮ್ಮ ಮೂರನೇ ಮಗು ಜಾನ್ ಕುಮಾರ್ ಸಾನು ಗರ್ಭದಲ್ಲಿದ್ದಾಗ ಕುಮಾರ್ ಸಾನು ಅವರಿಂದ ಚಿತ್ರಹಿಂಸೆಗೆ ಒಳಗಾಗಿದ್ದಾಗಿ ದೂರಿದ್ದಾರೆ. ಸರಿಯಾದ ಊಟ, ವೈದ್ಯಕೀಯ ಸೇವೆ ಮತ್ತು ಮನೆಯಿಂದ ಹೊರಗೆ ಹೋಗುವ ಸ್ವಾತಂತ್ರ್ಯವನ್ನು ಕೂಡ ನಿರಾಕರಿಸಿದ್ದರು. ಗರ್ಭಿಣಿಯಾಗಿದ್ದಾಗ ತನಗೆ ಸರಿಯಾಗಿ ಊಟ ಇರುತ್ತಿರಲಿಲ್ಲ. ಮನೆಗೆಲಸದವರಿಗೆ ಹೋಲಿಸಿ ಅಪಹಾಸ್ಯ ಮಾಡುತ್ತಿದ್ದರು ಎಂದು ರೀಟಾ ಕಣ್ಣೀರು ಸುರಿಸಿದ್ದಾರೆ.

ಇದನ್ನು ಓದಿ:Kothalavadi Movie: 'ಕೊತ್ತಲವಾಡಿ' ಸಹ ನಟನಿಗೆ ಮಾತ್ರವಲ್ಲ ನಟಿಗೂ ಸಂಭಾವನೆ ಕೊಟ್ಟಿಲ್ವ ಯಶ್ ಅಮ್ಮ? ಏನಿದು ವಿವಾದ?

ಗಾಯಕ ಕುಮಾರ್ ಸಾನು ಅಫೇರ್ ಹೊಂದಿದ್ದರು ಎಂದು ರೀಟಾ ಆರೋಪಿಸಿದ್ದಾರೆ. ʼʼಅವರು ಅಫೇರ್ ಇಟ್ಟಕೊಂಡು ಗರ್ಭಿಣಿಯಾಗಿದ್ದಾಗಲೂ ತಾನು ಬೇರೊಬ್ಬರೊಂದಿಗೆ ಸಂಬಂಧ ಹೊಂದಿರುವುದಾಗಿ ನನ್ನ ಮೇಲೇಯೇ ಆರೋಪ ಹೊರಿಸಿದ್ದರು. ಅದಕ್ಕೆ ನನ್ನನ್ನೇ ದೂಷಿಸಿ ಗರ್ಭಿಣಿಯಾಗಿದ್ದಾಗಲೂ ನ್ಯಾಯಾಲಯಕ್ಕೆ ಕರೆದೊಯ್ದರುʼʼ ಎಂದು ಕರಾಳ ಅನುಭವ ಹಂಚಿಕೊಂಡಿದ್ದಾರೆ. ಕುಮಾರ್ ಸಾನು ಮದುವೆಯಾಗಿದ್ದಾಗ ನಟಿ ಕುನಿಕಾ ಸದಾನಂದ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಕುನಿಕಾ ಕೂಡ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಕುಮಾರ್ ಸಾನು ಅವರ ಪತ್ನಿ ರೀಟಾ ಒಮ್ಮೆ ಕೋಪದಿಂದ ಸ್ಟಿಕ್‌ನಿಂದ ಹೊಡೆದಿದ್ದರು ಎಂದು ಅವರು ಹಿಂದೊಮ್ಮೆ ಬಹಿರಂಗಪಡಿಸಿದ್ದರು. ರೀಟಾ ತಮ್ಮ ಮಕ್ಕಳ ಪೋಷಣೆಗೆ ಹಣ ಸಿಗದೆ ಕೋಪಗೊಂಡಿದ್ದಳು ಎಂದು ಕುನಿಕಾ ಹೇಳಿದ್ದರು. 1994ರಲ್ಲಿ ಕುಮಾರ್ ಸಾನು ಮತ್ತು ರೀಟಾ ವಿಚ್ಛೇದನ ಪಡೆದರು. ಕುಮಾರ್ ಸಾನು ನಂತರ ಸಲೋನಿ ಭಟ್ಟಾಚಾರ್ಯ ಅವರನ್ನು ವಿವಾಹವಾದರು ಮತ್ತು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರೀಟಾ ಭಟ್ಟಾಚಾರ್ಯ ಅವರಿಗೆ ಮೂವರು ಮಕ್ಕಳಿದ್ದು, ಅವರಲ್ಲಿ ಜಾನ್ ಕುಮಾರ್ ಸಾನು ಕೂಡ ಒಬ್ಬರು.