ಸನ್ ರೈಸರ್ಸ್ ಹೈದರಾಬಾದ್ ಓನರ್ ಜೊತೆ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಕಲ್ಯಾಣ; ಮದುವೆ ಗಾಸಿಪ್‌ಗೆ ಸಿಕ್ಕೇ ಬಿಡ್ತಾ ಉತ್ತರ?
ಭಾರತದ ಟಾಪ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಕಳೆದ ವರ್ಷದಿಂದಲೇ ಇವರಿಬ್ಬರ ಡೇಟಿಂಗ್ ಸುದ್ದಿಗಳು ಹರಿದಾಡುತ್ತಿದ್ದು, ಈ ವರ್ಷದ ಆಗಸ್ಟ್ ಬಳಿಕ ವಿವಾಹ ನಡೆಯಲಿದೆ ಎನ್ನಲಾಗಿದೆ.
-
ಸದ್ಯ ಭಾರತದ ಟಾಪ್ ಮ್ಯೂಸಿಕ್ ಡೈರೆಕ್ಟರ್‌ಗಳಲ್ಲಿ ಅನಿರುದ್ಧ್ ರವಿಚಂದರ್ ಕೂಡ ಒಬ್ಬರು. ಅವರ ಸಂಭಾವನೆ ಈಗ 25 ಕೋಟಿ ರೂ. ದಾಟಿದೆ ಎನ್ನುತ್ತವೆ ಮೂಲಗಳು. ಇದೀಗ ಅನಿರುದ್ಧ್ ಮದುವೆ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಆಗಿರುವ ಕಾವ್ಯಾ ಮಾರನ್ ಜೊತೆಗೆ ಶೀಘ್ರದಲ್ಲೇ ಅನಿರುದ್ಧ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಸದ್ಯ ಸಖತ್ ವೈರಲ್ ಆಗುತ್ತಿದೆ.
ಅಧಿಕೃತ ಮಾಹಿತಿ ಯಾವಾಗ?
ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಇವರಿಬ್ಬರ ರಿಲೇಶನ್‌ಶಿಪ್ ಮತ್ತು ಮದುವೆ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಮಾಧ್ಯಮಗಳ ಇತ್ತೀಚಿನ ವರದಿಗಳ ಪ್ರಕಾರ, ಇವರಿಬ್ಬರು ಈ ವರ್ಷವೇ ಆಗಸ್ಟ್ ನಂತರ ಮದುವೆಯಾಗಲು ಪ್ಲಾನ್ ಮಾಡಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಎರಡೂ ಕುಟುಂಬಗಳಿಂದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ ಎನ್ನುವ ವದಂತಿಗಳು ಜೋರಾಗಿ ಹರಿದಾಡುತ್ತಿವೆ.
ಶತಕ ಕಂಡು ಭಾವುಕರಾದ ಅಭಿಷೇಕ್ ಶರ್ಮ ತಾಯಿಯನ್ನು ಅಪ್ಪಿಕೊಂಡ ಕಾವ್ಯಾ ಮಾರನ್
ಹಲವು ದಿನಗಳಿಂದಲೇ ಹರಿದಾಡುತ್ತಿರುವ ಸುದ್ದಿ!
ಅನಿರುದ್ಧ್ ಮತ್ತು ಕಾವ್ಯಾ ಮಾರನ್ ನಡುವೆ ಏನೋ ನಡೀತಿದೆ ಎಂಬ ವದಂತಿಗಳು ಇವತ್ತಿನದ್ದಲ್ಲ. ಕಳೆದ ವರ್ಷದ ಜೂನ್ ತಿಂಗಳಿನಿಂದಲೇ ಇವರಿಬ್ಬರ ಡೇಟಿಂಗ್ ರೂಮರ್ಸ್ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸದ್ದು ಮಾಡಿದ್ದವು. ಇವರಿಬ್ಬರು ವಿದೇಶದ ಲಾಸ್ ವೇಗಾಸ್‌ನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು, ಅಲ್ಲಿ ಡಿನ್ನರ್ ಡೇಟ್‌ಗಳನ್ನು ಎಂಜಾಯ್ ಮಾಡುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು ಎಂದು ಸುದ್ದಿಯಾಗಿತ್ತು.
ಇದಕ್ಕೆ ಪುಷ್ಠಿ ನೀಡುವಂತೆ ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಅವರು ತಮ್ಮ ಒಡೆತನದ 'ಸನ್ ಪಿಕ್ಚರ್ಸ್' ಬ್ಯಾನರ್‌ನ ಸಾಲು ಸಾಲು ದೊಡ್ಡ ಸಿನಿಮಾಗಳಿಗೆ ಅನಿರುದ್ಧ್ ಸಂಗೀತ ನೀಡುತ್ತಿರುವುದು ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬರುವಂತೆ ಮಾಡಿದೆ. ಅಂದಹಾಗೆ, ಕಾವ್ಯಾಗೆ ಈಗ 33 ವರ್ಷವಾದರೆ, ಅನಿಗೆ 35 ವರ್ಷ ತುಂಬಿದೆ.
ಅಖಾಡಕ್ಕಿಳಿದ್ರಾ ರಜನಿಕಾಂತ್?
ಅಸಲಿಗೆ, ಈ ಮದುವೆ ಅತೀ ಉತ್ಸಾಹದಲ್ಲಿರುವುದು ನಟ ರಜನಿಕಾಂತ್ ಅವರಂತೆ! ಹೌದು, ವರಸೆಯಲ್ಲಿ ಅನಿರುದ್ಧ್‌ಗೆ ರಜನಿಕಾಂತ್ ಸೋದರ ಮಾವನಾಗಬೇಕು! ಅತ್ತ ಕಲಾನಿಧಿ ಮಾರನ್ ಜೊತೆಗೂ ರಜನಿಗೆ ಉತ್ತಮ ಒಡನಾಟ ಇದೆ. ಹಾಗಾಗಿ, ಎರಡು ಕುಟುಂಬಗಳ ನಡುವೆ ಸಂಬಂಧ ಬೆಸೆಯುವ ಪ್ರಯತ್ನ ಮಾಡಿದ್ದಾರಂತೆ ತಲೈವಾ! ಸದ್ಯದ ಮಾಹಿತಿ ಪ್ರಕಾರ, ಎರಡೂ ಕಡೆಯ ಕುಟುಂಬದಿಂದ ಈ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಆದರೆ, ಅಧಿಕೃತ ಮಾಹಿತಿ ಮಾತ್ರ ಹೊರಬಿದ್ದಿಲ್ಲ.
ಅನಿರುದ್ಧ್ ಕಾವ್ಯಾ ಮದುವೆ ಕುರಿತ ಪೋಸ್ಟ್
The long-standing rumors are finally coming true! Anirudh Ravichander and Kavya Maran are reportedly tying the knot later this year. Sources close to both families confirm an official announcement is dropping very soon! 💍#Anirudh #KavyaMaran pic.twitter.com/d2KrbV4MUi
— Cinetrends (@Cinetrendssk) May 21, 2026
ಮದುವೆ ಬಗ್ಗೆ ಕಾಮೆಂಟ್ ಮಾಡಿದ್ದ ಅನಿ
ಈಚೆಗೆ ಅನಿರುದ್ಧ್ ಮದುವೆ ಕುರಿತು ಸಾಕಷ್ಟು ಸುದ್ದಿ ಹರಿದಾಡುತ್ತಿದ್ದರಿಂದ, ನೇರವಾಗಿ ಅವರಿಗೇ ಮಾಧ್ಯಮಗಳಿಂದ ಪ್ರಶ್ನೆ ಎದುರಾಗಿತ್ತು. "ಸಾರ್, ಬೇಗ ಮದುವೆ ಇನ್ವಿಟೇಷನ್ ಕೊಡಿ" ಎಂದು ಕೇಳಿದ್ದರು. ಅದಕ್ಕೆ ಅನಿರುದ್ಧ್ ನಗುತ್ತಾ, "ಇದು ಬೇರೆ.." ಎನ್ನುತ್ತಾ ಅಲ್ಲಿಂದ ಕಾಲ್ಕಿತ್ತಿದ್ದರು. ಅಷ್ಟೇ ಅಲ್ಲದೇ, ಕೆಲ ತಿಂಗಳ ಮದುವೆ ಬಗ್ಗೆ ಟ್ವೀಟ್ ಮಾಡಿದ್ದ ಅನಿರುದ್ಧ್, "ಮದುವೆನಾ..? ಸ್ವಲ್ಪ ವದಂತಿಗಳನ್ನು ಹರಡುವುದನ್ನೂ ನಿಲ್ಲಿಸಿ ಬಾಸ್" ಎಂದು ಬರೆದುಕೊಂಡಿದ್ದರು. ಸದ್ಯಕ್ಕೆ ಎಲ್ಲರ ಕಣ್ಣು ಈ ಜೋಡಿ ಮೇಲಿದ್ದು, ಅಧಿಕೃತ ಮಾಹಿತಿ ಏನಾದರೂ ಹೊರಬರಲಿದೆಯಾ ಎಂಬ ನಿರೀಕ್ಷೆಯಲ್ಲಿದ್ದಾರೆ.