ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Anupama Gowda: ಆ್ಯಂಕರಿಂಗ್​ಗೆ ವಿದಾಯ ಹೇಳಿದ ಅನುಪಮಾ ಗೌಡ!

Anupama Gowda: ಸತತವಾಗಿ 8 ವರ್ಷಗಳ ಕಾಲ ತಪ್ಪು ಮಾಡಿದಾಗ ತಿದ್ದಿ, ಬೆನ್ನೆಲುಬಾಗಿ ನಿಂತು ಇಂದು ನಿರೂಪಣೆಯೆಂದರೆ ಅನುಪಮಾ ಎಂದು ಇಷ್ಟಪಡುವ ಜನರಿರುವಾಗ ಇದೀಗ ನಿರೂಪಣಾ (Anchoring) ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ ಅನುಪಮಾ ಗೌಡ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅನೌನ್ಸ್‌ ಮಾಡಿದ್ದಾರೆ.

ಆ್ಯಂಕರಿಂಗ್​ಗೆ ವಿದಾಯ ಹೇಳಿದ ಅನುಪಮಾ ಗೌಡ!

ಅನುಪಮಾ ಗೌಡ -

Yashaswi Devadiga
Yashaswi Devadiga Aug 18, 2026 8:28 AM

ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ (Anupama Gowda) ಶಾಕಿಂಗ್‌ ನ್ಯೂಸ್‌ ಫ್ಯಾನ್ಸ್‌ಗೆ ಕೊಟ್ಟಿದ್ದಾರೆ. ಸತತವಾಗಿ 8 ವರ್ಷಗಳ ಕಾಲ ತಪ್ಪು ಮಾಡಿದಾಗ ತಿದ್ದಿ, ಬೆನ್ನೆಲುಬಾಗಿ ನಿಂತು ಇಂದು ನಿರೂಪಣೆಯೆಂದರೆ ಅನುಪಮಾ ಎಂದು ಇಷ್ಟಪಡುವ ಜನರಿರುವಾಗ ಇದೀಗ ನಿರೂಪಣಾ (Anchoring) ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ ಅನುಪಮಾ ಗೌಡ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅನೌನ್ಸ್‌ ಮಾಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಹೊಸ ಭರವಸೆ ಹುಟ್ಟುಹಾಕಿರುವ ನಿರೂಪಕಿ ಅನುಪಮಾ ಗೌಡ. 'ಗಿಚ್ಚಿ ಗಿಲಿಗಿಲಿ', 'ಬಾಯ್ಸ್ ವರ್ಸಸ್ ಗರ್ಲ್ಸ್', 'ಕ್ವಾಟ್ಲೆ ಕಿಚನ್' ಮುಂತಾದ ಶೋಗಳ ನಿರೂಪಣೆ ಮಾಡಿರುವ ಅನುಪಮಾ ಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ ಸಹ ಹೌದು. 2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ 'ತ್ರಯಂಬಕಂ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ ನಟಿ ಅನುಪಮಾ ಗೌಡ.

ಇದನ್ನೂ ಓದಿ: Jana Nayagan OTT: ಒಟಿಟಿಗೆ ಬರ್ತಿದೆ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್'! ಸ್ಟ್ರೀಮಿಂಗ್‌ ಯಾವಾಗಿನಿಂದ?

2016ರಲ್ಲಿಯೇ ನಿರೂಪಕಿಯಾಗಬೇಕಿದ್ದ ಅನುಪಮಾ 2 ವರ್ಷಗಳ ಸಮಯ ತೆಗೆದುಕೊಂಡು ಮೊದಲ ಬಾರಿಗೆ ವೇದಿಕೆ ಹತ್ತಿದ್ದು 2018 ಜೂ.22ರಂದು. ಅಲ್ಲಿಂದ ಪ್ರಾರಂಭವಾದ ಈ ಪ್ರಯಾಣ ಕೊನೆಗೊಂಡಿದ್ದು 2026ರ ಮೇ 05. ಇಲ್ಲಿಯವರೆಗೂ ಬರಲು ನನ್ನ ಹಿಂದೆ ನಿಂತವರು ಹಲವರು. ನನ್ನ ನಿರೂಪಣೆಯ ಜರ್ನಿಯಲ್ಲಿ ಅತ್ಯುತ್ತಮ ವ್ಯಕ್ತಿಗಳು ಪರಿಚಯವಾದ್ರು, ಅವರೆಲ್ಲರೊಂದಿಗಿನ ಸಂಬಂಧವನ್ನು ನಾನು ನನ್ನ ಜೀವನದುದ್ದಕ್ಕೂ ಇಟ್ಟುಕೊಳ್ತೀನಿ. ನಾನು ನನ್ನೊಳಗಿನ ಕಲಾವಿದೆಗೆ ತೃಪ್ತಿಪಡಿಸಬೇಕು ಅನ್ನೋದೇ ಈ ನಿರ್ಧಾರಕ್ಕೆ ಕಾರಣ . ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತೆ. ಮುಂದೆ ಬೇರೆ ಬೇರೆ ದಾರಿಗಳಿವೆ. ಮುಂದೆ ಜೀವನ ಇನ್ನೂ ಚೆನ್ನಾಗಿದೆ. ಈ ವಿದಾಯಕ್ಕೆ ಇದು ಸರಿಯಾದ ಸಮಯ ಎಂದಿದ್ದಾರೆ.



ಮಜಾ ಭಾರತ್​’, ‘ಕನ್ನಡ ಕೋಗಿಲೆ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್​ಸ್ಟಾರ್ಸ್’, ‘ಸುವರ್ಣ ಜ್ಯಾಕ್​ಪಾಟ್’, ‘ಗರ್ಲ್ಸ್ vs ಬಾಯ್ಸ್’, ‘ಕ್ವಾಟ್ಲೆ ಕಿಚನ್’ ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಕೊನೆಯ ಶೋ ಅನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಕ್ಕಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ.

ಇದನ್ನೂ ಓದಿ: Anupama Parameswaran: ಅನುಪಮಾ ಪರಮೇಶ್ವರನ್ ಹೇಳಿಕೆಗೆ ಧ್ರುವ ವಿಕ್ರಮ್ ಖಡಕ್‌ ರಿಪ್ಲೈ

2003ರಲ್ಲಿ ರಿಲೀಸ್ ಆದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅನುಪಮಾ ಗಮನ ಸೆಳೆದರು. ಆ ಬಳಿಕ 2014ರಲ್ಲಿ ರಿಲೀಸ್ ಆದ ‘ಅಕ್ಕ’ ಧಾರಾವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಈ ಧಾರಾವಾಹಿಯಲ್ಲಿ ಅವರು ದ್ವಿಪಾತ್ರದಲ್ಲಿ ಮಿಂಚಿದ್ದರು. ಇದು ಅವರಿಗೆ ದೊಡ್ಡ ಸವಾಲಾಗಿತ್ತು. 2017-18ರಲ್ಲಿ ಬಿಗ್ ಬಾಸ್​ನಲ್ಲಿ ಸ್ಪರ್ಧೆ ಮಾಡಿದರು.