ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Darshan Case: ದರ್ಶನ್‌ಗೆ ಇಂದು ರಿಯಲ್ ಚಾಲೆಂಜ್! ಕೋರ್ಟ್‌ನಲ್ಲಿ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲಿರುವ ಪ್ರದೋಷ್

Darshan Case: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅತ್ಯಂತ ಮಹತ್ವದ ಕಾನೂನು ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯಲಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಷ್‌ ಹೇಳಿಕೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲಾಗುತ್ತಿದ್ದು, ಪ್ರಕರಣಕ್ಕೆ ಬಲವಾದ ತಿರುವು ಸಿಗುವ ಸಾಧ್ಯತೆಯಿದೆ. ಇಂದು ಬೆಳಗ್ಗೆ 11 ಗಂಟೆಗೆ ಕೋರ್ಟ್ ಹಾಜರಾಗಲಿದ್ದು, 59 ನೇ ಸಿಸಿಎಚ್ ಕೋರ್ಟ್ ನಲ್ಲಿ ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ.ಇಂದು ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆ ನೀಡಿದರೆ ಡಿ ಗ್ಯಾಂಗ್ ಗೆ ಅಸಲಿ ಸಂಕಷ್ಟ ಶುರುವಾಗೋದು ಗ್ಯಾರಂಟಿಯಾಗಿದೆ.

ದರ್ಶನ್‌ಗೆ ಇಂದು ರಿಯಲ್ ಚಾಲೆಂಜ್! ಕೋರ್ಟ್​ಗೆ ಪ್ರದೋಷ್

ನಟ ದರ್ಶನ್‌ -

Yashaswi Devadiga
Yashaswi Devadiga Sep 28, 2026 9:50 AM

ರೇಣುಕಾಸ್ವಾಮಿ ಪ್ರಕರಣಕ್ಕೆ (Renukaswamy case) ಸಂಬಂಧಪಟ್ಟಂತೆ ಅತ್ಯಂತ ಮಹತ್ವದ ಕಾನೂನು ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯಲಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಷ್‌ ಹೇಳಿಕೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲಾಗುತ್ತಿದ್ದು, ಪ್ರಕರಣಕ್ಕೆ ಬಲವಾದ ತಿರುವು ಸಿಗುವ ಸಾಧ್ಯತೆಯಿದೆ. ಇಂದು ಬೆಳಗ್ಗೆ 11 ಗಂಟೆಗೆ ಕೋರ್ಟ್ ಹಾಜರಾಗಲಿದ್ದು, 59 ನೇ ಸಿಸಿಎಚ್ ಕೋರ್ಟ್ ನಲ್ಲಿ ಮಾಫಿ ಸಾಕ್ಷಿ (Aprover) ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ.ಇಂದು ಪ್ರದೂಷ್ (Pradhoosh) ಮಾಫಿ ಸಾಕ್ಷಿ ಹೇಳಿಕೆ ನೀಡಿದರೆ ಡಿ ಗ್ಯಾಂಗ್ ಗೆ ಅಸಲಿ ಸಂಕಷ್ಟ ಶುರುವಾಗೋದು ಗ್ಯಾರಂಟಿಯಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪ್ರದೋಷ್​ ಕೋರ್ಟ್ ಗೆ ಬರಲಿದ್ದು ಜೈಲಾಧಿಕಾರಿಗಳ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾನೆ. ಬಳಿಕ ಇಡೀ ಕೇಸ್ ಏನಾಯ್ತು ಅಂತ ಹೇಳಿಕೆ ನೀಡಬೇಕು. ಬಹುತೇಕ ಅರ್ಜಿಯ ಅಂಶಗಳನ್ನು ಜಡ್ಹ್ ಮುಂದೆ ವಿವರಣೆ ನೀಡಲಿದ್ದು, ಬಳಿಕ ಕೋರ್ಟ್ ಅಧಿಕೃತವಾಗಿ ಹೇಳಿಕೆ ದಾಖಲಿಸಲಿದೆ.

ಇದನ್ನೂ ಓದಿ: Bigg Boss Kannada 13: ಬಿಗ್‌ ಬಾಸ್‌ ಆಟ ಅವಿನಾಶ್‌ಗೆ ಅರ್ಥ ಆಗಿಲ್ಲ! ಪತ್ನಿ ಪ್ರಿಯಾ ಕಣ್ಣೀರು

ಈಗಾಗಲೇ ಲಿಖಿತ ರೂಪದಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ನೀಡಿದ್ದಾನೆ ಪ್ರದೂಷ್‌. ಇದು ದರ್ಶನ್ ಹಾಗೂ ಪವಿತ್ರಾ ಗೌಡಗೆ ಕಾನೂನುಬದ್ಧವಾಗಿ ದೊಡ್ಡ ಆತಂಕ ತಂದೊಡ್ಡಿದೆ.ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 16 ಆರೋಪಿಗಳ ಪರ ವಕೀಲರು ಪ್ರದೂಷ್‌ನನ್ನು ಸುದೀರ್ಘ ಕ್ರಾಸ್ ಎಕ್ಸಾಮಿನೇಷನ್‌ಗೆ ಒಳಪಡಿಸಲಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಸಮಯಾವಕಾಶ ಬೇಕಾಗಿದ್ದು, ಅಲ್ಲಿಯವರೆಗೆ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ.

ಇದನ್ನೂ ಓದಿ: Bigg Boss Kannada 13: Hijack ಮಾಡಿದ ಗಾನವಿ; ಯಶಸ್ ಹಾಗೂ ಕಿರಣ್ ಮರಳಿ ಫ್ಲೈಟ್‌ಗೆ!

16 ಮಂದಿ ವಕೀಲರ ಕಠಿಣ ಪ್ರಶ್ನೆಗಳನ್ನು ಎದುರಿಸುವುದು ಪ್ರದೂಷ್ ಮುಂದಿರುವ ಭಾರಿ ಸವಾಲಾಗಿದೆ. ಕೊಲೆಯಲ್ಲಿ ಪ್ರತಿಯೊಬ್ಬ ಆರೋಪಿಯ ಪಾತ್ರವೇನು ಎಂಬುದನ್ನು ಪ್ರದೂಷ್ ಸಾಕ್ಷಿ ನುಡಿಯಲಿದ್ದು, ಇದು ಪ್ರಕರಣಕ್ಕೆ ಬಲವಾದ ತಿರುವು ನೀಡುವ ಸಾಧ್ಯತೆಯಿದೆ.