ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nandagokula Serial: 300 ಸಂಚಿಕೆ ಪೂರೈಸಿದ ‘ನಂದಗೋಕುಲ’; ನಿರ್ದೇಶಕನ ಪೋಸ್ಟ್‌ಗೆ ವೀಕ್ಷಕರ ಮೆಚ್ಚುಗೆ

Nandagokula Serial: ‘ನಂದಗೋಕುಲ’ ಧಾರಾವಾಹಿ ಇದೀಗ 300 ಸಂಚಿಕೆ ಪೂರೈಸಿದ್ದು, ಧಾರಾವಾಹಿ ತಂಡ ಈ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ. ನಂದಗೋಕುಲ ಸೀರಿಯಲ್ ಅಲ್ಲಿ ಹೊಸ ಕಲಾವಿದರು ಮತ್ತು ಹಳೆ ಕಲಾವಿದರು ಹೀಗೆ ಎಲ್ಲರೂ ಇದ್ದಾರೆ. ಇವರ ಈ ಒಂದು ನಂದಗೋಕುಲ ನೋಡುಗರಿಗೆ ಸ್ಪೂರ್ತಿ ಆಗೋ ರೀತಿನೂ ಇದೆ. ಲವ್ ಮಾಡಿ ಮದುವೆ ಆದ್ರೆ ಏನೆಲ್ಲ ಆಗುತ್ತದೆ ಅನ್ನೋ ಸತ್ಯವನ್ನ ಇಲ್ಲಿ ಧಾರವಾಹಿ ರೂಪದಲ್ಲಿಯೇ ಹೇಳುತ್ತಿದ್ದಾರೆ ಅನಿಸುತ್ತದೆ. ಇದೀಗ ಧಾರಾವಾಹಿ ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ.

300 ಸಂಚಿಕೆ ಪೂರೈಸಿದ ನಂದಗೋಕುಲ; ನಿರ್ದೇಶಕನ ಪೋಸ್ಟ್‌ಗೆ ವೀಕ್ಷಕರ ಮೆಚ್ಚುಗೆ

ನಂದಗೋಕುಲ ಧಾರಾವಾಹಿ -

Yashaswi Devadiga
Yashaswi Devadiga Jul 24, 2026 7:47 PM

ಕಲರ್ಸ್ ಕನ್ನಡ ವಾಹಿನಿಯ (Colors Kannada) ಜನಪ್ರಿಯ ‘ನಂದಗೋಕುಲ’ (Nandagokula Serial) ಧಾರಾವಾಹಿ ಇದೀಗ 300 ಸಂಚಿಕೆ ಪೂರೈಸಿದ್ದು, ಧಾರಾವಾಹಿ ತಂಡ ಈ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ. ನಂದಗೋಕುಲ ಸೀರಿಯಲ್ ಅಲ್ಲಿ ಹೊಸ ಕಲಾವಿದರು ಮತ್ತು ಹಳೆ ಕಲಾವಿದರು ಹೀಗೆ ಎಲ್ಲರೂ ಇದ್ದಾರೆ. ಇವರ ಈ ಒಂದು ನಂದಗೋಕುಲ ನೋಡುಗರಿಗೆ ಸ್ಪೂರ್ತಿ ಆಗೋ ರೀತಿನೂ ಇದೆ. ಲವ್ ಮಾಡಿ ಮದುವೆ ಆದ್ರೆ ಏನೆಲ್ಲ ಆಗುತ್ತದೆ ಅನ್ನೋ ಸತ್ಯವನ್ನ ಇಲ್ಲಿ ಧಾರವಾಹಿ ರೂಪದಲ್ಲಿಯೇ ಹೇಳುತ್ತಿದ್ದಾರೆ ಅನಿಸುತ್ತದೆ. ಇದೀಗ ಧಾರಾವಾಹಿ 300 (Serial) ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ.

ಋಣದ ಭಾರ ನನ್ನ ಮೇಲಿದೆ ದೇವರೇ

ಈ ಸಂಭ್ರಮದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿರ್ದೇಶಕರಾದ ಶ್ರವಂತ್, ಪತ್ನಿಯ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು ‘ನಂದಗೋಕುಲ’ ನನ್ನ ಜೀವನದ ಬಹು ದೊಡ್ಡ ಪಾತ್ರ ವಹಿಸಿದ ಧಾರವಾಹಿ. ಇದರ ಕಥೆಯನ್ನು ಮೊದಲು ಆಲಿಸಿ ಇದು ಯಶಸ್ಸು ಖಂಡಿತಾ ಕಾಣುತ್ತದೆ ಅಂತ ಮೊದಲ ಭರವಸೆ ಕೊಟ್ಟವಳು ನನ್ನ ಪತ್ನಿ ರಾಧಿಕಾ ಶ್ರವಂತ್. ಅಂದಿನಿಂದ ಇಲ್ಲಿಯವರೆಗೂ ಪ್ರತಿ ಹೆಜ್ಜೆಯಲ್ಲೂ ನನ್ನ ಕಷ್ಟಗಳನ್ನು ತನ್ನ ಕಷ್ಟ ಅಂದುಕೊಂಡಳು.

ಇದನ್ನೂ ಓದಿ: Ramayana trailer: ಕೊನೆಯ ಕ್ಷಣದಲ್ಲಿ ರಾಮಾಯಣ ಟ್ರೇಲರ್ ರಿಲೀಸ್ ರದ್ದು; ಕಾರಣ ಇದು

ನನ್ನ ಗೆಲುವು ನನ್ನದು ಮಾತ್ರ ಅಲ್ಲ. ಅದು ನಿನ್ನದು ಕೂಡ. ಇಂದು ಜನರೆಲ್ಲಾರೂ ನೋಡಿ ಮೆಚ್ಚುತ್ತಿರುವ ಪಾತ್ರಗಳನ್ನ ಆಯ್ಕೆ ಮಾಡಿ ನಂದಗೋಕುಲದ ಕಥೆಯನ್ನು ಮತ್ತಷ್ಟು ಯಶಸ್ವೀ ಮಾಡಿದ ನನ್ನ ಪತ್ನಿ, ಸ್ನೇಹಿತೆ, ಹಿತೈಷಿಯಾದ ರಾಧಿಕಾ ಶ್ರವಂತ್ I Love You ನಿನ್ನ ಋಣದ ಭಾರ ನನ್ನ ಮೇಲಿದೆ ದೇವರೇ’ ಎಂದು ಬರೆದುಕೊಂಡಿದ್ದಾರೆ.

ನಂದಗೋಕುಲ ಸೀರಿಯಲ್ ಅಲ್ಲಿ ಅರವಿಂದ್ ರಾವ್ ಅಪ್ಪನ ಪಾತ್ರ ಮಾಡಿದ್ದಾರೆ. ಅದೇ ನಂದಕುಮಾರ್ ಹೆಸರಿನ ಮುಖ್ಯ ಪಾತ್ರವನ್ನ ಮಾಡಿದ್ದಾರೆ. ಅಮೃತಾ ನಾಯ್ಡು, ನಟ ರವಿ ಚೇತನ್, ಅಭಿಷೇಕ್ ದಾಸ್, ರಘು ಮಂಡ್ಯ ಸೇರಿದಂತೆ ಇನ್ನೂ ಅನೇಕ ಕಲಾವಿದರು ಈ ಸೀರಿಯಲ್ ಅಲ್ಲಿ ಅಭಿನಯಿಸಿದ್ದಾರೆ.

ಇನ್ನು 'ನಂದಗೋಕುಲ' ಧಾರಾವಾಹಿಯನ್ನು ಜಾಹ್ನವಿ ಫಿಲ್ಮ್ ಎಂಪೈರ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ. ನಿರ್ದೇಶಕ ಶ್ರವಂತ್ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Thalapathy Vijay: 'ಜನ ನಾಯಗನ್' ತಂಡದ ವಿರುದ್ಧ ಕಣ್ಣೀರಿಟ್ಟ ಖ್ಯಾತ ನಟಿ! ವಿಡಿಯೋ ವೈರಲ್‌

ಈ ಧಾರಾವಾಹಿಯೂ ಅದಾಗಲೇ ಪರಭಾಷೆಗಳಲ್ಲಿ ಪ್ರಸಾರವಾಗಿದ್ದು, ತೆಲುಗಿನಲ್ಲಿ 'ಇಲ್ಲು ಇಲ್ಲಾಲು ಪಿಲ್ಲಲು' ಎಂದು ಇತ್ತೀಚೆಗಷ್ಟೇ ಪ್ರಸಾರ ಶುರು ಮಾಡಿದೆ. ಅಲ್ಲದೇ ತಮಿಳಿನ ಸ್ಟಾರ್ ವಿಜಯ್ ವಾಹಿನಿಯಲ್ಲಿ 'ಪಾಂಡಿಯನ್ ಸ್ಟೋರ್ಸ್-2' ಎಂದು ಪ್ರಸಾರವಾಗಿದ್ದು, ಇದು ಹಿಟ್ ಧಾರಾವಾಹಿ ಎನ್ನಲಾಗಿದೆ.