ʻನಿನ್ನ ಬಹುನಿರೀಕ್ಷಿತ ಟಾಕ್ಸಿಕ್...ʼ; ಮಗ ಯಶ್ ನಟಿಸಿರುವ ಸಿನಿಮಾಗೆ ತಾಯಿ ಪುಷ್ಪಾ ವಿಶ್ ಮಾಡಿದ್ದು ಹೀಗೆ!
ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' ವಿಶ್ವಾದ್ಯಂತ ತೆರೆಕಂಡು ಭರ್ಜರಿ ಸದ್ದು ಮಾಡುತ್ತಿದೆ. ಈ ಮಧ್ಯೆ ಯಶ್ ಅವರ ತಾಯಿ ಹಾಗೂ 'ಕೊತ್ತಲವಾಡಿ' ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವುಕ ಪೋಸ್ಟ್ ಗಮನಸೆಳೆದಿದೆ.
-
'ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' ವಿಶ್ವಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಶುಭ ಸಂದರ್ಭದಲ್ಲಿ, ನಟ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು ಮಗನ ಸಾಧನೆಯನ್ನು ಹೆಮ್ಮೆಯಿಂದ ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿರುವ ಭಾವುಕ ಸಾಲುಗಳು ಹಾಗೂ ವಿಶೇಷ ಫೋಟೋ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಭಾರೀ ಸದ್ದು ಮಾಡುತ್ತಿದೆ.
ಯಶಸ್ಸಿನ ಉತ್ತುಂಗವನ್ನು ತಂದುಕೊಡಲಿ
ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಯಶ್ ಅವರೊಂದಿಗಿನ ಸುಂದರ ಫೋಟೋವನ್ನು ಹಂಚಿಕೊಂಡಿರುವ ಪುಷ್ಪಾ ಅರುಣ್‌ಕುಮಾರ್, ಮಗನ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ನಿನ್ನ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ನಿನ್ನ ಕಠಿಣ ಪರಿಶ್ರಮ, ದೊಡ್ಡ ಕನಸು ಮತ್ತು ಸಿನಿಮಾಗಾಗಿ ತೋರುವ ಸಮರ್ಪಣಾ ಮನೋಭಾವ ಸದಾ ನಿನಗೆ ಯಶಸ್ಸಿನ ಉತ್ತುಂಗವನ್ನು ತಂದುಕೊಡಲಿ" ಎಂದು ಆಶೀರ್ವದಿಸಿದ್ದಾರೆ.
Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್
'ಕೊತ್ತಲವಾಡಿ' ನಿರ್ಮಾಪಕಿ
ತಾಯಿಯ ಈ ಪ್ರೀತಿಪೂರ್ಣ ಸಂದೇಶಕ್ಕೆ ರಾಕಿ ಭಾಯ್ ಅಭಿಮಾನಿಗಳು ಫಿದಾ ಆಗಿದ್ದು, ಕಮೆಂಟ್ ಬಾಕ್ಸ್‌ನಲ್ಲಿ ಯಶ್ ಮತ್ತು ಅವರ ತಾಯಿಗೆ ಪ್ರೀತಿ ಹಾಗೂ ಶುಭಹಾರೈಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಅಂದಹಾಗೆ, ಪುಷ್ಪಾ ಅವರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಕಳೆದ ವರ್ಷ ಅವರ ನಿರ್ಮಾಣದ 'ಕೊತ್ತಲವಾಡಿ' ಚಿತ್ರ ತೆರೆಕಂಡು ಪ್ರಶಂಸೆ ಪಡೆದಿತ್ತು.
Toxic Review: ಮಗರಾಯನ ಜೊತೆ ʻರಾಯʼನ ಮಾನಸಿಕ ಸಮರ; 'ಟಾಕ್ಸಿಕ್'ನಲ್ಲಿ ಆದಿಯಿಂದ ಅಂತ್ಯದವರೆಗೂ ಎಲ್ಲವೂ ಅಬ್ಬರ!
ʻಟಾಕ್ಸಿಕ್ʼ ಸಿನಿಮಾದ ಬಗ್ಗೆ..
ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಸಾರಥ್ಯದಲ್ಲಿ ಮೂಡಿಬಂದಿರುವ ‘ಟಾಕ್ಸಿಕ್’ ಚಿತ್ರವನ್ನು ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಅತ್ಯಂತ ಅದ್ದೂರಿಯಾಗಿ ನಿರ್ಮಿಸಿದೆ. ಯಶ್ ಅವರ ಜೊತೆಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ಹುಮಾ ಖುರೇಶಿ, ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು ಕನ್ನಡದ ರುಕ್ಮಿಣಿ ವಸಂತ್ ಸೇರಿದಂತೆ ಬಹುತಾರಾಗಣವೇ ಈ ಚಿತ್ರದಲ್ಲಿದೆ.
ʻಟಾಕ್ಸಿಕ್ʼ ಸಿನಿಮಾದ ಬಗ್ಗೆ ಪುಷ್ಪಾ ವಿಶ್
ರಾಜೀವ್ ರವಿ ಅವರ ಅದ್ಭುತ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಅವರ ಅಬ್ಬರದ ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಸಿನಿಮಾ ಪ್ರೇಕ್ಷಕರನ್ನು ಕಣ್ಮನ ಸೆಳೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.