ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sai Pallavi: ಹೊಸ ಸಿನಿಮಾಗಾಗಿ ಉದ್ದನೆಯ ಕೂದಲಿಗೆ ಕತ್ತರಿ ಹಾಕಿದ ಸಾಯಿ ಪಲ್ಲವಿ!

Sai Pallavi: ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಯಾವುದೇ ಪಾತ್ರವಾದರೂ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ನಟಿ ಇದೀಗ ಮತ್ತೊಂದು ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ರಾಮಾಯಣ’ ಸಿನಿಮಾದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲಿರುವ ಸಾಯಿ ಪಲ್ಲವಿ, ಇದೀಗ ‘ಓಂ: ಚಾಪ್ಟರ್ 1 – ಉಧಿರಂ: ದಿ ಬ್ಲಡ್ ವುಡ್’ ಸಿನಿಮಾದಲ್ಲಿ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹೊಸ ಸಿನಿಮಾಗಾಗಿ ಉದ್ದನೆಯ ಕೂದಲಿಗೆ ಕತ್ತರಿ ಹಾಕಿದ ಸಾಯಿ ಪಲ್ಲವಿ!

ಸಾಯಿ ಪಲ್ಲವಿ -

Yashaswi Devadiga
Yashaswi Devadiga Nov 16, 2026 9:42 AM

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಯಾವುದೇ ಪಾತ್ರವಾದರೂ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ನಟಿ ಇದೀಗ ಮತ್ತೊಂದು ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ರಾಮಾಯಣ’ (Ramayana Movie) ಸಿನಿಮಾದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲಿರುವ ಸಾಯಿ ಪಲ್ಲವಿ, ಇದೀಗ ‘ಓಂ: ಚಾಪ್ಟರ್ 1 – ಉಧಿರಂ: ದಿ ಬ್ಲಡ್ ವುಡ್’ ಸಿನಿಮಾದಲ್ಲಿ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಸಾಯಿ ಪಲ್ಲವಿ ಸಿಬಿಐ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದು, ಅಕ್ರಮ ಕೆಂಪು ಶ್ರೀಗಂಧದ ಮರಗಳ ಕಳ್ಳಸಾಗಣೆ ಜಾಲದ ತನಿಖೆ ನಡೆಸುವ ಜವಾಬ್ದಾರಿ ಅವರ ಮೇಲಿದೆ. ಈ ಪಾತ್ರಕ್ಕಾಗಿ ನಟಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಆದರೆ ಸಾಯಿ ಪಲ್ಲವಿಯ ಈ ಹೊಸ ಲುಕ್ ಕಂಡು ಅವರ ತಂದೆ-ತಾಯಿಯೇ ಅಚ್ಚರಿಗೊಂಡಿದ್ದರಂತೆ!

ಕೂದಲು ಕತ್ತರಿಸಿಕೊಂಡಿದ್ದೇಕೆ ಸಾಯಿ ಪಲ್ಲವಿ?

ಸಂದರ್ಶನವೊಂದರಲ್ಲಿ ತಮ್ಮ ಹೊಸ ಲುಕ್ ಹಾಗೂ ಕೂದಲು ಕತ್ತರಿಸಿಕೊಂಡ ಹಿಂದಿನ ಕಾರಣವನ್ನು ಸಾಯಿ ಪಲ್ಲವಿ ಬಹಿರಂಗಪಡಿಸಿದ್ದಾರೆ.

“ನಾನು ಈ ಪಾತ್ರಕ್ಕಾಗಿ ಕೂದಲು ಕತ್ತರಿಸಿಕೊಂಡೆ. ಕಥೆಯನ್ನು ಕೇಳಿದ ಬಳಿಕ ನನ್ನ ಪಾತ್ರವನ್ನು ಹೇಗೆ ತೋರಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡೆ. ಪಾತ್ರಕ್ಕೆ ಹೊಂದಿಕೆಯಾಗುವಂತೆ ನನ್ನನ್ನೇ ಬದಲಾಯಿಸಿಕೊಂಡೆ. ಕಥೆ ನನಗೆ ಅಷ್ಟೊಂದು ಇಷ್ಟವಾಗಿತ್ತು. ಹಾಗಾಗಿ ಈ ಪಾತ್ರಕ್ಕಾಗಿ ಕೂದಲು ಕತ್ತರಿಸಿಕೊಳ್ಳಲು ನಾನು ಸಿದ್ಧಳಾಗಿದ್ದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ಹೇಳಿದ್ದೇನು? ಮಾಡಿದ್ದೇನು?ಮಂಜುಗೆ ಕಿಚ್ಚನ ಖಡಕ್ ಕ್ಲಾಸ್

ಅಲ್ಲದೆ, ಕೂದಲು ಕತ್ತರಿಸಿಕೊಂಡ ಬಳಿಕ ಮೊದಲು ತಮ್ಮ ಹೊಸ ಲುಕ್ ಅನ್ನು ವಿಡಿಯೋ ಕಾಲ್ ಮೂಲಕ ತಾಯಿಗೆ ತೋರಿಸಿದ್ದರಂತೆ. ಸಾಯಿ ಪಲ್ಲವಿಯ ಹೊಸ ಅವತಾರ ಕಂಡ ತಾಯಿ ಅಚ್ಚರಿಗೊಂಡು, ಯಾಕೆ ಹೀಗೆ ಕೂದಲು ಕತ್ತರಿಸಿಕೊಂಡೆ ಎಂದು ಸರಣಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದರಂತೆ. ಕೊನೆಗೆ ಕರೆ ಕೂಡ ಕಟ್ ಮಾಡಿದ್ದರಂತೆ!

ಇನ್ನು ತಂದೆಯೂ ಕರೆ ಮಾಡಿ, “ನೀನು ವಿಗ್ ಹಾಕಿಕೊಂಡಿದ್ದೀಯಾ?” ಎಂದು ಪ್ರಶ್ನಿಸಿದ್ದರಂತೆ. ಆಗ ಸಾಯಿ ಪಲ್ಲವಿ ಇದು ಸಿನಿಮಾದ ಪಾತ್ರಕ್ಕಾಗಿ ಮಾಡಿಕೊಂಡಿರುವ ಬದಲಾವಣೆ ಎಂದು ವಿವರಿಸಿದ್ದಾರೆ. ಆದರೂ ಹೊಸ ಹೇರ್‌ಸ್ಟೈಲ್‌ಗೆ ಹೊಂದಿಕೊಳ್ಳಲು ತಂದೆ-ತಾಯಿಗೆ ಸ್ವಲ್ಪ ಸಮಯ ಬೇಕಾಯಿತು ಎಂದು ನಟಿ ಹೇಳಿದ್ದಾರೆ.

ಸಿನಿಮಾದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ ಕೂಡ ಸಾಯಿ ಪಲ್ಲವಿಯ ಈ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ.

“ಈ ನಿರ್ದಿಷ್ಟ ಪಾತ್ರಕ್ಕೆ ಇಂತಹ ಲುಕ್ ಅಗತ್ಯವಾಗಿತ್ತು. ಸಿನಿಮಾದಲ್ಲಿ ನಾಯಕನ ಪಾತ್ರಕ್ಕೆ ಹೊಂದುವಂತೆ ಕೆಲವು ಬದಲಾವಣೆಗಳನ್ನು ಮಾಡುತ್ತೇವೆ. ಅದೇ ರೀತಿ ಸಾಯಿ ಪಲ್ಲವಿ ಕೂಡ ಈ ಪಾತ್ರಕ್ಕಾಗಿ ಕೂದಲು ಕತ್ತರಿಸಿಕೊಳ್ಳುವ ತ್ಯಾಗ ಮಾಡಿದ್ದಾರೆ. ಕಥೆಯ ಮೇಲಿನ ಅವರ ಪ್ರೀತಿಯೇ ಈ ಬದಲಾವಣೆಗೆ ಕಾರಣವಾಯಿತು” ಎಂದು ನಿರ್ದೇಶಕರು ಹೇಳಿದ್ದಾರೆ.

ಸಾಯಿ ಪಲ್ಲವಿ ಕೂಡ ನಿರ್ದೇಶಕ ರಾಜ್‌ಕುಮಾರ್ ಹಾಗೂ ಕಥೆಯ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಪಾತ್ರಕ್ಕೆ ಈ ರೀತಿಯ ಹೇರ್‌ಸ್ಟೈಲ್ ಅಗತ್ಯವಿದೆ ಎಂಬುದು ಅವರಿಗೆ ಅರ್ಥವಾಗಿತ್ತು. ಹೀಗಾಗಿ ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡಿದ್ದರಂತೆ.

ಅಷ್ಟೇ ಅಲ್ಲದೆ, ಚಿತ್ರೀಕರಣದ ಸಮಯದಲ್ಲಿ ತಮ್ಮ ಹೊಸ ಲುಕ್ ಸಿನಿಮಾದ ಬಿಡುಗಡೆಗೂ ಮುನ್ನ ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಸಾಯಿ ಪಲ್ಲವಿ ಸ್ಕಾರ್ಫ್ ಧರಿಸುತ್ತಿದ್ದರಂತೆ. ತಮ್ಮ ಪಾತ್ರದ ಲುಕ್ ಸೋರಿಕೆಯಾಗದಂತೆ ಚಿತ್ರತಂಡ ವಿಶೇಷ ಎಚ್ಚರಿಕೆ ವಹಿಸಿತ್ತು.

ಮತ್ತೆ ಒಂದಾದ ‘ಅಮರನ್’ ಸಿನಿಮಾದ ಜೋಡಿ!

ಸಾಯಿ ಪಲ್ಲವಿ ಈ ಹಿಂದೆ ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನದ ಚೊಚ್ಚಲ ಸಿನಿಮಾ ‘ಅಮರನ್’ನಲ್ಲಿ ನಟಿಸಿದ್ದರು. ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿದ್ದ ಈ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಈ ಚಿತ್ರದ ಮೂಲಕ ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಇವರಿಬ್ಬರು ‘ಓಂ’ ಸಿನಿಮಾಗಾಗಿ ಒಂದಾಗಿದ್ದಾರೆ.

ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನದ ‘ಓಂ: ಚಾಪ್ಟರ್ 1 – ಉಧಿರಂ: ದಿ ಬ್ಲಡ್ ವುಡ್’ ಸಿನಿಮಾದಲ್ಲಿ ಧನುಷ್ ಮರ ಕಡಿಯುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಮ್ಮುಟ್ಟಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.ಈ ಚಿತ್ರದಲ್ಲಿ ಶ್ರೀಲೀಲಾ ಮತ್ತು ಸಂಜಯ್ ಸ್ವರೂಪ್ ಕೂಡ ಅಭಿನಯಿಸಿದ್ದಾರೆ. ಖ್ಯಾತ ನಟ ನಾಸಿರುದ್ದೀನ್ ಶಾ ಕೂಡ ಸಿನಿಮಾದ ಭಾಗವಾಗಿದ್ದು, ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಧನುಷ್ ತಮ್ಮದೇ ಒಡೆತನದ ವಂಡರ್‌ಬಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಶ್ರದ್ಧಾ ಅಗರ್ವಾಲ್ ಮತ್ತು ಅಜ್ಮತ್ ಜಗ್ಮಗ್ ಅವರೊಂದಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆರ್‌ಟೇಕ್ ಸ್ಟುಡಿಯೋಸ್ ಕೂಡ ಈ ಯೋಜನೆಗೆ ಬೆಂಬಲ ನೀಡಿದೆ.

ಇದನ್ನೂ ಓದಿ: Bigg Boss Kannada 13: ಯುವರಾಣಿ ಪಟ್ಟದಿಂದ ಸೌಂದರ್ಯಗೆ ಗೇಟ್‌ಪಾಸ್‌!

ಸಾಯಿ ಅಭ್ಯಂಕರ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಎಳಿಲ್ ಅರಸು ಕೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಆರ್. ಕಲೈವಣ್ಣನ್ ಸಂಕಲನ ಮಾಡುತ್ತಿದ್ದಾರೆ. ಯಾನಿಕ್ ಬೆನ್ ಮತ್ತು ಕೆಚಾ ಖಂಪಕ್ಡೀ ಸಾಹಸ ದೃಶ್ಯಗಳನ್ನು ನಿರ್ದೇಶಿಸುತ್ತಿದ್ದಾರೆ.