ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anushree: ಬದಲಾಗದ ಅನುಶ್ರೀ: ನಿರೂಪಕಿಯ ನಡೆಗೆ ಅಭಿಮಾನಿಗಳ ಮೆಚ್ಚುಗೆ

ಅನುಶ್ರೀ ಮತ್ತೆ ಕಿರುತೆರೆಗೆ ಮರಳುವಾಗ ಅವರು ಸಂಪ್ರದಾಯ ಮುರಿಯಲಿಲ್ಲ ಅನ್ನೋದು ವಿಶೇಷ. ಕಳೆದ ವಾರದಂತೆ ಈ ಬಾರಿ ಕೂಡ ಅನುಶ್ರೀ ಸೂಪರ್ ಆಗಿರೋ ಸಲ್ವಾರ್ ಜೊತೆ ತಾಳಿ ತೆಗೆಯದೆ ಲಕ್ಷಣವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಅನುಶ್ರೀ ಅವರ ಈ ಲುಕ್ ಅಭಿಮಾನಿಗಳ ಮನಗೆದ್ದಿದೆ.

ಬದಲಾಗದ ಅನುಶ್ರೀ: ನಿರೂಪಕಿಯ ನಡೆಗೆ ಅಭಿಮಾನಿಗಳ ಮೆಚ್ಚುಗೆ

Anushree -

Profile Vinay Bhat Sep 22, 2025 7:34 AM

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anchor Anushree) ಅವರ ವಿವಾಹ ಆಗಸ್ಟ್‌ 28ರಂದು ಬೆಂಗಳೂರಿನ ಹೊರವಲಯದಲ್ಲಿ ನೆರವೇರಿತು. ರೋಷನ್ ಜೊತೆ ಅನುಶ್ರೀ ಸಪ್ತಪದಿ ತುಳಿದಿದ್ದು, ಈ ಅದ್ಧೂರಿ ಸಮಾರಂಭಕ್ಕೆ ಸ್ಯಾಂಡಲ್‌ವುಡ್‌ ತಾರೆಯರು ಆಗಮಿಸಿ ಶುಭ ಹಾರೈಸಿದರು. ಇವರಿಬ್ಬರದ್ದು ಲವ್ ಕಮ್‌ ಆರೆಂಜ್‌ ಮ್ಯಾರೇಜ್. ನಮ್ಮದು ಸರಳ ವಿವಾಹ ಎಂದು ಅನುಶ್ರೀ ಹೇಳಿಕೊಂಡಿದ್ದರೂ ಅದ್ಧೂರಿಯಂತೆ ಕಂಡುಬಂದಿತ್ತು. ಮದುವೆ ಬಳಿಕ ಅನುಶ್ರೀ ಹನಿಮೂನ್ ಎಂದು ಟೈಮ್ ವೇಸ್ಟ್ ಮಾಡದೆ ಮತ್ತೆ ತಮ್ಮ ನಿರೂಪಣೆ ಕೆಲಸಕ್ಕೆ ಹಾಜರಾಗಿದ್ದಾರೆ.

ಅನುಶ್ರೀ ಅವರು ಪ್ರಮೋಷನ್ಸ್‌, ಬೇರೆ ಬೇರೆ ಈವೆಂಟ್ಸ್‌ ಸೇರಿದಂತೆ ಮಹಾನಟಿ ಸೀಸನ್‌ 2 ರಿಯಾಲಿಟಿ ಶೋಗೂ ಮರಳಿದ್ದಾರೆ. ಅನುಶ್ರೀ ಮತ್ತೆ ಕಿರುತೆರೆಗೆ ಮರಳುವಾಗ ಅವರು ಸಂಪ್ರದಾಯ ಮುರಿಯಲಿಲ್ಲ ಅನ್ನೋದು ವಿಶೇಷ. ಅನುಶ್ರೀ ಕಳೆದ ವಾರ ಸಿಲ್ಕ್ ಸೀರೆ ಧರಿಸಿ ಬಂದಿದ್ದರು. ಆಗ ನೆಕ್ಲೇಸ್ ಜೊತೆ ಕರಿಮಣಿ ಧರಿಸಿದ್ದರು. ಈ ಬಾರಿ ಕೂಡ ಸೂಪರ್ ಆಗಿರೋ ಸಲ್ವಾರ್ ಜೊತೆ ತಾಳಿ ತೆಗೆಯದೆ ಲಕ್ಷಣವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಅನುಶ್ರೀ ಅವರ ಈ ಲುಕ್ ಅಭಿಮಾನಿಗಳ ಮನಗೆದ್ದಿದೆ.

ಇತ್ತೀಚಿನದ ದಿನಗಳಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು, ನಟಿಯರು, ನಿರೂಪಕಿಯರು ಮದುವೆಯಾದ ನಂತರ ತಾಳಿ ತೆಗೆದು ಶೋಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಶೋ ಮುಗಿದ ಮೇಲೆ ಮತ್ತೆ ತಾಳಿ ಹಾಕಿಕೊಳ್ಳುತ್ತಾರೆ. ಆದರೆ ಈ ವಿಚಾರದಲ್ಲಿ ಅನುಶ್ರೀ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

"ದಯವಿಟ್ಟು ತಾಳಿ ತೆಗೆಯಬೇಡಿ, ತುಂಬಾ ಲಕ್ಷಣವಾಗಿ ಕಾಣಿಸುತ್ತಿದ್ದೀರಿ", "ಮಾಂಗಲ್ಯ ಸರ ತುಂಬಾ ಚೆನ್ನಾಗಿ ಕಾಣ್ತಾ ಇದೆ ಅನು ಅಕ್ಕ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ಝೀ ಕನ್ನಡ ಫೇಸ್‌ಬುಕ್ ಪೇಜ್‌ನಲ್ಲಿ ನೋಡಬಹುದು. ಸದ್ಯ ಅನುಶ್ರೀ ಅವರನ್ನು ಕಂಡು ಅಭಿಮಾನಿಗಳಿಗೆ ಅವರ ಮೇಲಿನ ಗೌರವ ದುಪ್ಪಟ್ಟಾಗಿದೆ. ಸಂಪ್ರದಾಯ ಮರೆಯದ ಅನುಶ್ರೀಯನ್ನು ಹಾಡಿ ಹೊಗಳಿದ್ದಾರೆ.

Karna Serial: ನಿಧಿ ಬಳಿ ಬಂದು ಕ್ಷಮೆ ಕೇಳಿದ ರಮೇಶ್: ಕರ್ಣನ ಪ್ರೀತಿಗೆ ಸಿಕ್ಕಿತು ಗ್ರೀನ್ ಸಿಗ್ನಲ್

ಅಂದಹಾಗೆ ಅನುಶ್ರೀ-ರೋಹನ್ ಅವರದ್ದು ಲವ್ ಮ್ಯಾರೇಜ್‌ ಅಂತೆ. ಐಟಿ ಉದ್ಯೋಗಿಯಾಗಿರುವ ರೋಶನ್‌ ಅವರು ಕೊಡಗು ಮೂಲದವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ಅನುಶ್ರೀ, ರೋಶನ್‌ ಭೇಟಿಯಾಗಿತ್ತು. ಮೂಲತಃ ಮಂಗಳೂರಿನವರಾಗಿರುವ ಅನುಶ್ರೀ ಆ್ಯಂಕರ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಜನಪ್ರಿಯ. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.