Bhagya Lakshmi Serial: ಆದೀಯ ರಹಸ್ಯ ತಿಳಿಯಲು ಮಾಸ್ಟರ್ ಪ್ಲ್ಯಾನ್ ಮಾಡಿದ ಕನ್ನಿಕಾ
ಆದೀ ಎರಡು ಪ್ರತಿ ಬಟ್ಟೆ, ದಿನಕ್ಕೆ 150 ರೂಪಾಯಿ ಇಟ್ಟುಕೊಂಡು ದಿನ ಕಳೆಯುತ್ತಿದ್ದಾನೆ. ಇದರ ಮಧ್ಯೆ ಕನ್ನಿಕಾ ಹಾಗೂ ಮೀನಾಕ್ಷಿಗೆ ಆದೀ ಸುಳ್ಳು ಹೇಳಿ ಎಲ್ಲೋ ಹೋಗಿದ್ದಾನೆ ಎಂಬ ಅನುಮಾನ ದಟ್ಟವಾಗಿದೆ. ನಿಜ ತಿಳಿಯಲು ಕನ್ನಿಕಾ ಮಾಸ್ಟರ್ ಪ್ಲ್ಯಾನ್ ಒಂದನ್ನು ಮಾಡಿದ್ದಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದು, ಈ ಚಾಲೆಂಜ್ ಈಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ಭಾಗ್ಯ ಮನೆಯ ಮೇಲಿನ ರೂಮ್ನಲ್ಲಿ ಆದೀ ಸಾಮಾನ್ಯ ಜೀವನ ನಡೆಸುತ್ತಿದ್ದಾನೆ. ಎರಡು ಪ್ರತಿ ಬಟ್ಟೆ, ದಿನಕ್ಕೆ 150 ರೂಪಾಯಿ ಇಟ್ಟುಕೊಂಡು ದಿನ ಕಳೆಯುತ್ತಿದ್ದಾನೆ. ಇದರ ಮಧ್ಯೆ ಕನ್ನಿಕಾ ಹಾಗೂ ಮೀನಾಕ್ಷಿಗೆ ಆದೀ ಸುಳ್ಳು ಹೇಳಿ ಎಲ್ಲೋ ಹೋಗಿದ್ದಾನೆ ಎಂಬ ಅನುಮಾನ ದಟ್ಟವಾಗಿದೆ. ನಿಜ ತಿಳಿಯಲು ಕನ್ನಿಕಾ ಮಾಸ್ಟರ್ ಪ್ಲ್ಯಾನ್ ಒಂದನ್ನು ಮಾಡಿದ್ದಾಳೆ.
ಹಿಂದಿನ ಎಪಿಸೋಡ್ನಲ್ಲಿ ಭಾಗ್ಯ ಮನೆಗೆ ದಿಢೀರ್ ಆಗಿ ಕಿಶನ್-ಪೂಜಾ ಹಾಗೂ ಕನ್ನಿಕಾ ಬಂದಿದ್ದರು. ಭಾಗ್ಯ-ಕುಸುಮಾ- ಆದೀ ಎಲ್ಲರೂ ಜೊತೆಯಾಗಿ ಊಟ ಮಾಡುತ್ತಿರುವಾಗ ರಾತ್ರಿ ಏಕಾಏಕಿ ಇವರು ಬಂದಿದ್ದರು. ಆದರೆ, ಇವರ ಕಣ್ಣಿಗೆ ಕಾಣದಂತೆ ಆದೀಶ್ವರ್ ಹೇಗೋ ಎಸ್ಕೇಪ್ ಆಗಿ ರೂಮ್ ಸೇರಿಕೊಂಡ. ಬಳಿಕ ಕಿನಶ್-ಪೂಜಾ ಹಾಗೂ ಕನ್ನಿಕಾ ಊಟ ಮಾಡಿ ರಿಟರ್ನ್ ಹೋಗಿದ್ದಾರೆ. ಮರುದಿನ ಮೀನಾಕ್ಷಿ ಏಕಾಂಗಿಯಾಗಿ ಯೋಚನೆ ಮಾಡುತ್ತ ಇರುತ್ತಾಳೆ.
ಕನ್ನಿಕಾ ಬಂದು ಏನಾಯಿತು ಎಂದು ಕೇಳಿದಾಗ.. ನನಗೆ ಆದೀಶ್ವರ್ ಮೇಲೆ ಅನುಮಾನ ಬರುತ್ತಿದೆ ಎಂದಿದ್ದಾಳೆ. ಆದೀ ಯಾವತ್ತೂ ಈರೀತಿ ಮನೆಬಿಟ್ಟು ಹೋದವನಲ್ಲ.. ಈ ಹಿಂದೆ ಮೀಟಿಂಗ್ ಅಂತ ಅನೇಕ ಬಾರಿ ಹೋಗಿದ್ದಾನೆ ಆದರೆ ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಾನೆ.. ಆದರೆ ಈ ಬಾರಿ ಆರೀತಿ ಮಾಡಿಲ್ಲ.. ಅಷ್ಟೇ ಅಲ್ಲದೆ ನಾನು ಎಷ್ಟು ಸಲ ಕಾಲ್ ಮಾಡಿದ್ರೂ ಪಿಕ್ ಮಾಡ್ತಿಲ್ಲ.. ಈ ಹಿಂದೆ ಅವನು ಯಾವುದೇ ಮೀಟಿಂಗ್.. ಎಷ್ಟೇ ಬ್ಯುಸಿ ಇದ್ರೂ ನನ್ನ ಕಾಲ್ ರಿಸಿವ್ ಮಾಡ್ತಿದ್ದ ಆದ್ರೆ ಈಗ ಕಾಲ್ ರಿಸಿವ್ ಅಥವಾ ಪುನಃ ಕಾಲ್ ಮಾಡೋದು ಮಾಡಿಲ್ಲ ಎಂದಿದ್ದಾಳೆ.
ಅದಕ್ಕೆ ಕನ್ನಿಕಾ, ನನಗೂ ಆದೀ ಬ್ರೋ ಮೇಲೆ ಅನುಮಾನ ಬರುತ್ತಿದೆ.. ಅದಕ್ಕಾಗಿಯೇ ಒಂದು ಪ್ಲ್ಯಾನ್ ಮಾಡಿದ್ದೇನೆ.. ಆದೀ ಆಫೀಸ್ನಲ್ಲಿ ನಮ್ಮ ಹುಡುಗ ಒಬ್ಬ ಇದ್ದಾನೆ.. ಅವನ ಹತ್ರ ಹೇಳಿ ಆದೀ ಎಲ್ಲಿದ್ದಾನೆ?, ಏನು ಮಾಡ್ತಾ ಇದ್ದಾನೆ?, ಎಲ್ಲಿಂದ ಬರ್ತಿದ್ದಾನೆ ಆಫೀಸ್ಗೆ ಎಲ್ಲ ಮಾಹಿತಿ ಕಲೆ ಹಾಕಲು ಹೇಳಿದ್ದೇನೆ.. ಅವನು ಸ್ವಲ್ಪ ಹೊತ್ತಲ್ಲಿ ಎಲ್ಲ ವಿಷಯ ತಿಳಿಸುತ್ತಾನೆ ಎಂದು ಹೇಳಿದ್ದಾಳೆ. ಇದಕ್ಕೂ ಮೊದಲು ಕನ್ನಿಕಾ ತಾಂಡವ್ಗೆ ಕಾಲ್ ಮಾಡಿ ವಿಚಾರಿಸಿದ್ದಾಳೆ. ಆದರೆ, ತಾಂಡವ್ ನಿಜಾಂಶ ಬಿಟ್ಟು ಕೊಡದೆ ನನಗೆ ಯಾವುದೇ ವಿಷಯ ಗೊತ್ತಿಲ್ಲ ಎಂದಿದ್ದಾನೆ.
ಮತ್ತೊಂದೆಡೆ ಆದೀಶ್ವರ್ ಆಫೀಸ್ಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಮೀಟಿಂಗ್ನಲ್ಲಿ ತಾಂಡವ್ ತಬ್ಬಿಬ್ಬಾಗಿ ಸರಿಯಾಗಿ ಪ್ರೆಸೆಂಟೇಷನ್ ಮಾಡದ ಕಾರಣ ಕ್ಲೈಂಟ್ಗಳು ಅಸಮಾಧಾನ ಗೊಂಡಿದ್ದರು. ಹೀಗಾಗಿ ಇನ್ನೊಮ್ಮೆ ಮೀಟಿಂಗ್ ಫಿಕ್ಸ್ ಮಾಡಿ ನಾನು ಬರುತ್ತೇನೆ ಎಂದು ಆದೀ ಹೇಳಿದ್ದ. ಅದರಂತೆ ಮೂರನೇ ದಿನ ಆದೀ ಆಫೀಸ್ಗೆ ಹೋಗಬೇಕಿದೆ. ಆದರೆ, ಆದೀ ತಾನು ಎಂದಿದ್ದ ಎರಡು ಜೊತೆ ಪ್ಯಾಂಟ್ ಅನ್ನೂ ಒಗೆಯಲು ಹಾಕಿರುತ್ತಾನೆ.
ಹೀಗಾಗಿ ತಾಂಡವ್ಗೆ ಕಾಲ್ ಮಾಡಿ, ನಾನು ಆಫೀಸ್ ಬರೋಕೆ ಆಗುತ್ತಿಲ್ಲ.. ಮನೆಯಿಂದನೇ ಆನ್ಲೈನ್ನಲ್ಲಿ ಮೀಟಿಂಗ್ ಅಟೆಂಡ್ ಆಗುತ್ತೇನೆ ಎಂದು ಹೇಳಿದ್ದಾನೆ. ಅದರಂತೆ ಶರ್ಟ್ ಮೇಲೆ ಕೋಟ್ ಹಾಕಿಕೊಂಡು ಹಾಗೂ ಪ್ಯಾಂಟ್ ಇಲ್ಲದ ಕಾರಣ ಲುಂಗಿ ಸುತ್ತಿಕೊಂಡೇ ಮೀಟಿಂಗ್ ಅಟೆಂಡ್ ಆಗಿದ್ದಾನೆ. ಹೀಗೆ ಮೀಟಿಂಗ್ ನಡೆಯುತ್ತಿರುವಾಗ ಆದೀ ರೂಮ್ ಬಳಿ ಕುಸುಮಾ ಬಂದಿದ್ದಾಳೆ. ಆದೀಯ ಅವತಾರ ಕಂಡು ಜೋರಾಗಿ ನಕ್ಕಿದ್ದಾಳೆ. ಇದು ಮೀಟಿಂಗ್ನಲ್ಲಿರುವವರಿಗೆ ಕೇಳಿಸಿದೆ. ಹಾಗೆಯೆ ಈ ಮೀಟಿಂಗ್ ಹಾಲ್ನಲ್ಲಿ ಕನ್ನಿಕಾಳ ಏಜೆಂಟ್ ಕೂಡ ಇದ್ದಾನೆ.
ಸದ್ಯ ಆದೀಶ್ವರ್ ಭಾಗ್ಯ ಮನೆಯಲ್ಲಿರುವ ವಿಚಾರ ಮೀಟಿಂಗ್ ಹಾಲ್ನಲ್ಲಿ ಇರುವವರಿಗೆ ಗೊತ್ತಾಗುತ್ತ?, ಕನ್ನಿಕಾ ಗೊತ್ತು ಮಾಡಿರುವ ಹುಡುಗ ಕೂಡ ಅಲ್ಲೇ ಇರುವ ಕಾರಣ ಆದೀಯ ಪ್ಲ್ಯಾನ್ ಎಲ್ಲ ಕುಸುಮಾ-ಕನ್ನಿಕಾಗೆ ತಿಳಿಯುತ್ತ ಎಂಬುದು ರೋಚಕತೆ ಸೃಷ್ಟಿಸಿದೆ.
Sanjana Burli: ನಟಿಯಾಗಿ ನನ್ನ ಹೊಸ ಪ್ರಯಾಣ: ಗಂಧದ ಗುಡಿ ಧಾರಾವಾಹಿ ಬಗ್ಗೆ ಸಂಜನಾ ಬುರ್ಲಿ ಮಾತು