#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ನೋವನ್ನೆಲ್ಲ ನುಂಗಿ ಮುಖವಾಡತೊಟ್ಟು ನಗಿಸಲು ಹೊರಟ ಭಾಗ್ಯಾ: ಹೊಸ ಪಯಣ ಶುರು

ಭಾಗ್ಯಾ ಒಂದು ಮಹತ್ವದ ನಿರ್ಧಾರಕ್ಕೆ ಬರುತ್ತಾಳೆ. ಈ ಕುರಿತು ಕಲರ್ಸ್ ಕನ್ನಡ ಹೊಸ ಪ್ರೊಮೋ ಹಂಚಿಕೊಂಡಿದ್ದು, ನೋವನ್ನೆಲ್ಲ ನುಂಗಿ ಮತ್ತೆ ನಗ್ತಾಳಾ ಭಾಗ್ಯಾ? ಎಂಬ ಟೈಟಲ್ ನೀಡಿದೆ.

ನೋವನ್ನೆಲ್ಲ ನುಂಗಿ ಮುಖವಾಡತೊಟ್ಟು ನಗಿಸಲು ಹೊರಟ ಭಾಗ್ಯಾ: ಹೊಸ ಪಯಣ ಶುರು

Bhagya Lakshmi serial

Profile Vinay Bhat Jan 27, 2025 3:40 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಯಶಸ್ವಿಯಾಗುತ್ತಿದೆ. ಇದೀಗ ಭಾಗ್ಯಾಳ ಹೊಸ ಪಯಣ ಶುರುವಾಗಿದೆ. ಇಷ್ಟು ದಿನ ನೋವೆನ್ನು ನುಂಗಿ ಬದುಕುತ್ತಿದ್ದ ಭಾಗ್ಯಾಗೆ ಇದೀಗ ಮತ್ತಷ್ಟು ಕಷ್ಟಗಳು ಬಂದೊದಗಿದೆ. ಇದನ್ನೆಲ್ಲ ಮೆಟ್ಟಿನಿಂತು ನಾನು ಮುಖವಾಡ ಹಾಕಿಕೊಂಡು ನಗುನಗುತ್ತಾ ಬದುಕುತ್ತೇನೆ ಎಂದು ಭಾಗ್ಯಾ ಹೇಳಿದ್ದಾಳೆ.

ಶ್ರೇಷ್ಠಾ ಜೊತೆ ಮನೆಬಿಟ್ಟು ಹೋಗಿದ್ದ ತಾಂಡವ್ ಮತ್ತೆ ಮನೆಗೆ ಬಂದು ಭಾಗ್ಯಾಳನ್ನು ಹೊರಹಾಕಲು ಅಪ್ಪ-ಅಮ್ಮನ ಜೊತೆ ಹೊಸ ನಾಟಕ ಶುರುಮಾಡಿದ್ದಾನೆ. ನನಗೆ ಈ ಮನೆಯಲ್ಲಿ ಕೆಲವೊಂದು ಜವಾಬ್ದಾರಿಯಿದೆ, ಅದನ್ನು ಪೂರೈಸುವುದು ನನ್ನ ಕರ್ತವ್ಯ ಎಂದು ಹೇಳಿ ಮನೆಯವರ ನಂಬಿಕೆಗಳಿಸಲು ಪ್ರಯತ್ನಿಸುತ್ತಿದ್ದಾನೆ. ಇದನ್ನು ಭಾಗ್ಯಾಳ ಅಮ್ಮ ಸುನಂದ ಮತ್ತು ಅತ್ತೆ ಕುಸುಮಾ ನಂಬಿದ್ದಾರೆ. ಅಳಿಯಂದ್ರು ಬದಲಾಗಿದ್ದಾರೆ ಎಂದು ಸುನಂದ ಖುಷಿಯಲ್ಲಿದ್ದರೆ ಅತ್ತ ಕುಸುಮಾ ದೇವರು ಕೊನೆಗೂ ಕಣ್ಣು ಬಿಟ್ಟಿದ್ದಾನೆ ಎಂದಿದ್ದಾರೆ.

ಆದರೆ, ಭಾಗ್ಯಾಳಿಗೆ ಇದು ಯಾವುದೊ ಹೊಸ ಪ್ಲ್ಯಾನ್ ಎಂಬಂತೆ ಕಾಣುತ್ತಿದೆ. ಸುನಂದ ಹಾಗೂ ಕುಸುಮಾಗೆ ಈ ತಾಂಡವ್ ಪ್ಲ್ಯಾನ್ ಅರ್ಥ ಆಗುತ್ತಿಲ್ಲ. ತಾಂಡವ್, ಭಾಗ್ಯಾನ ಬಿಟ್ಟು ಉಳಿದ ಎಲ್ಲರಿಗೂ ಏನು ಸಹಾಯ ಬೇಕೋ ಕೇಳಿ ಎಂದು ಹೇಳಿದ್ದಾನೆ. ಹೇಗೋ ನಾನು ಅಂದುಕೊಂಡ ಕೆಲಸ ಆಯ್ತು, ಅತ್ತೆ ಹಾಗೂ ಅಮ್ಮ ನನ್ನ ಕಡೆ ಬರುತ್ತಿದ್ದಾರೆ. ನಿಮ್ಮನ್ನೆಲ್ಲಾ ಹೇಗೆ ಆಡಿಸುತ್ತೇನೆ ನೋಡುತ್ತಿರಿ ಎಂದು ತಾಂಡವ್‌ ಮನಸ್ಸಿನಲ್ಲೇ ಭಾಗ್ಯಾ ವಿರುದ್ಧ ಪ್ಲ್ಯಾನ್ ಮಾಡಿದ್ದಾನೆ.

ಅತ್ತ ಹೇಗಾದರೂ ಮಾಡಿ ಭಾಗ್ಯಾ ಕೆಲಸ ಮಾಡುವ ಕಡೆ ಅವಳಿಗೆ ಕೆಟ್ಟ ಹೆಸರು ಬರುವಂತೆ ಮಾಡಬೇಕು, ಅವಳು ಕೆಲಸ ಕಳೆದುಕೊಳ್ಳುವಂತೆ ಮಾಡಬೇಕು ಎಂದು ಶ್ರೇಷ್ಠಾ ತಾಂಡವ್​ಗೆ ಹೇಳುತ್ತಾಳೆ. ಈ ಮೂಲಕ ಭಾಗ್ಯಾಳ ಕೆಲಸನೂ ಹೋಗಿದೆ. ಅತ್ತ ಭಾಗ್ಯಾ ನನ್ನ ಜೀವನ ಹೇಗಾಯಿತಲ್ಲ ಎಂದು ಅಳುತ್ತಾ ಕೂರುತ್ತಾಳೆ. ಗಂಡನ ಜೊತೆ ಹೊಂದಿಕೊಂಡು ಹೋಗಬೇಕು.. ಹೆಣ್ಣು ಎಂದರೆ ಹಾಗೆ.. ಏನೇ ಕಷ್ಟ ಬಂದರೂ ಗಂಡನ ಬಿಟ್ಟುಕೊಡಬಾರದು ಎಂದು ಸುನಂದ ಹೇಳಿದ್ದನ್ನು ಕೇಳಿ, ನಾನೇನು ಗೊಂಬೆನಾ ಎಲ್ಲ ನೋವನ್ನು ಸಹಿಸಿಕೊಳ್ಳಲು.. ನನಗೂ ನೋವಾಗುತ್ತೆ.. ಎಷ್ಟು ಅಂತ ಸಹಿಸಿಕೊಳ್ಳಲಿ.. ಇವರಿಗೆ ಇದೆಲ್ಲ ಯಾಕೆ ಅರ್ಥ ಆಗುತ್ತಿಲ್ಲ ಎಂದು ಬೇಸರಗೊಳ್ಳುತ್ತಾಳೆ.

ಅಂತಿಮವಾಗಿ ಭಾಗ್ಯಾ ಒಂದು ಮಹತ್ವದ ನಿರ್ಧಾರಕ್ಕೆ ಬರುತ್ತಾಳೆ. ಈ ಕುರಿತು ಕಲರ್ಸ್ ಕನ್ನಡ ಹೊಸ ಪ್ರೊಮೋ ಹಂಚಿಕೊಂಡಿದ್ದು, ನೋವನ್ನೆಲ್ಲ ನುಂಗಿ ಮತ್ತೆ ನಗ್ತಾಳಾ ಭಾಗ್ಯಾ? ಎಂಬ ಟೈಟಲ್ ನೀಡಿದೆ. ಇದರಲ್ಲಿ ಭಾಗ್ಯಾ, ಶ್ರೇಷ್ಠಾ ನನ್ನ ಗಂಡನ ಕಸಿದುಕೊಂಡಳು, ದೇವ್ರೇ ನೀನು ನನ್ನ ಪಾಲಿಗೆ ಧೈರ್ಯವಾಗಿದ್ದ ಕೆಲಸನೂ ಕಿತ್ಕೊಂಡೆ.. ನನ್ನ ಕಣ್ಣೀರೆ ಬರಿದಾಗಿ ಬಿಡುತ್ತೇನೊ.. ನಾನಿನ್ನು ದುಃಖನ ಮುಚ್ಚಿಟ್ಟುಕೊಂಡು ಮುಖವಾಡ ತೊಡುತ್ತೇನೆ. ಸಾಯೋವಷ್ಟು ಗಾಸಿಯಾಗಿದ್ರೂ.. ಇನ್ನು ಸಾಯೋವರೆಗು ನಗ್ತೀನಿ ಎಂದು ಜೋಕರ್ ಮುಖವಾಡ ತೊಟ್ಟಿದ್ದಾಳೆ. ಇದು ನೋವು-ನಲಿವಿನ ಮೇರೆ ಮೇರಿದೆ ಭಾಗ್ಯಾಳ ಹೊಸ ಪಯಣ ಎಂದು ಹೇಳಲಾಗಿದೆ.

BBK 11 Winner, Hanumantha: ಟ್ರೋಫಿ ಗೆದ್ದ ಕೂಡಲೇ ಹನುಮಂತ ಮಾಡಿದ್ದೇನು ನೋಡಿ: ವಿನ್ನಿಂಗ್ ಸ್ಪೀಚ್ ಹೇಗಿತ್ತು ಗೊತ್ತಾ?