ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಮುಗಿಯದ ಸಂಕಷ್ಟ: ಜೋಕರ್ ವೇಷದ ಕೆಲಸವನ್ನೂ ಕಳೆದುಕೊಂಡ ಭಾಗ್ಯ

ಭಾಗ್ಯಾ ಕೆಲಸ ಕಳೆದುಕೊಂಡಿದ್ದಾಳೆ. ನೀನು ಇಷ್ಟು ದಿನ ಇಲ್ಲಿ ಇದ್ದಿದ್ದೆ ನಮಗೆ ಸಮಸ್ಯೆ ಆಗ್ತಾ ಇತ್ತು.. ಇನ್ಮುಂದೆ ನೀವು ಇಲ್ಲಿ ಕೆಲಸ ಮಾಡ್ತಾ ಇಲ್ಲ ಎಂದು ರೆಸಾರ್ಟ್ ಮ್ಯಾನೇಜರ್ ಹೇಳಿದ್ದಾರೆ. ಈ ಮೂಲಕ ಭಾಗ್ಯಾ ಈಗಿರುವ ಕೆಲಸ ಕೂಡ ಕಳೆದುಕೊಂಡಿದ್ದಾರೆ.

ಮುಗಿಯದ ಸಂಕಷ್ಟ: ಜೋಕರ್ ವೇಷದ ಕೆಲಸವನ್ನೂ ಕಳೆದುಕೊಂಡ ಭಾಗ್ಯ

Bhagya Lakshmi Serial

Profile Vinay Bhat Mar 19, 2025 11:31 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi) ಭಾಗ್ಯಾಗೆ ಕಷ್ಟದ ದಿನಗಳು ಮುಗಿಯುವಂತೆ ಕಾಣುತ್ತಿಲ್ಲ. ಒಂದರ ಹಿಂದೆ ಒಂದರಂತೆ ತೊಂದರೆಗಳು ಭಾಗ್ಯಾಳನ್ನ ಹುಡುಕಿಕೊಂಡು ಬರುತ್ತಿದೆ. ಇಷ್ಟು ದಿನ ಭಾಗ್ಯ ಯಾರಿಗೂ ತಿಳಿಯದಂತೆ ಕಾಪಾಡಿಕೊಂಡು ಬಂದಿದ್ದ ಗುಟ್ಟು ಕೂಡ ರಟ್ಟಾಗಿದೆ. ಭಾಗ್ಯಾ ಜೋಕರ್ ವೇಷ ಹಾಕಿಕೊಂಡು ರೆಸಾರ್ಟ್​ನಲ್ಲಿ ನೃತ್ಯ ಮಾಡುತ್ತಾಲೆ ಎಂಬ ವಿಚಾರವನ್ನು ತಾಂಡವ್ ಮನೆಯವರ ಮುಂದೆ ಹೇಳಿಬಿಟ್ಟಿದ್ದಾನೆ. ಇದರ ಬೆನ್ನಲ್ಲೇ ಭಾಗ್ಯಾಳ ಕೆಲಸ ಕೂಡ ಹೋಗಿದೆ. ಹೊಸ ಕೆಲಸಕ್ಕೆ ಮತ್ತೆ ಅಲಿಯಬೇಕಾಗಿ ಬಂದಿದೆ.

ಅಮ್ಮನಿಗೆ ಸಹಾಯ ಮಾಡಲು, ಹಣ ಸಂಪಾದಿಸಲು ಗುಂಡಣ್ಣ ರಸ್ತೆ ಬದಲಿಯಲ್ಲಿ ಶೂ ಪಾಲೀಶ್ ಮಾಡಿ ಅದರಿಂದ ಸ್ವಲ್ಪ ಹಣ ಸಂಪಾದನೆ ಮಾಡಲು ಮುಂದಾಗಿದ್ದ. ಆದರೆ, ಈ ವಿಚಾರ ತಾಂಡವ್-ಭಾಗ್ಯ ಇಬ್ಬರಿಗೂ ಗೊತ್ತಾಗಿದೆ. ಮಗ ಶೂ ಪಾಲೀಶ್ ಕೆಲಸ ಮಾಡುತ್ತಿರುವುದನ್ನು ಕಂಡು ಭಾಗ್ಯಾಗೆ ಶಾಕ್‌ ಆಗಿದೆ. ನಾನೇನು ಕಮ್ಮಿ ಮಾಡಿದ್ದೆ ನಿನ್ಗೆ.. ಯಾರು ಹೇಳಿದ್ದು ನಿನ್ಗೆ ಇದೆಲ್ಲ ಮಾಡೋಕೆ ಎಂದು ಕೇಳಿದ್ದಾಳೆ. ಶಾಲೆಯ ಫೀಸ್ ಕಟ್ಟಲು ಬಹಳಷ್ಟು ಹಣ ಬೇಕಾಗುತ್ತದೆ. ಅದಕ್ಕಾಗಿ ಈ ಕೆಲಸ ಮಾಡುತ್ತಿದ್ದೇನೆ, ನೀನು ಕಷ್ಟ ಪಡುವುದನ್ನು ನೋಡಲು ನನ್ನಿಂದ ಆಗಲಿಲ್ಲ ಎಂದು ಗುಂಡಣ್ಣ ಹೇಳಿದ್ದಾನೆ.

ಇದೇ ಸಮಯದಲ್ಲಿ ಗುಂಡಣ್ಣ ಒಂದು ಎಡವಟ್ಟು ಮಾಡಿದ್ದು, ನೀನು ಜೋಕರ್‌ ವೇಷ ಹಾಕಿಕೊಂಡು ಡ್ಯಾನ್ಸ್ ಮಾಡಿ ಸುಸ್ತಾಗಿದ್ದನ್ನ ನಾನು ನೋಡಿದೆ. ನಂಗೆ ಬೇಜಾರಾಯ್ತು. ನಿಂಗೆ ಸಹಾಯ ಆಗಲಿ ಅಂತ ನಾನು ಈ ಕೆಲಸ ಮಾಡಿದೆ ಎಂದು ಕೂಡ ಹೇಳಿಬಿಡುತ್ತಾನೆ. ಅದನ್ನ ಕೇಳಿಸಿಕೊಂಡ ತಾಂಡವ್‌.. ಭಾಗ್ಯಳನ್ನ ಹೀಯಾಳಿಸಿ ನಗುತ್ತಾನೆ. ಬಳಿಕ ತಾಂಡವ್, ಭಾಗ್ಯ ಮನೆಗೆ ಬಂದು, ಮನೆಯ ಹೊರಗಡೆ ನಿಂತು ಜೋರಾಗಿ ಅರಚುತ್ತಾ ಎಲ್ಲ ಸತ್ಯವನ್ನು ಬಹಿರಂಗ ಪಡಿಸಿದ್ದಾನೆ. ಭಾಗ್ಯ ಕಂಡ ಕಂಡಲ್ಲಿ ಕುಣಿದು ಕೆಲಸ ಮಾಡಿ ಹಣ ಸಂಪಾದಿಸಿ, ನಮ್ಮ ಮರ್ಯಾದೆ ತೆಗೆಯುತ್ತಿದ್ದಾಳೆ.. ತಾನು ಬೀದಿ ಬೀದಿ ಅಲಿದಿದ್ದು ಸಾಕು ಅಂತ ಈಗ ತನ್ನ ಮಗನನ್ನು ಬೀದಿಗೆ ಹಾಕಿದ್ದಾಳೆ ಎಂದು ಹೇಳುತ್ತಾನೆ.



ಬಳಿಕ ಭಾಗ್ಯಾ ಮನೆಗೆ ಬಂದಾಗ ಅತ್ತೆ ಕುಸುಮಾ ಹಾಗೂ ತಾಯಿ ಪ್ರಶ್ನೆ ಮಾಡುತ್ತಾರೆ.. ಇದೆಲ್ಲ ನಿಜವೇ? ಎಂದು ಕೇಳುತ್ತಾರೆ. ಬೇರೆಲ್ಲೂ ಕೆಲಸ ಸಿಗದ ಕಾರಣ ನಾನು ಜೋಕರ್ ಆಗಿ ಬಣ್ಣ ಬಳಿದುಕೊಂಡು ಕೆಲಸ ಮಾಡುತ್ತಿದ್ದೆ. ಸ್ಕೂಲ್‌ ಫೀಸ್ ಕಟ್ಟೋದಕ್ಕೆ ಸಹಾಯ ಆಗಲಿ ಅಂತ ಗುಂಡಣ್ಣ ಹೇಳದೆ ಕೇಳದೆ ಶೂ ಪಾಲಿಶ್ ಮಾಡಿದ್ದಾನೆ ಎಂಬ ಸತ್ಯವನ್ನ ಭಾಗ್ಯ ಹೇಳುತ್ತಾಳೆ. ಅದನ್ನ ಕೇಳಿ ಸುನಂದಾ ಬೇಸರಗೊಳ್ಳುತ್ತಾರೆ. ಭಾಗ್ಯ ಜೊತೆಗೆ ವಾಕ್ಸಮರ ನಡೆಸಿದ ಸುನಂದಾ.. ಕೊನೆಗೆ ಬೇಸರದಿಂದ ಮನೆಬಿಟ್ಟು ಹೋಗುತ್ತಾರೆ.



ಇಷ್ಟೆಲ್ಲದರ ಮಧ್ಯೆ.. ಭಾಗ್ಯಾ ಕೆಲಸ ಕಳೆದುಕೊಂಡಿದ್ದಾಳೆ. ನೀನು ಇಷ್ಟು ದಿನ ಇಲ್ಲಿ ಇದ್ದಿದ್ದೆ ನಮಗೆ ಸಮಸ್ಯೆ ಆಗ್ತಾ ಇತ್ತು.. ಇನ್ಮುಂದೆ ನೀವು ಇಲ್ಲಿ ಕೆಲಸ ಮಾಡ್ತಾ ಇಲ್ಲ ಎಂದು ರೆಸಾರ್ಟ್ ಮ್ಯಾನೇಜರ್ ಹೇಳಿದ್ದಾರೆ. ಈ ಮೂಲಕ ಭಾಗ್ಯಾ ಈಗಿರುವ ಕೆಲಸ ಕೂಡ ಕಳೆದುಕೊಂಡಿದ್ದಾರೆ. ಆದರೆ, ಮತ್ತೊಂದು ಸಂತಸದ ವಿಚಾರ ಎಂದರೆ, ಗುಂಡಣ್ಣನ ಸ್ನೇಹಿತನಿಂದ ಹಾಸ್ಟೆಲ್‌ನಲ್ಲಿ ಅಡುಗೆಯವರಿಲ್ಲ ಎಂಬ ವಿಷಯ ಭಾಗ್ಯಾಗೆ ಗೊತ್ತಾಗಿದೆ. ಸದ್ಯ ಭಾಗ್ಯಾ ಹೊಸ ಕೆಲಸ ಏನು ಹುಡುಕುತ್ತಾಳೆ?, ಮುಂದಿನ ತಿಂಗಳು ಇಎಮ್​ಐ ಕಟ್ಟಲು ಹೇಗೆ ಹಣ ಹೊಂದಿಸುತ್ತಾಳೆ?, ತಾಂಡವ್-ಶ್ರೇಷ್ಠಾರ ಮುಂದಿನ ಪ್ಲ್ಯಾನ್ ಏನು ಎಂಬುದು ನೋಡಬೇಕಿದೆ.

Bhavya Gowda: ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?