ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinay Gowda: ಇನ್ಮುಂದೆ ರಜತ್ ಜೊತೆ ರೀಲ್ಸ್ ಮಾಡಲ್ಲ: ವಿನಯ್ ಗೌಡ ಖಡಕ್ ನಿರ್ಧಾರ

ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ರಜತ್‌ ಹಾಗೂ ವಿನಯ್ ಈಗಾಗಲೇ ಬಿಡುಗಡೆ ಭಾಗ್ಯ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ಅವರು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. ಇದೀಗ ಸಂದರ್ಶನವೊಂದರಲ್ಲಿ ಇನ್ನಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ಮುಂದೆ ರಜತ್ ಜೊತೆ ರೀಲ್ಸ್ ಮಾಡಲ್ಲ: ವಿನಯ್ ಗೌಡ ಖಡಕ್ ನಿರ್ಧಾರ

Vinay Gowda

Profile Vinay Bhat Apr 1, 2025 3:56 PM

ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನಯ್ ಗೌಡ (Vinay Gowda) ಹಾಗೂ ಸೀಸನ್ 11ರ ರಜತ್ ಕಿಶನ್ ಇಬ್ಬರೂ ರೀಲ್ಸ್ ಮಾಡುವುದಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ಗೊತ್ತೇ ಇದೆ. ರಜತ್ ಡಿ ಬಾಸ್ ಎಂದು ಬರೆದಿರುವ ಶರ್ಟ್ ಅನ್ನು ತೊಟ್ಟು ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದರು. ಇದನ್ನು ರಜತ್ ಕಿಶನ್ ತನ್ನ ಇನ್​ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿತ್ತು.

ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ರಜತ್‌ ಹಾಗೂ ವಿನಯ್ ಈಗಾಗಲೇ ಬಿಡುಗಡೆ ಭಾಗ್ಯ ಸಿಕ್ಕಿದೆ. ಮೂರು ದಿನಗಳ ಜೈಲುವಾಸ ಅನುಭವಿಸಿದ್ದ ಇಬ್ಬರಿಗೂ ಈ ಪ್ರಕರಣದಲ್ಲಿ ರಿಲೀಫ್‌ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ಅವರು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. ಇದೀಗ ಸಂದರ್ಶನವೊಂದರಲ್ಲಿ ಇನ್ನಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ನಂಗೆ ಪುಷ್ಪ ಕ್ಯಾರೆಕ್ಟರ್‌ ಕೊಟ್ಟಿದ್ದರು. ಪ್ರತಿ ವಾರವೂ ಕಂಟೆಂಟ್‌ ಮೇಲೆ, ಅದರದ್ದೇ ಆದ ಕಾಸ್ಟ್ಯೂಮ್‌ನಲ್ಲಿ ನಾವು ರೀಲ್‌ ಮಾಡುತ್ತಿದ್ವಿ. ಅದೇ ರೀತಿ ನಾನು ನನ್ನ ರೀಲ್‌ ಮಾಡಿ ಹಾಕಿದ್ದೆ. ರಜತ್‌ ಅವರ ರೀಲ್‌ ಮಾಡುತ್ತಿದ್ದರು. ನಾನು ಊಟ ಮುಗಿಸಿಕೊಂಡು ಹೋಗುವಾಗ ರಜತ್‌ ನನ್ನನ್ನು ಕರೆದರು ರೀಲ್‌ ಮಾಡೋಣ ಬಾ ಅಂದ್ರು. ನನ್ನ ಜೀವನದಲ್ಲಿ ನಾನು ಮಾಡಿರುವ ಅತಿ ಸಣ್ಣ ತಪ್ಪು ಇದೇ. ನನ್ನ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯೂ ಯೋಚನೆ ಮಾಡಿ ಇಡುತ್ತೀನಿ. ಆದರೆ ಆತುರದಲ್ಲಿ, ಸೆಟ್‌ ಪ್ರಾಪರ್ಟಿ ಬಳಸಿ ರೀಲ್‌ ಮಾಡಿದ್ದು ತಪ್ಪಾಯ್ತು ಎಂದು ಹೇಳಿದ್ದಾರೆ.

Bhagya Lakshmi Serial: ಯುಗಾದಿ ಸಂಭ್ರಮದಲ್ಲಿದ್ದ ಭಾಗ್ಯಾಗೆ ಶಾಕ್ ಕೊಟ್ಟ ಪೊಲೀಸರು: ತನ್ವಿ ಅರೆಸ್ಟ್?

ನಾನಿಲ್ಲಿ ಯಾರನ್ನು ದೂಷಿಸುವುದಿಲ್ಲ. ಅದು ನನ್ನ ತಪ್ಪು, ನಾನು ಯೋಚನೆ ಮಾಡಬೇಕಿತ್ತು. ನನ್ನ ಜೀವನದಲ್ಲಿ ಪೊಲೀಸ್‌ ಸ್ಟೇಷನ್‌ ಅನ್ನೇ ನೋಡದೇ ಇದ್ದವನು ಡೈರೆಕ್ಟ್‌ ಜೈಲಿಗೆ ಹೋಗುವ ಹಾಗಾಯ್ತು. ಇನ್ಮೇಲೆ ರೀಲ್ಸ್‌ ಮಾಡ್ತೀನಿ ಆದ್ರೆ ರಜತ್‌ ನಿನ್ನ ಜೊತೆ ಯಾವುದೇ ರೀಲ್ಸ್‌ ಮಾಡುವುದಿಲ್ಲ ನನ್ನನ್ನು ಬಿಟ್ಟುಬಿಡು ಎಂದು ವಿನಯ್‌ ಗೌಡ ಹಾಸ್ಯಮಯವಾಗಿ ಹೇಳಿದ್ದಾರೆ.

ಇನ್ನು ಪೊಲೀಸರ ತನಿಖೆ ವಿಚಾರವಾಗಿ ಮಾತನಾಡಿದ ವಿನಯ್, ಪೊಲೀಸ್‌ ಇಲಾಖೆ ಅವರು ಅವರ ತನಿಖೆಯನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಸೆಲೆಬ್ರೆಟಿ ಅಥವಾ ಸಾಮಾನ್ಯ ಮನುಷ್ಯ ಎನ್ನುವ ಭೇದಭಾವ ತೋರಿಸದೇ ಆ ಪ್ರಕರಣದಲ್ಲಿ ಏನೇನು ಇದೆಯೋ ಅದರ ಪ್ರಕಾರವಾಗಿ ಅವರು ತನಿಖೆ ಮಾಡಿದ್ದಾರೆ. ನಮ್ಮಿಂದ ಪೊಲೀಸ್‌ ಇಲಾಖೆಯವರು ಹಣ ಪಡೆದಿದ್ದಾರೆ ಎನ್ನುವ ವಿಡಿಯೋಗಳನೆಲ್ಲಾ ನೋಡಿದೆ. ಅದೆಲ್ಲಾ ಸುಳ್ಳು. ನಾವು ಅವರಿಗೆ ಯಾವುದೇ ಹಣ ಕೊಟ್ಟಿಲ್ಲ, ಅವರು ನಮ್ಮಿಂದ ಯಾವುದೇ ಹಣ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.