Bhoomi Shetty: ನಾನೇಕೆ ಹೆಣ್ಣಾಗಿ ಹುಟ್ಟಿದೆ: ಶಕ್ತಿ ದೇವತೆ ಕಾಮಾಕ್ಯ ಮಂದಿರದಲ್ಲಿ ಭೂಮಿ ಶೆಟ್ಟಿ
ಇತ್ತೀಚಿನ ದಿನಗಳಲ್ಲಿ ಭೂಮಿ ಶೆಟ್ಟಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ನೋಡುವಂತಾಗಿದೆ. ಸದ್ಯಕ್ಕೆ ಸಿನಿಮಾ, ಸಿರೀಯಲ್ ನಟನೆಯಿಂದ ದೂರ ಉಳಿದಿದ್ದಾರೆ. ಹೀಗಿರುವಾಗ ಇವರು ದಿಢೀರ್ ಎಂದು ದೇವರ ಮೊರೆ ಹೋಗಿದ್ದಾರೆ. ಇದೇ ಮೊದಲ ಬಾರಿಗೆ ಭೂಮಿ ಶೆಟ್ಟಿ ಹೊರ ರಾಜ್ಯದ ಶಕ್ತಿಪೀಠ ಕಾಮಾಕ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ.

Bhoomi Shetty

ಕಿನ್ನರಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ಭೂಮಿ ಶೆಟ್ಟಿ (Bhoomi Shetty), ನಂತರ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸೋ ಮೂಲಕ ಕನ್ನಡಿಗರಿಗೆ ಹತ್ತಿರವಾದರು. ಕಿರುತೆರೆಯಲ್ಲಿ ಬಿಜಿಯಾಗಿರುವಾಗಲೇ ಇಕ್ಕಟ್ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ಆದರೆ, ಇತ್ತೀಚಿನ ದಿನಗಳಲ್ಲಿ ಭೂಮಿ ಶೆಟ್ಟಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ನೋಡುವಂತಾಗಿದೆ. ಸದ್ಯಕ್ಕೆ ಸಿನಿಮಾ, ಸಿರೀಯಲ್ ನಟನೆಯಿಂದ ದೂರ ಉಳಿದಿದ್ದಾರೆ. ಹೀಗಿರುವಾಗ ಇವರು ದಿಢೀರ್ ಎಂದು ದೇವರ ಮೊರೆ ಹೋಗಿದ್ದಾರೆ.
ಇದೇ ಮೊದಲ ಬಾರಿಗೆ ಭೂಮಿ ಶೆಟ್ಟಿ ಹೊರ ರಾಜ್ಯದ ಶಕ್ತಿಪೀಠ ಕಾಮಾಕ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ದೇಶದ 51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ. ಕಳೆದ ವಾರವಷ್ಟೆ ಇದೇ ದೇವಸ್ಥಾನಕ್ಕೆ ದೀಪಿಕಾ ದಾಸ್ ಕೂಡ ಭೇಟಿ ಕೊಟ್ಟಿದ್ದರು.
ಕಾಮಾಕ್ಯ ದೇವಸ್ಥಾನವು ಅಸ್ಸಾಂನ ಗುವಾಹಟಿಯಲ್ಲಿರುವ ನೀಲಾಚಲ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಒಂದು ಪ್ರಸಿದ್ಧ ಶಕ್ತಿ ದೇವಸ್ಥಾನವಾಗಿದೆ. ಇದು ಭಾರತದ ಅತಿ ದೊಡ್ಡ ಶಕ್ತಿ ದೇವಾಲಯಗಳಲ್ಲಿ ಒಂದಾಗಿದೆ. ಭೂಮಿ ಅವರು ದೇವಸ್ಥಾನಕ್ಕೆ ಭೇಟಿ ಕೊಟ್ಟ ಫೋಟೋವನ್ನು ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಕೆಂಪು ಬಣ್ಣದ ಸೀರೆ, ಹಣೆಗೆ ಕುಂಕುಮ, ಕೈಯಲ್ಲಿ ಹೂವು ಹಿಡಿದುಕೊಂಡು ಕಾಮಾಕ್ಯ ದೇವಿ ದೇವಸ್ಥಾನ ಮುಂದೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳ ಜೊತೆಗೆ ವಿಶೇಷ ಕ್ಯಾಪ್ಶನ್ ಕೂಡ ಬರೆದುಕೊಂಡಿದ್ದು, ಇದು ವೈರಲ್ ಆಗುತ್ತಿದೆ.
‘‘ನಾನೇಕೆ ಹೆಣ್ಣಾಗಿ ಹುಟ್ಟಿದೆ ಎಂದು ಪ್ರಶ್ನಿಸುತ್ತಿದ್ದೆ. ನನ್ನ ಚರ್ಮಕ್ಕಾಗಿ ನಾನು ಹಾಳಾದೆ, ನಾನು ಎಂದಿಗೂ ಆರಿಸದ ನಿಯಮಗಳಿಂದ ಮೌನಗೊಂಡೆ. ಆದರೆ ನಾನು ನನ್ನನ್ನು ಆರಿಸಿಕೊಂಡ ದಿನ ಅವಮಾನದಿಂದ ನನ್ನ ಪ್ರಯಾಣ ಪ್ರಾರಂಭವಾಯಿತು. ಗುಣಪಡಿಸುವಿಕೆಯು ನನ್ನನ್ನು ಹೊರಗೆ ಅಲ್ಲ, ಒಳಗೆ ‘ಶಕ್ತಿ’ ಯತ್ತ ಕೊಂಡೊಯ್ದಿತು. ಅವಳು ನನ್ನೊಂದಿಗೆ ಪ್ರತಿ ನೆರಳು, ಪ್ರತಿ ಗಾಯದ ಮೂಲಕ ನಡೆದಳು. ಕಾಮಾಕ್ಯದಲ್ಲಿ, ನಾನು ಅದನ್ನು ಅನುಭವಿಸಿದೆ’’ ಎಂದು ಬರೆದುಕೊಂಡಿದ್ದಾರೆ.
ಭೂಮಿ ಶೆಟ್ಟಿ ಅವರದ್ದು ಯಾರಿಗೂ ಕೇರ್ ಮಾಡದ ಸ್ವಭಾವ, ಟೀಕೆಗಳಿಗೆ ಕ್ಯಾರೇ ಎನ್ನದ ಗುಣಗಳಿಂದಲೇ ಸದ್ದು ಮಾಡಿದವರು. ಭೂಮಿ ಶೆಟ್ಟಿ ಹವ್ಯಾಸಿ ಯಕ್ಷಗಾನ ಕಲಾವಿದೆಯೂ ಹೌದು. ಬಿಗ್ ಬಾಸ್ ಹಾಗೂ ಕಿನ್ನರಿ ಧಾರಾವಾಹಿ ಮೂಲಕ ಕರ್ನಾಟಕ ಜನತೆಗೆ ಪರಿಚಿತರಾದ ಭೂಮಿ ಶೆಟ್ಟಿ, ಯಕ್ಷಗಾನದಲ್ಲಿಯೂ ಪಾತ್ರ ಮಾಡಿದ್ದಾರೆ. ಇವರು ಟಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಟಾಲಿವುಡ್‌ನಲ್ಲಿ ಶರತುಲು ವರ್ತಿಸ್ತೈ ಅನ್ನುವ ಸಿನಿಮಾ ಮಾಡಿದ್ದರು. ಈ ಚಿತ್ರ 2024 ಕಳೆದ ವರ್ಷ ರಿಲೀಸ್ ಆಗಿತ್ತು.
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ಮತ್ತೋರ್ವ ಖ್ಯಾತ ನಟ