Trivikram: ಧನರಾಜ್ ಹುಟ್ಟುಹಬ್ಬಕ್ಕೆ ಕೈಯಲ್ಲೇ ಪತ್ರ ಬರೆದು ಸ್ಪೆಷಲ್ ವಿಶ್ ಮಾಡಿದ ತ್ರಿವಿಕ್ರಮ್
‘ಕೊಳಕು ಅಂಟದ ಬಿಳಿ ಹಾಳೆ ನೀನು. ದೇವರ ಮಗ ನೀನು. ನಿಮ್ಮ (ಹನುಮಂತ) ಗೆಳೆತನದ ಮೂಲಕ ದಕ್ಷಿಣ ಹಾಗೂ ಉತ್ತರ ಕರ್ನಾಟಕ ಒಂದು ಮಾಡಿದೀಯಾ. ನೀನು ಇರೋ ಕಡೆ ನಗುವಿಗೆ ಬರಗಾಲ ಇಲ್ಲ. ನಿನ್ನಿಂದ ಕಲಿತಿದ್ದು, ಕಲಿಬೇಕಿರೋದು ತುಂಬಾ ಇದೆ. ನೀನು ಕನ್ನಡ ಚಿತ್ರರಂಗದ ಬೇಡಿಕೆಯ ನಟ ಆಗ್ತೀಯಾ’ ಎಂದು ಧನರಾಜ್ಗೆ ತ್ರಿವಿಕ್ರಮ್ ಪತ್ರದಲ್ಲಿ ತಿಳಿಸಿದ್ದಾರೆ.

Trivikram Dhanraj Achar

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡು ತಿಂಗಳುಗಳು ಕಳೆದಿದೆ. ಆದರೆ, ಸ್ಪರ್ಧಿಗಳು ಈಗಲೂ ಟ್ರೆಂಡಿಂಗ್ನಲ್ಲಿದ್ದಾರೆ. ಫಿನಾಲೇ ಹಂತಕ್ಕೆ ಬಂದ ಸ್ಪರ್ಧಿಗಳೆಲ್ಲ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ನಿನ್ನೆ ಧನರಾಜ್ ಆಚಾರ್ ಅವರ ಹುಟ್ಟುಹಬ್ಬ ಆಗಿದೆ. ಧನು ಬರ್ತ್ ಡೇಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಇದರಲ್ಲಿ ಸ್ಪೆಷಲ್ ಅನಿಸಿದ್ದು ತ್ರಿವಿಕ್ರಮ್ ಮಾಡಿದ ವಿಶ್.
‘ಹೇ ಮಂಗಳೂರು ಹುಲಿ, ಧನು ಅಲಿಯಾಸ್ ಧನರಾಜ್. ಏನು ಹೇಳಲಿ ನಿನ್ನ ಬಗ್ಗೆ? ಬಿಗ್ ಬಾಸ್ ಮನೇನೇ ಟ್ರೋಲ್ ಮಾಡಿದವನು. ನಾನು ಅಂದುಕೊಂಡ ಗಾದೆ ಸುಳ್ಳು ಮಾಡಿದವನು. ಮೂರ್ತಿನೂ ದೊಡ್ಡದು, ಕೀರ್ತಿನೂ ದೊಡ್ಡದು. ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನು ನೋಡಿ ಯಾರಲೇ ಇವನು (ನಿರ್ಲಕ್ಷ್ಯದಿಂದ) ಎನ್ನುತ್ತಿದ್ದವರೆಲ್ಲ, ಯಾರಲೇ ಇವನು (ಅಚ್ಚರಿಯಿಂದ) ಎಂದು ಹೇಳುವಂತೆ ಮಾಡಿದವನು’ ಎಂದು ಧನು ಬಗ್ಗೆ ಹಾಡಿಹೊಗಳಿದ್ದಾರೆ.
‘ನೀನು ನಿನ್ನನ್ನು ಜಿಂಕೆಗೆ ಯಾಕೆ ಹೋಲಿಕೆ ಮಾಡಿಕೊಳ್ಳುತ್ತಿದ್ದೆ ಅನ್ನೋದು ಗೊತ್ತಿರಲಿಲ್ಲ. ಆದರೆ, ಅದನ್ನು ಫ್ಯಾಮಿಲಿ ರೌಂಡ್ನಲ್ಲಿ ನೋಡಿದಾಗ ಗೊತ್ತಾಯ್ತು. ಪುತ್ತೂರಲ್ಲಿ ಜಿಂಕೆ ಬಿಡಾರವೇ ಇದೆ. ಮನಸ್ಸಿಂದ, ವಯಸ್ಸಲ್ಲಿ, ಕ್ಯಾರೆಕ್ಟರ್ನಲ್ಲಿ ದೊಡ್ಡವನು, ಮನಸ್ಸಿಂದ ಇನ್ನೂ ದೊಡ್ಡವನು. ಎಲ್ಲರ ಎದುರು ಚಿಕ್ಕವನಂತೆ ಇದ್ದು ಎಲ್ಲರ ಮನಸ್ಸು ಗೆದ್ದಿದೀಯಾ. ಸಿಂಪಲ್ ಆಗಿ ಎಂಟ್ರಿ ಕೊಟ್ಟೆ, ಎಕ್ಸಿಟ್ ಮಾತ್ರ ಸೂಪರ್’ ಎಂದು ಹೇಳಿದ್ದಾರೆ.
‘ಕೊಳಕು ಅಂಟದ ಬಿಳಿ ಹಾಳೆ ನೀನು. ದೇವರ ಮಗ ನೀನು. ನಿಮ್ಮ (ಹನುಮಂತ) ಗೆಳೆತನದ ಮೂಲಕ ದಕ್ಷಿಣ ಹಾಗೂ ಉತ್ತರ ಕರ್ನಾಟಕ ಒಂದು ಮಾಡಿದೀಯಾ. ನೀನು ಇರೋ ಕಡೆ ನಗುವಿಗೆ ಬರಗಾಲ ಇಲ್ಲ. ನಿನ್ನಿಂದ ಕಲಿತಿದ್ದು, ಕಲಿಬೇಕಿರೋದು ತುಂಬಾ ಇದೆ. ನೀನು ಕನ್ನಡ ಚಿತ್ರರಂಗದ ಬೇಡಿಕೆಯ ನಟ ಆಗ್ತೀಯಾ’ ಎಂದು ಧನರಾಜ್ಗೆ ತ್ರಿವಿಕ್ರಮ್ ಪತ್ರದಲ್ಲಿ ತಿಳಿಸಿದ್ದಾರೆ.
ಇದಕ್ಕೆ ರಿಪ್ಲೇ ಕೊಟ್ಟಿರುವ ಧನರಾಜ್ ಆಚಾರ್, ‘‘ಈ ಭಾಂದವ್ಯನ ಪಡೆದಿರೋದಕ್ಕೆ ನಾನು ನಿಜಕ್ಕೂ ಪುಣ್ಯ ಮಾಡಿದ್ದೆ ಮಾಸ್ಟರ್.. ಈ ಪತ್ರ ನನ್ನ ಹುಟುಹಬ್ಬಕ್ಕೆ ಸಿಕ್ಕ ತುಂಬಾ ತುಂಬಾ ವಿಶೇಷ ಪತ್ರ.. ಇದು ಹೃದಯದಿಂದ ಬರೆದ ಪತ್ರ ನನ್ನ ಹೃದಯ ತಲುಪಿತು ಮಾಸ್ಟರ್ ನಿಮ್ಮ ಬರವಣಿಗೆ ಅದು ಮನಸ್ಸಿನ ಮೆರವಣಿಗೆ.. ನನ್ನ ಆರಾಧ್ಯ ದೇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ನಿಮಗೆ ಮತ್ತು ಅಮ್ಮ ಇಬ್ಬರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ. ಈ ಭಾಂದವ್ಯ ಇದ್ದೂ ಜೀವನ ಪೂರ್ತಿ ಹೀಗೆ ಇರುವ ಲವ್ ಯು ಮಾಸ್ಟರ್. ನನಗೋಸ್ಕರ ಎಷ್ಟು ಚಂದದ ಪತ್ರ ಕಳಿಸಿ ಈ ಹುಟ್ಟುಹಬ್ಬವನ್ನ ಇನ್ನಷ್ಟು ಚಂದ ಮಾಡಿದ್ದಕ್ಕೆ ಧನ್ಯೋಸ್ಮಿ. ನಿಮ್ಮ ಕೆಲಸದ ಒತ್ತಡದ ನಡುವೆಯೂ ನನಗಾಗಿ ನೀವು ಕೊಟ್ಟ ಸಮಯಕ್ಕೆ ನಾನೆಂದಿಗೂ ನಿಮಗೆ ಋಣಿಯಾಗಿರುವೆ’’ ಎಂದು ಧನರಾಜ್ ಹೇಳಿದ್ದಾರೆ.
Bhagya Lakshmi Serial: ಶ್ರೇಷ್ಠಾ ಮಾಡಿರೋ ಮಾಸ್ಟರ್ ಪ್ಲ್ಯಾನ್ಗೆ ಬಲಿಯಾಗ್ತಾಳ ಭಾಗ್ಯ?