Anusha Rai: ಅನುಷಾ ರೈಯಿಂದ ಗ್ರ್ಯಾಂಡ್ ಬರ್ತ್ ಡೇ ಪಾರ್ಟಿ: ಯಾರೆಲ್ಲ ಬಂದಿದ್ರು ನೋಡಿ
ಬೆಂಗಳೂರಿನ ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಅನುಷಾ ರೈ ಅವರ ಬರ್ತ್‌ಡೇ ಪಾರ್ಟಿ ಗ್ರ್ಯಾಂಡ್ ಆಗಿ ನಡೆದಿದೆ. ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ, ಧನರಾಜ್ ಆಚಾರ್, ಭವ್ಯಾ ಗೌಡ, ಗೋಲ್ಡ್ ಸುರೇಶ್, ರಂಜಿತ್ ಹಾಗೂ ಭಾವಿ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಬಂದಿದ್ದರು.

Anusha Rai Birthday

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದ ಬಳಿಕ ಬಹುತೇಕ ಹೆಚ್ಚಿನ ಸ್ಪರ್ಧಿಗಳು ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹೆಚ್ಚಿನವರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ಅನುಷಾ ರೈ ಮಾತ್ರ ಹೆಚ್ಚೇನು ಕಾಣಿಸಿಕೊಂಡಿಲ್ಲ. ಒಮ್ಮೆ ಮಹಾಕುಂಭ ಮೇಳಕ್ಕೆ ತೆರಳಿ ಸುದ್ದಿಯಾಗಿದ್ದರು. ಬಳಿಕ ನಟಿ, ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆದು ಬಂದಿದ್ದರು. ಇದೀಗ ಗ್ರ್ಯಾಂಡ್ ಆಗಿ ಬರ್ತ್ ಡೇ ಆಚರಣೆ ಮಾಡಿ ಸುದ್ದಿಯಲ್ಲಿದ್ದಾರೆ.
ಬೆಂಗಳೂರಿನ ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಅನುಷಾ ರೈ ಅವರ ಬರ್ತ್‌ಡೇ ಪಾರ್ಟಿ ಗ್ರ್ಯಾಂಡ್ ಆಗಿ ನಡೆದಿದೆ. ಅನುಷಾ ರೈ ಬರ್ತ್‌ಡೇ ಪಾರ್ಟಿಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಮಾತ್ರವಲ್ಲದೆ ಕನ್ನಡ ತಾರೆಯರು ಕೂಡ ಭಾಗವಹಿಸಿ ಶುಭಕೋರಿದರು. ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಕೂಡ ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.
ವಿಶೇಷ ಎಂದರೆ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ, ಧನರಾಜ್ ಆಚಾರ್, ಭವ್ಯಾ ಗೌಡ, ಗೋಲ್ಡ್ ಸುರೇಶ್, ರಂಜಿತ್ ಹಾಗೂ ಭಾವಿ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಬಂದಿದ್ದರು. ಪಾರ್ಟಿಗೆ ಪ್ರಥಮ್ ಸಹ ಆಗಮಿಸಿದ್ದರು. ಅನುಷಾ ರೈಗಾಗಿ ಕ್ರಶ್ ಆಫ್ ಕರ್ನಾಟಕ ಅಂತ ಕೇಕ್ ಮೇಲೆ ಅಭಿಮಾನಿಗಳು ಬರೆದು ತಂದಿದ್ದು ವಿಶೇಷವಾಗಿತ್ತು.
ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಗುರುತಿಸಿಕೊಂಡಿರುವ ಅನುಷಾ ರೈ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ ಮಹಾನುಭಾವರು ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
Karna Serial: ಕರ್ಣ ಧಾರಾವಾಹಿಯ ಎರಡನೇ ಪ್ರೊಮೋ ರಿಲೀಸ್: ಭವ್ಯಾ ಗೌಡ ಕಂಡು ಥ್ರಿಲ್ ಆದ ಫ್ಯಾನ್ಸ್