ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Holi 2025: ಶಿಶಿರ್ ಕೆನ್ನೆಗೆ ಮುತ್ತಿಟ್ಟು ಹೋಳಿ ಹಬ್ಬ ಆಚರಿಸಿದ ಐಶ್ವರ್ಯಾ ಸಿಂಧೋಗಿ, ಗೌತಮಿ ಮನೆಯಲ್ಲೂ ಸಂಭ್ರಮ

ಹೋಳಿ ಹಬ್ಬದ ಸಂಭ್ರಮದಲ್ಲಿ ಐಶ್ವರ್ಯಾ ಸಿಂಧೋಗಿ, ಶಿಶಿರ್ ಜೋಡಿ ರೀಲ್ಸ್ವೊಂದನ್ನು ಶೇರ್ ಮಾಡಿಕೊಂಡಿದೆ. ಇದೇ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೆಯೆ ಬಿಗ್ ಬಾಸ್ನಿಂದ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರುವ ಗೌತಮಿ ಜಾಧವ್ ಕೂಡ ಹೋಳಿ ಹಬ್ಬವನ್ನು ಆಚರಿಸಿದ್ದಾರೆ.

ಶಿಶಿರ್ ಕೆನ್ನೆಗೆ ಮುತ್ತಿಟ್ಟು ಹೋಳಿ ಹಬ್ಬ ಆಚರಿಸಿದ ಐಶ್ವರ್ಯಾ ಸಿಂಧೋಗಿ

Bigg Boss Holi 2025

Profile Vinay Bhat Mar 15, 2025 2:28 PM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದು ತಿಂಗಳು ಕಳೆದಿವೆ. ಆದರೆ, ಸ್ಪರ್ಧಿಗಳ ಹವಾ ಮಾತ್ರ ಇನ್ನೂ ಕಮ್ಮಿ ಆಗಿಲ್ಲ. ಬಿಬಿಕೆ 11 ಕಂಟೆಸ್ಟೆಂಟ್ ಎಲ್ಲೇ ಕಂಡರೂ ಅಭಿಮಾನಿಗಳು ಸುತ್ತುವರಿಯುತ್ತಿದ್ದಾರೆ. ಅಲ್ಲದೆ ಹೆಚ್ಚಿನ ಸ್ಪರ್ಧಿಗಳು ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಬಿಬಿಕೆ 11 ನಲ್ಲಿ ಲವ್ ಬರ್ಡ್ಸ್​ನಂತೆ ಕಾಣಿಸಿಕೊಂಡ ಜೋಡಿ ಎಂದರೆ ಅದು ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರೀ. ಮನೆಯಿಂದ ಹೊರಬಂದ ಬಳಿಕ ಇವರಿಬ್ಬರೂ ಸಂದರ್ಶನದಲ್ಲಿ ನಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿದರೂ ಇತ್ತೀಚಿನ ರೀಲ್ಸ್ ನೋಡಿದಾಗ ಅದು ಆರೀತಿ ಕಾಣಿಸುತ್ತಿಲ್ಲ.

ಐಶ್ವರ್ಯಾ ಹಾಗೂ ಶಿಶಿರ್ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅನೇಕ ಕಡೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಜೊತೆಯಾಗಿ ಹೆಚ್ಚು ಹೆಚ್ಚು ರೀಲ್ಸ್ ಕೂಡ ಮಾಡುತ್ತಾ ಇರುತ್ತಾರೆ. ಇದೀಗ ಹೋಳಿ ಹಬ್ಬದ ಸಂಭ್ರಮದಲ್ಲಿ ಈ ಜೋಡಿ ರೀಲ್ಸ್​ವೊಂದನ್ನು ಶೇರ್ ಮಾಡಿಕೊಂಡಿದೆ. ಇದೇ ರೀಲ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಹೋಳಿ ಹಬ್ಬದ ದಿನವೇ ಈ ಕ್ಯೂಟ್​ ರೀಲ್ಸ್​ ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಎಂದರೆ ಈ ವಿಡಿಯೋದಲ್ಲಿ ಶಿಶಿರ್​ ಅವರ ಕೆನ್ನೆಗೆ ಐಶ್ವರ್ಯಾ ಮುತ್ತು ಕೊಟ್ಟಿದ್ದಾರೆ. ನೀಲಿ ಬಣ್ಣದ ಗೌನ್​ನಲ್ಲಿ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ ಐಶೂ. ಈ ವಿಡಿಯೋ ಜೊತೆಗೆ ವಸಂತ ಮಾಸವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಹೋಳಿ ಹಬ್ಬವು ನಿಮ್ಮೆಲ್ಲರ ಬದುಕಲ್ಲೂ ಪ್ರೀತಿ, ಸ್ನೇಹ, ಹರುಷದ ಬಣ್ಣಗಳು ಸದಾ ಹೊನಲಾಗಿಸಲಿ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೆ ಐಶ್ವರ್ಯ ಅವರು ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಸದ್ಯಕ್ಕಂತೂ ಮದುವೆಯಾಗುವ ಯೋಚನೆ ಇಲ್ಲ ಎಂದು ಹೇಳಿದ್ದರು. ಆದರೆ, ಒಳ್ಳೆಯ ಗುಣಗಳಿರುವ ಹುಡುಗ ಹಾಗೂ ತನ್ನನ್ನು ಕಾಳಜಿ ಮಾಡುವವ ಸಿಗಬೇಕು. ಅಲ್ಲದೇ, ಗೌರವ ಕೊಡುವವನಾಗಿರಬೇಕು. ಅಂತಹ ಹುಡುಗ ಸಿಕ್ಕರೆ ಮದುವೆಯಾಗುವೆ ಎಂದು ಹೇಳಿದ್ದಾರೆ.

ಇನ್ನು ಬಿಗ್ ​ಬಾಸ್​ನಿಂದ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರುವ ಗೌತಮಿ ಜಾಧವ್ ಕೂಡ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಗೌತಮಿ ಜಾಧವ್​, ಪತಿ ಅಭಿಷೇಕ್ ಹಾಗೂ ಸ್ನೇಹಿತರ ಜೊತೆಗೆ ಹೋಳಿ ಹಬ್ಬದಲ್ಲಿ ಮಿಂದೆದ್ದಿದ್ದಾರೆ. ​ಮುಖಕ್ಕೆ ಬಣ್ಣವನ್ನು ಹಚ್ಚಿಕೊಂಡ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಸದ್ಯ ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Bhagya Lakshmi Serial: ಗುಂಡಣ್ಣ ಶೂ ಪಾಲೀಶ್ ಮಾಡೋದನ್ನು ನೋಡಿದ ತಾಂಡವ್