Chaithra Kundapura Marriage: ತಾಳಿ ಕಟ್ಟುವಾಗ ಕಣ್ಣೀರಿಟ್ಟ ಚೈತ್ರಾ ಕುಂದಾಪುರ: ವಿಡಿಯೋ ನೋಡಿ
ಚೈತ್ರಾ ಕುಂದಾಪುರ ಮದುವೆಗೆ ಧನರಾಜ್ ಆಚಾರ್, ಗೋಲ್ಡ್ ಸುರೇಶ್, ರಜತ್ ಕಿಶನ್ ಹಾಗೂ ಅವರ ಪತ್ನಿ ಹಾಜರಿದ್ದರು. ಚೈತ್ರಾ ಅವರು ತಾಳಿ ಕಟ್ಟುವ ವೇಳೆ ಭಾವುಕರಾದ ಘಟನೆ ಕೂಡ ನಡೆಯಿತು. ಶ್ರೀಕಾಂತ್ ತಾಳಿ ಕಟ್ಟುವ ಸಂದರ್ಭ ಚೈತ್ರಾ ಕಣ್ಣೀರು ಹಾಕಿದ ವಿಡಿಯೋ ಈಗ ವೈರಲ್ ಆಗುತ್ತಿದೆ.

Chaithra kundapura Marriage

ಬಿಗ್ ಬಾಸ್ ಸೀಸನ್ 11ರ ಮೂಲಕ ಸಾಕಷ್ಟು ಜನಪ್ರಿಯರಾದ ಚೈತ್ರಾ ಕುಂದಾಪುರ (Chaithra Kundapura) ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ಪ್ರೀತಿಸಿದ ಹುಡುಗ ಶ್ರೀಕಾಂತ್ ಕಶ್ಯಪ್ ಅವರನ್ನೇ ಎಲ್ಲರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ನಿನ್ನೆಯ ವರೆಗೆ ಚೈತ್ರಾ ಕುಂದಾಪುರ ಮದುವೆ ಆಗುವ ವಿಚಾರ ಅಧಿಕೃತವಾಗಿ ಯಾರಿಗೂ ತಿಳಿದಿರಲಿಲ್ಲ. ಆದರೆ, ನಿನ್ನೆ ರಾತ್ರಿ ಪ್ರೀ ವೆಡ್ಡಿಂಗ್ ವಿಡಿಯೋ ಶೂಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಮದುವೆ ಬಗ್ಗೆ ಮಾಹಿತಿ ನೀಡಿ ಹುಡುಗ ಯಾರು ಎಂಬ ವಿಚಾರವನ್ನೂ ರಿವೀಲ್ ಮಾಡಿದರು.
ಚೈತ್ರಾ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರದ್ದು 12 ವರ್ಷದ ಲವ್ ಸ್ಟೋರಿ. ಕಾಲೇಜಿನಲ್ಲಿ ಲವ್ ಶುರುವಾಗಿದ್ದು ಎಂಬ ವಿಚಾರವನ್ನು ಚೈತ್ರಾ ಹೇಳಿದ್ದಾರೆ. ಮದುವೆಗೆ ಧನರಾಜ್ ಆಚಾರ್, ಗೋಲ್ಡ್ ಸುರೇಶ್, ರಜತ್ ಕಿಶನ್ ಹಾಗೂ ಅವರ ಪತ್ನಿ ಹಾಜರಿದ್ದರು. ಚೈತ್ರಾ ಅವರು ತಾಳಿ ಕಟ್ಟುವ ವೇಳೆ ಭಾವುಕರಾದ ಘಟನೆ ಕೂಡ ನಡೆಯಿತು. ಶ್ರೀಕಾಂತ್ ತಾಳಿ ಕಟ್ಟುವ ಸಂದರ್ಭ ಚೈತ್ರಾ ಕಣ್ಣೀರು ಹಾಕಿದ ವಿಡಿಯೋ ಈಗ ವೈರಲ್ ಆಗುತ್ತಿದೆ.
ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಒಂದೇ ಕಾಲೇಜಿನಲ್ಲಿ ಓದಿದವರು. ಕಾಲೇಜು ದಿನಗಳಿಂದಲೂ ಇಬ್ಬರ ಮಧ್ಯೆ ಪ್ರೀತಿ ಇದೆ. ಈ ವಿಚಾರವನ್ನು ಸ್ವತಃ ಚೈತ್ರಾ ಅವರೇ ಖಚಿತಪಡಿಸಿದ್ದಾರೆ. ಶ್ರೀಕಾಂತ್ ಕಶ್ಯಪ್ ಆನಿಮೇಷನ್ ಓದಿದ್ದಾರೆ. ಆನಿಮೇಷನ್ ಓದಿದ್ದರೂ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಶ್ರೀಕಾಂತ್ ಪರಿಣಿತಿ ಪಡೆದಿದ್ದಾರೆ. ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಉಡುಪಿಯ ಸ್ಥಳೀಯ ನ್ಯೂಸ್ ಚಾನೆಲ್‌ನಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ನ್ಯೂಸ್ ಚಾನೆಲ್‌ನಲ್ಲಿ ಚೈತ್ರಾ ಕುಂದಾಪುರ ಆಂಕರ್ ಆಗಿದ್ದರೆ, ಶ್ರೀಕಾಂತ್ ಕಶ್ಯಪ್ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಪೂರ್ಣಗೊಂಡ ಬಳಿಕವೇ ವಿವಾಹ ಆಗುವ ಆಲೋಚನೆಯಲ್ಲಿ ಇದ್ದರು. ಆದರೆ, ಆಗ ಅವರಿಗೆ ಬಾಯ್ಸ್ vs ಗರ್ಲ್ಸ್ ಶೋನ ಆಫರ್ ಬಂತು. ಇದನ್ನು ಒಪ್ಪಿದ್ದರಿಂದ ಪ್ರತಿ ವಾರ ಈ ಶೋನ ಶೂಟ್ಗೆ ಅವರು ಹೋಗಬೇಕಿತ್ತು. ಈ ಕಾರಣಕ್ಕೆ ವಿವಾಹ ವಿಳಂಬ ಆಯಿತು. ಈಗ ಇವರು ಎಲ್ಲಾ ಜವಾಬ್ದಾರಿಗಳನ್ನು ಪೂರ್ಣಗೊಳಿಸಿಕೊಂಡಿದ್ದು, ವಿವಾಹ ಆಗಿದ್ದಾರೆ.
Bhagya Lakshmi Serial: ತಾಂಡವ್ನ ಗ್ರಹಚಾರ ಬಿಡಿಸಿದ ಕುಸುಮಾ: ಕ್ಯಾಂಟೀನ್ನಲ್ಲೇ ಅವಮಾನ