Kiran Raj: ಇತ್ತ ಧಾರಾವಾಹಿ.. ಅತ್ತ ಸಿನಿಮಾ: ಹಿರಿತೆರೆ-ಕಿರುತೆರೆಯಲ್ಲಿ ಫುಲ್ ಬ್ಯುಸಿಯಾದ ಕಿರಣ್ ರಾಜ್
Kiran Raj New Movie: ಕರ್ಣ ಧಾರಾವಾಹಿಯ ಜೊತೆಗೆ ಹೊಸ ಸಿನಿಮಾದಲ್ಲಿ ಕಿರಣ್ ನಟಿಸುತ್ತಿದ್ದಾರೆ. ಈ ಹಿಂದೆ ರಾನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕಿರಣ್ ರಾಜ್ ಈಗ ‘ಜಾಕಿ 42’ ಅನ್ನೋ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ.

Kiran Raj New Movie

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟ ಕಿರಣ್ ರಾಜ್ಗೆ (Kiran Raj) ದೊಡ್ಡ ಅಭಿಮಾನಿಗಳ ಬಳಗವಿದೆ. 2020 ಜನವರಿಯಲ್ಲಿ ಶುರುವಾದ ಈ ಧಾರಾವಾಹಿಯು 2023ರಲ್ಲಿ ಮುಕ್ತಾಯಗೊಂಡರೂ ಇಂದಿಗೂ ಹರ್ಷ ಪಾತ್ರ ಹಸಿರಾಗಿದೆ. ಇವರ ಸ್ಟೈಲ್, ಮಾತುಗಾರಿಕೆಗೆ ಅನೇಕ ಮಂದಿ ಫ್ಯಾನ್ಸ್ ಇದ್ದಾರೆ. ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ ಹಿರಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಯಶಸ್ಸು ತಂದುಕೊಟ್ಟಿದ್ದು ಸೀರಿಯಲ್. ಹೀಗಿದ್ದರೂ ಇವರು ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿಲ್ಲ.
ಇದರ ಮಧ್ಯೆ ಮೊನ್ನೆಯಷ್ಟೆ ಕಿರಣ್ ರಾಜ್ ಕಿರುತೆರೆಗೆ ಎಂಟ್ರಿ ಕೊಡುವ ಬಗ್ಗೆ ಘೋಷಿಸಿದರು. ಕಿರಣ್ ಸದ್ಯ ಹೊಸ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಕಲರ್ಸ್ ಕನ್ನಡದ ಬದಲು ಝೀ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕರ್ಣನಾಗಿ ಮತ್ತೆ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಅವರು ಸಜ್ಜಾಗಿದ್ದಾರೆ. ಝೀ ಕನ್ನಡ ವಾಹಿನಿಯು ಹೊಸ ಧಾರಾವಾಹಿಯನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ. ಈಗಾಗಲೇ ಹೊಸ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಯಾಗಿದ್ದು ಅದ್ಭುತ ಪ್ರತಿಕ್ರಿಯೆ ಕೇಳಿಬಂದಿದೆ.
ಝೀ ಕನ್ನಡ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಅಪ್ ಲೋಡ್ ಆಗಿರುವ ಈ ಪ್ರೋಮೋ ಈಗಾಗಲೇ ದಾಖಲೆಯ ವೀವ್ಸ್ ಪಡೆದಿದೆ. ಈ ಖಷಿಯ ಜೊತೆಗೆ ಕಿರಣ್ ರಾಜ್ ಮತ್ತೊಂದು ಹ್ಯಾಪಿ ನ್ಯೂಸ್ ಕೂಡ ನೀಡಿದ್ದಾರೆ. ಕರ್ಣ ಧಾರಾವಾಹಿಯ ಜೊತೆಗೆ ಹೊಸ ಸಿನಿಮಾದಲ್ಲಿ ಕಿರಣ್ ನಟಿಸುತ್ತಿದ್ದಾರೆ. ಈ ಹಿಂದೆ ರಾನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕಿರಣ್ ರಾಜ್ ಈಗ ‘ಜಾಕಿ 42’ ಅನ್ನೋ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ.
View this post on Instagram A post shared by Kiran Raj (@itskiranraj)
ಜಾಕಿಯೊಬ್ಬ ಕುದುರೆ ಸವಾರಿ ಮಾಡುತ್ತಿರುವ ಪೋಸ್ಟರ್ ಇದ್ದಾಗಿದ್ದು, ಜೊತೆಗೆ ಒಂದಷ್ಟು ನೋಟಿನ ಕಂತೆಗಳನ್ನು ಪೋಸ್ಟರ್‌ನಲ್ಲಿ ಕಾಣಬಹುದಾಗಿದೆ. ವಿಶೇಷ ಎಂದರೆ ರಾನಿ ಸಿನಿಮಾವನ್ನು ನಿರ್ದೇಶಿಸಿದ್ದ ಗುರುತೇಜ್ ಶೆಟ್ಟಿ ಅವರೇ ಈ ಜಾಕಿ 42 ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೆಯೆ ಈ ಸಿನಿಮಾಗೆ ಉತ್ತಮ ಬರಹಗಾರರ ತಂಡ ಕೈಜೋಡಿಸಿದೆ. ಬ್ಲಿಂಕ್ ಸಿನಿಮಾದ ಮೂಲಕ ಎಲ್ಲರ ಗಮನಸೆಳೆದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಈ ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ಜೊತೆಯಾಗಿದ್ದಾರೆ. ಕನ್ನಡತಿ ಧಾರಾವಾಹಿಗೆ ಚಿತ್ರಕಥೆ ಬರೆದಿದ್ದ ವಿಕಾಸ್ ನೇಗಿಲೋಣಿ ಕೂಡ ಸ್ಕ್ರಿಪ್ಟ್ ಬರಹಗಾರರ ಟೀಮ್‌ನಲ್ಲಿದ್ದಾರೆ.
ಕಿರಣ್ ರಾಜ್ ಅವರು ಈಗಾಗಲೇ ಭರ್ಜರಿ ಗಂಡು, ರಾನಿ, ಮೇಘ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಟಿಸಿದ್ದಾರೆ. ಇದೀಗ ಮಗದೊಂದು ಹೊಸ ಸಿನಿಮಾ, ಹೊಸ ಪಾತ್ರದ ಮೂಲಕ ಬರಲು ತಯಾರಾಗಿದ್ದಾರೆ. ಏಕಕಾಲಕ್ಕೆ ಸೀರಿಯಲ್ ಹಾಗೂ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಹೊರಹಾಕಿರುವ ಕಿರಣ್ ರಾಜ್ ಇವೆರಡನ್ನೂ ಯಾವ ರೀತಿಯಲ್ಲಿ ಬ್ಯಾಲೆನ್ಸ್ ಮಾಡುತ್ತಾರೆ ಎಂಬುದು ನೋಡಬೇಕಿದೆ.
Dharma KeerthiRaj: ಬಿಗ್ ಬಾಸ್ನಿಂದ ಹೊರಬಂದ ಬಳಿಕ ಮೊದಲ ಬಾರಿ ಗುಡ್ ನ್ಯೂಸ್ ಕೊಟ್ಟ ಧರ್ಮ ಕೀರ್ತಿರಾಜ್