ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maja Talkies: ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ದಿಢೀರ್ ಮುಕ್ತಾಯ: ಕಾರಣವೇನು?

ಈ ಬಾರಿಯ ಮಜಾ ಟಾಕೀಸ್ ಬರೀ ಹೊಸಬರಿಂದಲೇ ಕೂಡಿತ್ತು. ಕುರಿ ಪ್ರತಾಪ್ ಮತ್ತು ಸೃಜನ್ ಲೊಕೇಶ್ ಬಿಟ್ಟರೆ ಮತ್ಯಾರು ಹಳಬರು ಇರಲಿಲ್ಲ. ಮುತ್ತುಮಣಿ ಕ್ಯಾರೆಕ್ಟನ್ ಮಾಡುತ್ತಿದ್ದ ತರಂಗ ವಿಶ್ವ ಕೂಡ ಅರ್ಧಕ್ಕೆ ಶೋನಿಂದ ಹೊರಬಂದಿದ್ದರು. ಉಳಿದಂತೆ ತುಕಾಲಿ ಸಂತೋಷ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿದಂತೆ ಹೊಸಬರೇ ಮಜಾ ಮನೇಲಿದ್ದರು.

ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ದಿಢೀರ್ ಮುಕ್ತಾಯ

Maja Talkies

Profile Vinay Bhat May 30, 2025 4:59 PM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ವೀಕೆಂಡ್​ನಲ್ಲಿ ಎರಡು ಹೊಸ ಶೋ ಆರಂಭವಾಯಿತು. ಒಂದು ಬಾಯ್ಸ್ vs ಗರ್ಲ್ಸ್ ಮತ್ತೊಂದು ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್. ಬಾಯ್ಸ್ vs ಗರ್ಲ್ಸ್ ಶೋಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿರಲಿಲ್ಲ, ಟಿಆರ್​ಪಿ ಕೂಡ ಬರುತ್ತಿರಲಿಲ್ಲ. ಹೀಗಾಗಿ ಇತ್ತೀಚೆಗಷ್ಟೆ ಈ ಶೋನ ಮುಗಿಸಲಾಯಿತು. ಇದೀಗ ದಿಢೀರ್ ಆಗಿ ಮಜಾ ಟಾಕೀಸ್ ಕೂಡ ಕೊನೆಗೊಳ್ಳಲಿದೆ. ಈ ವಾರ ಮಜಾ ಟಾಕೀಸ್ ಫಿನಾಲೆ ವೀಕ್ ಎಂದು ಕಲರ್ಸ್ ಕನ್ನಡ ಅಧಿಕೃತವಾಗಿ ಪ್ರಕಟಿಸಿದೆ. ಈ ಮೂಲಕ ಜನರನ್ನು ಇಷ್ಟುದಿನ ನಗಿಸುತ್ತಿದ್ದ ಶೋ ಅಂತ್ಯವಾಗಲಿದೆ.

ಈ ಬಾರಿಯ ಮಜಾ ಟಾಕೀಸ್ ಬರೀ ಹೊಸಬರಿಂದಲೇ ಕೂಡಿತ್ತು. ಕುರಿ ಪ್ರತಾಪ್ ಮತ್ತು ಸೃಜನ್ ಲೊಕೇಶ್ ಬಿಟ್ಟರೆ ಮತ್ಯಾರು ಹಳಬರು ಇರಲಿಲ್ಲ. ಮುತ್ತುಮಣಿ ಕ್ಯಾರೆಕ್ಟನ್ ಮಾಡುತ್ತಿದ್ದ ತರಂಗ ವಿಶ್ವ ಕೂಡ ಅರ್ಧಕ್ಕೆ ಶೋನಿಂದ ಹೊರಬಂದಿದ್ದರು. ಉಳಿದಂತೆ ತುಕಾಲಿ ಸಂತೋಷ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿದಂತೆ ಹೊಸಬರೇ ಮಜಾ ಮನೇಲಿದ್ದರು. ಅಲ್ಲದೆ ಇಂದ್ರಜಿತ್ ಲಂಕೇಶ್ ಇಜಿಲ-ಸೃಜನ್ ಕಾಂಬಿನೇಷನ್ ಕೂಡ ಇರಲಿಲ್ಲ. ಇವರ ಜಾಗಕ್ಕೆ ಯೋಗರಾಜ್ ಭಟ್ ಬಂದಿದ್ದರು.

ಫೆಬ್ರವರಿಯಲ್ಲಿ ಮಜಾ ಟಾಕೀಸ್ ಶೋ ಆರಂಭ ಆಗಿತ್ತು. ಈಗ ಈ ಶೋ ದಿಢೀರ್ ಕೊನೆ ಆಗುತ್ತಿರುವುದು ಯಾಕೆ ಎಂಬುದು ಬಹಿರಂಗವಾಗಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಜಾ ಟಾಕೀಸ್ ಕೊನೆಯಾಗುವ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ವಾಹಿನಿಯವರು ಮಾಹಿತಿ ನೀಡಿದ್ದಾರೆ.

ಮಜಾ ಟಾಕೀಸ್ ಫಿನಾಲೆ ವೀಕ್​ನಲ್ಲಿ ವಿಶೇಷ ಅತಿಥಿಗಳಾಗಿ ದೊಡ್ಡಣ್ಣ ಹಾಗೂ ಚಿಕ್ಕಣ್ಣ ಆಗಮಿಸಿದ್ದಾರೆ. ಈ ಪ್ರೊಮೋಗೆ ಮಜಾ ಟಾಕೀಸ್ ಗ್ರಾಂಡ್ ಫಿನಾಲೆ ಎನ್ನುವ ಕ್ಯಾಪ್ಶನ್ ಕೊಡಲಾಗಿದೆ.

ಮಜಾ ಟಾಕೀಸ್ ಮುಗಿದ ಬಳಿಕ ಕ್ವಾಟ್ಲೆ ಕಿಚನ್ ಹೆಸರಿನ ಹೊಸ ಶೋ ಬರಲಿದೆ. ಇದಕ್ಕೆ ಕುರಿ ಪ್ರತಾಪ್ ಹಾಗೂ ಅನುಪಮಾ ಗೌಡ ಅವರು ನಿರೂಪಕರಾಗಿ ಇರಲಿದ್ದಾರೆ. ಒಟ್ಟಿಗೆ ಇಬ್ಬರೂ ಈ ಒಂದು ಕ್ವಾಟ್ಲೆ ಕಿಚನ್ ಶೋ ನಡೆಸಿಕೊಡುತ್ತಾರೆ. ಇದೊಂದು ಪಕ್ಕಾ ಫನ್​ ಶೋ. ಜೊತೆಗೆ ರುಚಿ.. ರುಚಿ ಅಡುಗೆಯ ಗಮ್ಮತ್ತು ಕೂಡ ಇರಲಿದೆ. ಕ್ವಾಟ್ಲೆ ಕಿಚನ್ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಟೈಮ್​, ಡೇಟ್​ ಫಿಕ್ಸ್​ ಆಗಿಲ್ಲ.

Bhagya Lakshmi Serial: ಆದೀಶ್ವರ್ ಕಾರಿಗೆ ಕಲ್ಲು ಬಿಸಾಕಿ ಗಾಜು ಪುಡಿಪುಡಿ ಮಾಡಿದ ಕುಸುಮಾ